ಲಂಡನ್: ಹೊಸ ರಕ್ತ ಪರೀಕ್ಷೆಯ ಮೂಲಕ 50 ಕ್ಕೂ ಹೆಚ್ಚು ರೀತಿಯ ಕ್ಯಾನ್ಸರ್‌ಗಳನ್ನು ಪತ್ತೆ ಮಾಡಬಹುದಾದ ಅಧ್ಯಯನವೊಂದು ನಡೆದಿದೆ. ಈ ರಕ್ತ ಮಾದರಿ ಪರೀಕ್ಷೆ ಮೂಲಕ ಕ್ಯಾನ್ಸರ್ ರೋಗನಿರ್ಣಯವನ್ನು ತ್ವರಿತವಾಗಿ ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಇದರಿಂದ ತಕ್ಷಣಕ್ಕೆ ಚಿಕಿತ್ಸೆ ಕೂಡ ಆರಂಭಿಸಬಹುದು ಎಂಬ ಭರವಸೆಯನ್ನು ಈ ಅಧ್ಯಯನ ತಿಳಿಸಿದೆ. ಯುಕೆ ನ್ಯಾಷನಲ್ ಹೆಲ್ತ್ ಸರ್ವೀಸ್ ಅಧ್ಯಯನ ಮಾಡಿದ್ದು, ಈ ಪರೀಕ್ಷೆಯ ಪ್ರಯೋಗವೂ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಈ ರಕ್ತದ ಮಾದರಿ ಕುರಿತು 5000 ಮಂದಿ ಮೇಲೆ ಪರೀಕ್ಷೆ ನಡೆಸಲಾಗಿದ್ದು, ಪ್ರತಿ ಅಧ್ಯಯನದಲ್ಲಿ ಮೂರರಲ್ಲಿ ಎರಡು ಪರೀಕ್ಷೆಗಳ ಕ್ಯಾನ್ಸರ್ ಇರುವುದನ್ನು ಸರಿಯಾಗಿ ಪತ್ತೆ ಮಾಡಿದೆ ಎಂದು ಬಿಬಿಸಿ ವರದಿ ಮಾಡಿದೆ.
ಅಧ್ಯಯನದಲ್ಲಿ ಕ್ಯಾನ್ಸರ್ ಮೂಲವನ್ನು ಪತ್ತೆ ಮಾಡುವಲ್ಲಿ ಶೇಕಡಾ 85 ರಷ್ಟು ಸಕಾರಾತ್ಮಕ ಪ್ರಕರಣಗಳನ್ನು ಗುರುತಿಸಲಾಗಿದೆ. ಶಿಕಾಗೋದಲ್ಲಿ ನಡೆದ ಅಮೆರಿಕನ್ ಸೊಸೈಟಿ ಆಫ್ ಕ್ಲಿನಿಕಲ್ ಆಂಕೊಲಾಜಿಯ ವಾರ್ಷಿಕ ಸಭೆಯಲ್ಲಿ ಪ್ರಸ್ತುತಪಡಿಸಲಾಗಿದೆ. ಪರೀಕ್ಷೆಯಲ್ಲಿ ತಲೆ ಮತ್ತು ಕುತ್ತಿಗೆ, ಕರುಳು, ಶ್ವಾಸಕೋಶ, ಮೇದೋಜ್ಜೀರಕ ಗ್ರಂಥಿ ಮತ್ತು ಗಂಟಲಿನ ಕಷ್ಟಕರ ಕ್ಯಾನ್ಸರ್ ಅನ್ನು ಈ ಪರೀಕ್ಷೆ ಮೂಲಕ ಕಂಡು ಹಿಡಿಯ ಬಹುದು ಎಂದಿದ್ದಾರೆ.
