ETV Bharat / sukhibhava

ಬೆನ್ನು, ಭುಜ ನೋವಿಗೆ ಕಾರಣ ಕೆಟ್ಟ ಭಂಗಿ

ಇಂದಿನ ದಿನದಲ್ಲಿ ಹಲವಾರು ಗಂಟೆಗಳ ಕಾಲ ಕಂಪ್ಯೂಟರ್​ ಮುಂದೆ ಚೇರ್​ ಮೇಲೆ ಕುಳಿತುಕೊಳ್ಳುತ್ತೇವೆ. ಈ ವೇಳೆ ಕೂರುವ ಕೆಟ್ಟ ಭಂಗಿ ಸ್ನಾಯು, ಭುಜ, ಕುತ್ತಿಗೆ ಸೇರಿದಂತೆ ಹಲವು ನೋವಿಗೆ ಕಾರಣವಾಗುತ್ತದೆ.

Bad posture is the cause of back and shoulder pain

author img

By

Published : May 15, 2023, 10:33 AM IST

ದಿನ ಮುಗಿಯುವ ಹೊತ್ತಿಗೆ ಅನೇಕ ವೇಳೆ ಜನರು ಕುತ್ತಿಗೆ, ಭುಜ ಅಥವಾ ಬೆನ್ನಿನಲ್ಲಿ ಭಾರಿ ಒತ್ತಡ, ನೋವು, ಬಿಗಿತನ ಅನುಭವಿಸುತ್ತಾರೆ. ಇಲ್ಲವೇ, ಮೇಲೇಳುವಾಗ ಬೆನ್ನು ನೋವು ಅಥವಾ ಅಹಿತರಕರ ಅನುಭವ ಎದುರಿಸುತ್ತಾರೆ. ಈ ರೀತಿಯ ನೋವಿಗೆ ಕೆಟ್ಟ ಭಂಗಿಯೇ ಕಾರಣವಾಗುತ್ತದೆ.

ಮೂಳೆ ರೋಗ ತಜ್ಞರು ಮತ್ತು ಪಿಜಿಯೊಥೆರಪಿಸ್ಟ್​ ಪ್ರಕಾರ, ಕಳೆದ ಕೆಲವು ವರ್ಷಗಳಿಂದ ಜನರು ತಮ್ಮ ಜಡ ಜೀವನಶೈಲಿ ಮತ್ತು ಕೆಟ್ಟ ಭಂಗಿಯಿಂದ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಬೆನ್ನುಹುರಿ ಮೇಲಿನ ಒತ್ತಡ ಹೆಚ್ಚುತ್ತಿದೆ. ಇದರಿಂದ ಮೂಳೆ ಗಾಯ, ಸ್ನಾಯು ನೋವು, ಕುತ್ತಿಗೆ, ಭುಜ ಮತ್ತು ಸೊಂಟ ಬಿಗಿತನ ಸೇರಿದಂತೆ ಹಲವು ಸಮಸ್ಯೆಗಳನ್ನು ಅನುಭವಿಸುತ್ತಾರೆ.

ಈ ಕುರಿತು ಮಾತನಾಡಿರುವ ದೆಹಲಿಯ ವೈದ್ಯ ಡಾ.ರತನ್​ ತೊಮರ್​​, ಕಳೆದ ಹಲವು ವರ್ಷಗಳಿಂದ ಎಲ್ಲ ವಯೋಮಿತಿಯ ಜನರಲ್ಲಿ ಸ್ನಾಯು ನೀವು, ಬಿಗಿತನ, ಬೆನ್ನು, ಕುತ್ತಿಗೆ, ಭುಜದ ನೋವು ಹೆಚ್ಚುತ್ತಿದೆ. ಈ ಸಮಸ್ಯೆ ಹೇಳಿ ಬರುತ್ತಿರುವ ರೋಗಿಗಳಲ್ಲಿ ಶೇ 40ರಷ್ಟು ಮಂದಿ ಯುವ ಜನತೆ. ಕೆಟ್ಟ ಭಂಗಿ ಕಾರಣದಿಂದ ಅವರು ಬೆನ್ನು, ಭುಜದ ನೋವಿಗೆ ತುತ್ತಾಗುತ್ತಿದ್ದು, ಇದಕ್ಕಾಗಿ ಫಿಜಿಯೋಥೆರಪಿ ಮೊರೆ ಹೋಗುತ್ತಿದ್ದಾರೆ.

