ಯಾದಗಿರಿ: ನಿಯಮ ಬಾಹಿರವಾಗಿ ವಾಹನಗಳ ಮೇಲೆ ನಂಬರ್ ಪ್ಲೇಟ್ ಹಾಕಿಕೊಂಡು ಸಂಚಾರ ನಡೆಸುತ್ತಿದ್ದ ವಾಹನಗಳ ಮೇಲೆ ಆರ್ಟಿಒ ಅಧಿಕಾರಿಗಳು ದಾಳಿ ನಡೆಸಿ ಮಾಲೀಕರಿಗೆ ದಂಡ ವಿಧಿಸಿದ್ದಾರೆ.
ಆರ್ಟಿಒ ಅಧಿಕಾರಿ ವಸಂತ ಚವ್ಹಾಣ ನೇತ್ರತ್ವದಲ್ಲಿ ಜಿಲ್ಲೆಯ ವಿವಿಧೆಡೆ ಅಧಿಕಾರಿಗಳು ದಾಳಿ ನಡೆಸಿದ್ದು, ನಿಯಮ ಬಾಹಿರವಾಗಿ ವಾಹನಗಳ ನಂಬರ್ ಪ್ಲೇಟ್ ಮೇಲೆ ಕಂಪನಿಯ ಹೆಸರು, ಸಂಘಟನೆಗಳ ಹೆಸರು, ನಿರ್ವಹಿಸುವ ಹುದ್ದೆ ಹೆಸರು ಹಾಕಲಾಗಿದ್ದ 30ಕ್ಕೂ ವಾಹನಗಳ ಮಾಲೀಕರ ಮೇಲೆ ಕೇಸ್ ದಾಖಲಿಕೊಂಡಿದ್ದರೆ. ಅಲ್ಲದೇ ಅವರಿಂದ ಸುಮಾರು15 ಸಾವಿರ ಶುಲ್ಕ ಸಂಗ್ರಹಿಸಿದ್ದಾರೆ.
ವಾಹನಗಳ ಮೇಲೆ ಚಾಲಕರು ಹುದ್ದೆಗಳ, ಸಂಘಟನೆಗಳ ಹಾಗೂ ಕಂಪನಿಗಳ ಹೆಸರು ಹಾಕುವುದು ಸಹಜ. ಆದರೆ ನಂಬರ್ ಪ್ಲೇಟ್ ಮೇಲೆ ಹೆಸರುಗಳನ್ನು ಹಾಕುವುದು ಕಾನೂನು ಬಾಹಿರವಾಗಿದೆ. ಸಾರಿಗೆ ನಿಗಮ ಸೂಚಿಸದ ರೀತಿಯಲ್ಲಿ ವಾಹನಗಳ ಸಂಖ್ಯಾ ಫಲಕ ಇಲ್ಲದಿದ್ದರೆ ಅಂತಹ ವಾಹನಗಳ ಮೇಲೆ ದಂಡ ವಿಧಿಸುವದು ಅನಿವಾರ್ಯ. ಹೀಗಾಗಿ ಸಾರಿಗೆ ನಿಯಮಗಳನ್ನು ಸಾರ್ವಜನಿಕರು ಪಾಲಿಸಬೇಕು ಎಂದು ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.