ಅಮೆರಿಕ ಮೂಲದ ಕಂಪನಿ ಗ್ರೇಲ್ ಅನ್ನು ಅಭಿವೃದ್ಧಿಪಡಿಸಿದ ಗ್ಯಾಲರಿ ಟೆಸ್ಟ್ ಮೂಲಕ ಇದನ್ನು ಪತ್ತೆ ಮಾಡಲಾಗಿದೆ. ಇದು ಕ್ಯಾನ್ಸರ್ ಸಿಗ್ನಲ್ ಅನ್ನು ಪತ್ತೆ ಹಚ್ಚಲು ಮತ್ತು ರೋಗನಿರ್ಣಯದ ಮೌಲ್ಯಮಾಪನವನ್ನು ಮಾಡಲು ಅನುಕೂಲಕರವಾಗಿದೆ. ಪರೀಕ್ಷೆಯಲ್ಲಿ ಕ್ಯಾನ್ಸರ್‌ಗಳಿಂದ ಸೋರಿಕೆಯಾಗುವ ಆನುವಂಶಿಕ ಸಂಕೇತದ ಬಿಟ್‌ಗಳಲ್ಲಿ ವಿಭಿನ್ನ ಬದಲಾವಣೆಗಳನ್ನು ಪತ್ತೆ ಮಾಡುತ್ತದೆ. ಚಿಕಿತ್ಸೆ ನೀಡಬಹುದಾದ ಕ್ಯಾನ್ಸರ್ ಅನ್ನು ಮೊದಲೇ ಗುರುತಿಸಿ ಜೀವ ಉಳಿಸಲು ಸಹಕಾರಿ ಆಗಲಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
ಈ ಪರೀಕ್ಷೆಯ ಮೂಲಕ ಕ್ಯಾನ್ಸರ್ ಇದೆ ಅಥವಾ ಇಲ್ಲ ಎಂದು ತಳ್ಳಿ ಹಾಕಲು ಸಾಕಷ್ಟು ನಿಖರವಾದ ಅಂಶಗಳಿದ್ರೂ, ಪರೀಕ್ಷೆಯು ರೋಗಿಗಳಿಗೆ ನಿಜವಾಗಿಯೂ ಉಪಯುಕ್ತವಾಗಿದೆ ಎಂದು ಪ್ರಮುಖ ಸಂಶೋಧಕ ಪ್ರೊಫೆಸರ್ ಮಾರ್ಕ್ ಮಿಡಲ್ಟನ್ ತಿಳಿಸಿದ್ದಾರೆ. ರಕ್ತದ ಮಾದರಿ ಮೂಲಕ ಕ್ಯಾನ್ಸರ್ ಮೂಲವನ್ನು ಪತ್ತೆಹಚ್ಚುವಲ್ಲಿ 85 ಪ್ರತಿಶತದಷ್ಟು ನಿಖರವಾಗಿದೆ. ಇದು ನಿಜವಾಗಿಯೂ ಚಿಕಿತ್ಸೆಗೆ ಸಹಾಯಕವಾಗಬಹುದು.
ಪರೀಕ್ಷೆಯ ಊಹೆಗಳ ಜೊತೆಗೆ ಇದರ ಮಹತ್ವ ಅಧವಾ ಸ್ಕಾನ್ ಆದೇಶಿಸಲು ನಿರ್ಧರಿಸ ಬಹುದು. ಜೊತೆಗೆ ಇದು ಮೊದಲ ಬಾರಿಗೆ ಸರಿಯಾದ ಪರೀಕ್ಷೆ ನೀಡುತ್ತಿದ್ದೇವೆ ಎಂದು ಖಚಿತ ಪಡಿಸಿಕೊಳ್ಳಬಹುದು. ಈ ಉತ್ತೇಜಕ ಫಲಿತಾಂಶಗಳು ಕ್ಯಾನ್ಸರ್‌ನ ಸಂದೇಹವಿರುವ ರೋಗಲಕ್ಷಣದ ರೋಗಿಗಳಲ್ಲಿ ಬಳಸಲು ಆಪ್ಟಿಮೈಸ್ಡ್ ವರ್ಗೀಕರಣದ ಅಭಿವೃದ್ಧಿಯನ್ನು ತಿಳಿಸುತ್ತದೆ. ಸಂಶೋಧನೆಗಳು ಈ ಪರೀಕ್ಷೆಯನ್ನು ಕ್ಲಿನಿಕಲ್ ಮಾಡಲು ಜಿಪಿಎಸ್ ಗಳನ್ನು ಬೆಂಬಲಿಸಲು ಬಳಸಬಹುದೆಂದು ಸೂಚಿಸುತ್ತವೆ. ಮೌಲ್ಯಮಾಪನಗಳ ಕುರಿತು ಆದರೆ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ, ದೊಡ್ಡ ಪ್ರಯೋಗದಲ್ಲಿ, ಇದು ಜಿಪಿ ಮೌಲ್ಯಮಾಪನ ಮತ್ತು ಅಂತಿಮವಾಗಿ ರೋಗಿಯ ಫಲಿತಾಂಶಗಳನ್ನು ಸುಧಾರಿಸಬಹುದೇ ಎಂದು ನೋಡಬಹುದು. ಈ SYMPLIFY ಅಧ್ಯಯನದ ಸಂಶೋಧನೆಗಳನ್ನು ಈ ವಾರ ಚಿಕಾಗೋದಲ್ಲಿ ಅಮೇರಿಕನ್ ಸೊಸೈಟಿ ಆಫ್ ಆಂಕೊಲಾಜಿ ಸಮ್ಮೇಳನದಲ್ಲಿ ಪ್ರಸ್ತುತಪಡಿಸಲಾಗುತ್ತದೆ
ಇದನ್ನೂ ಓದಿ: ನಿದ್ರೆಯ ಸ್ವರೂಪವನ್ನೇ ಬದಲಾಯಿಸಿದ ತಂತ್ರಜ್ಞಾನಗಳು..! ಹೇಗೆ ಗೊತ್ತಾ?