ಡೆಹ್ರಾಡೂನ್​ನ ಕೀಳು ಮೂಳೆ ತಜ್ಞ ಡಾ.ಹೇಮ್​ ಜೋಶಿ ಕೂಡ ಕೆಟ್ಟ ಭಂಗಿಯಿಂದಾಗಿ ಸ್ನಾಯು ಬಿಗಿತನ, ಭಜ, ಕುತ್ತಿಗೆ, ಬೆನ್ನು ನೋವಿನ ಸಮಸ್ಯೆಗೆ ಜನರು ಹೆಚ್ಚು ತುತ್ತಾಗುತ್ತಿದ್ದಾರೆ. ಇದನ್ನು ನಾವು ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ, ಮೂಳೆ ಮತ್ತು ಕೀಳುಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದ್ದಾರೆ.

ಕಂಪ್ಯೂಟರ್​ ಮುಂದೆ ಚೇರ್​ನಲ್ಲಿ ದೀರ್ಘಕಾಲ ಕುಳಿತುಕೊಳ್ಳುವ ಮಂದಿ ಈ ರೀತಿ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಕುರ್ಚಿ ಮೇಲೆ ಭಂಗಿ ಕುಳಿತುಗೊಳ್ಳುವುದರಿಂದ ಕುತ್ತಿಗೆ, ಭುಜ ಮತ್ತು ಬೆನ್ನು ಹುರಿ ಮೇಲೆ ಒತ್ತಡ ಬೀಳುತ್ತದೆ. ಇದರಿಂದಾಗಿ ಅವರು ಹೆಚ್ಚಿನ ನೋವು ಅನುಭವಿಸುತ್ತಾರೆ.

ಕನರು ಕುತ್ತಿಗೆ ಮತ್ತು ತಲೆ ಬಳಿ ಹೆಚ್ಚಿನ ಭಾರ ಅಥವಾ ನೋವು ಅನುಭವಿಸುತ್ತಾರೆ. ಕುಳಿತುಕೊಳ್ಳುವ ಕೆಟ್ಟ ಭಂಗಿಯ ಜೊತೆಗೆ ಮಲಗುವಾಗ ಬೀಳುವ ಒತ್ತಡ, ಹೆಚ್ಚಿನ ಭಾರ ಎತ್ತುವಿಕೆ, ಜಂಪಿಂಗ್​ ಅಥವಾ ಓಟದಿಂದಲೂ ಈ ಸಮಸ್ಯೆ ಕಾಡುತ್ತದೆ.

ಹಲವು ಸಮಸ್ಯೆಗಳು ಕಾರಣ: ಕೆಟ್ಟ ಭಂಗಿ ಹೊರತಾಗಿ ಮೂಳೆ ಮತ್ತು ಸ್ನಾಯುವಿನಲ್ಲಿನ ದುರ್ಬಲತೆ ಕೂಡ ಪರಿಣಾಮ ಬೀರುತ್ತದೆ. ವಿವಿಧ ರೀತಿ ಸಂಧಿವಾತ, ಸ್ಲಿಪ್​ ಡಿಸ್ಕ್​​ನಂಥ ಸಮಸ್ಯೆಗಳು ಈ ಸಮಸ್ಯೆ ಹೆಚ್ಚಿಸುತ್ತವೆ. ಇದರ ನಿವಾರಣೆ ಉತ್ತಮ ಡಯಟ್​, ಜೀವನಶೈಲಿ, ದೈಹಿಕ ಚಟುವಟಕೆ, ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆ ಅಗತ್ಯ.

