ಯಾದಗಿರಿ: ಜಿಲ್ಲೆಯಲ್ಲಿ ಜನಿಸಿದ್ದ ವಿಚಿತ್ರವಾದ ಮಗುವಿಗೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಮರು ಜನ್ಮ ನೀಡಿದ್ದಾರೆ.
ತಾಲೂಕಿನ ಅಳಗೇರಾ ಗ್ರಾಮದ ರೇಣುಕಮ್ಮ ಎಂಬ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಮಹಿಳೆಯನ್ನು ಸ್ಥಳೀಯ ಗ್ರಾಮಿಣ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಆದ್ರೆ, ಹೆರಿಗೆ ಆಗದ ಕಾರಣ ಯಾದಗಿರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಆ ಸಮಯದಲ್ಲಿ ತಾಯಿ ಮತ್ತು ಮಗುವಿನ ಸ್ಥಿತಿ ಚಿಂತಾಜನಕವಾಗಿತ್ತು.
ಮಗುವಿನ ಕುತ್ತಿಗೆಗೆ ಕರುಳ ಬಳ್ಳಿ ಸಂಪೂರ್ಣವಾಗಿ ಸುತ್ತಿಕೊಂಡು, ಉಸಿರಾಡಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಈ ಸಂದಿಗ್ಧ ಸಮಯದಲ್ಲಿ ಡಾ. ಶಶಿಕಾಂತ ವಾಲಿ ಹಾಗೂ ಡಾ. ನಾರಾಯಣಪ್ಪ ಹಾಗೂ ಡಾ. ರಾಯಚೂರ್ಕರ್ ಸಹದ್ಯೋಗಿಗಳ ಮಾರ್ಗದರ್ಶನದಲ್ಲಿ ಚಿಕೆತ್ಸೆ ನೀಡಿ ಹೆರಿಗೆ ಮಾಡಿಸಿದ್ದರು.
ಬಾಯಿ, ಕಣ್ಣು ಎಲ್ಲಿದೆ ಎಂದು ಕಾಣದ ಸ್ಥಿತಿಯಲ್ಲಿದ್ದ ಮಗುವಿಗೆ ಮೂರು ದಿನಗಳ ಕಾಲ ಸತತವಾಗಿ ಚಿಕಿತ್ಸೆ ನೀಡುವ ಮೂಲಕ ಶ್ವಾಸಕೋಶದಲ್ಲಿ ಊದಿಕೊಂಡಿದ್ದ ಬಾವು ಕಡಿಮೆ ಮಾಡಿದ್ದಾರೆ. ತಾಯಿಯ ಎದೆ ಹಾಲು ಕುಡಿಯಲೂ ಕೂಡ ಮಗುವಿಗೆ ಸಾಧ್ಯವಾಗುತ್ತಿರಲಿಲ್ಲ. ವೈದ್ಯರ ಪರಿಶ್ರಮದಿಂದ ಇದೀಗ ತಾಯಿ ಮತ್ತು ಮಗು ಆರೋಗ್ಯವಾಗಿದೆ. ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದ ಮಗುವನ್ನು ರಕ್ಷಣೆ ಮಾಡುವ ಮೂಲಕ ವೈದ್ಯರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.