ಇತ್ತೀಚಿನ ದಿನದಲ್ಲಿ ಡಯಟ್‌ನಲ್ಲಿ ಅಡೆತಡೆ ಗಮನಿಸಬಹುದಾಗಿದೆ. ಸರಿಯಾದ ರೀತಿ ಪೋಷಕಾಂಶಗಳು ಮೂಳೆ ಮತ್ತು ಸ್ನಾಯುವಿಕಗೆ ತೊರೆಯದಿದ್ದರೆ ಅವು ಬಲಗೊಳ್ಳುವುದಿಲ್ಲ. ಮೂಳೆಯ ಆರೋಗ್ಯ ಉತ್ತಮವಾಗಿರಲಿ, ಹೆಚ್ಚಿನ ಕ್ಯಾಲ್ಸಿಯಂ, ವಿಟಮಿನ್​ ಡಿ, ಮಿನರಲ್ಸ್​ ಸೇವನೆ ಅಗತ್ಯ. ಇದರ ಹೊರತಾಗಿ ನಿಯಮಿತ ವ್ಯಾಯಾಮ ಅವಶ್ಯಕ.

ಸರಿಯಾದ ಭಂಗಿಯನ್ನು ರೂಢಿಸಿಕೊಳ್ಳುವ ಜೊತೆಗೆ ಕೆಲವು ಮುನ್ನೆಚ್ಚರಿಕೆ ವಹಿಸುವುದರಿಂದ ಕೂಡ ಈ ರೀತಿಯ ಸಮಸ್ಯೆಯಿಂದ ದೂರಾಗಬಹುದು. ಇದಕ್ಕಾಗಿ ಕೆಲವು ಸಲಹೆಗಳು ಇಲ್ಲಿದೆ.

ಯಾವಾಗಲೂ ಪೋಷಕಾಂಶಭರಿತ ಆಹಾರ ಮತ್ತು ಹೆಚ್ಚಿನ ನೀರು ಸೇವಿಸಿ

ಯೋಗ, ವ್ಯಾಯಾಮ ಅಥವಾ ಕನಿಷ್ಠ ಸ್ಟ್ರೆಚಿಂಗ್​ ವ್ಯಾಯಾಮ ನಿಯಮಿತವಾಗಿ ಮಾಡಿ

ಯಾವಾಗಲೂ ಮುಂದಕ್ಕೆ ಬಾಗಿ, ಭುಜಗಳನ್ನು ಬಾಗಿಸಿ ಅಥವಾ ವಕ್ರ ಭಂಗಿಯಲ್ಲಿ ಕುಳಿತುಕೊಳ್ಳಬೇಡಿ. ಮಲಗಿರುವಾಗ ಮೊಬೈಲ್ ಪರದೆ ನೋಡುವುದನ್ನು ತಪ್ಪಿಸಿ.

ವಿಶೇಷವಾಗಿ, ಬೆನ್ನುಮೂಳೆ ಅಥವಾ ಬೆನ್ನು-ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವವರು ಮಲಗುವಾಗ ದಪ್ಪ ದಿಂಬನ್ನು ಬಳಸಬಾರದು.

ಸೊಂಟದ ಮೇಲೆ ಒತ್ತಡ ಅನುಭವಿಸಿದರೆ ಮುಂದಕ್ಕೆ ಬಾಗುವ ಬದಲು ನಿಮ್ಮ ಮೊಣಕಾಲುಗಳ ಮೇಲೆ ಕುಳಿತು ಭಾರವಾದ ವಸ್ತುಗಳನ್ನು ಎತ್ತಲು ಪ್ರಯತ್ನಿಸಿ.

ಇದನ್ನೂ ಓದಿ: ಸ್ಥೂಲಕಾಯ ವ್ಯಕ್ತಿಗಳಲ್ಲಿ ಕೋವಿಡ್​, ಬೂಸ್ಟರ್​ ಲಸಿಕೆ ಎಫೆಕ್ಟ್​​ ಬಲು ಬೇಗ ಇಳಿಕೆ: ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.