ETV Bharat / state

ನಿರಾಣಿ​ ಅವರೇ ದೊಡ್ಡ ನಾಲಾಯಕ್​​, ಅವರಿಗೆ ಅಧಿಕಾರದ ಹುಚ್ಚು ಹಿಡಿದಿದೆ: ಕಾಶಪ್ಪನವರ್ - ನಿರಾಣಿ​ ಅವರೇ ದೊಡ್ಡ ನಾಲಾಯಕ್

ಸಮಾಜದ ವಿರುದ್ಧ ಹೀಗೆ ಹೇಳಿಕೆ ನೀಡಿದರೆ ಸಮಾಜವೇ ತಕ್ಕ ಪಾಠ ಕಲಿಸುತ್ತದೆ. ಸ್ವಾಮೀಜಿಯವರ ಆಶೀರ್ವಾದದಿಂದಲೇ ಮುರುಗೇಶ್ ನಿರಾಣಿ ಮಂತ್ರಿಯಾಗಿರುವುದನ್ನು ಮರೆಯಬಾರದು ಅಂತಾ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್​ ಹೇಳಿದರು.

kashappanavar-reacted-on-murugesh-nirani-statement
ಕಾಶಪ್ಪನವರ್
author img

By

Published : Apr 4, 2021, 4:21 AM IST

Updated : Apr 4, 2021, 6:43 AM IST

ಯಾದಗಿರಿ: ಸಚಿವ ಮುರುಗೇಶ್ ನಿರಾಣಿ​ ಅವರೇ ದೊಡ್ಡ ನಾಲಾಯಕ್​​, ಅವರಿಗೆ ಅಧಿಕಾರದ ಹುಚ್ಚು ಹಿಡಿದಿದೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್​ ತಿರುಗೇಟು ನೀಡಿದ್ದಾರೆ.

ನಗರದ ಖಾಸಗಿ ಹೋಟೆಲ್​ವೊಂದರಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಮಾಜದ ಬಗ್ಗೆ ನಿರಾಣಿಯವರಿಗೆ ಕಳಕಳಿ ಇಲ್ಲ. ನನ್ನ ಬಗ್ಗೆ ಸ್ವಾಮೀಜಿಯವರ ಬಗ್ಗೆ ಅತೀ ಕೀಳಾಗಿ ಮಾತನಾಡಿರುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೀರಿ, ಪಂಚಮಸಾಲಿ ಮೀಸಲಾತಿ ಬಗ್ಗೆ ವರದಿ ತರಿಸಿಕೊಂಡು 6 ತಿಂಗಳಲ್ಲಿ ಮೀಸಲಾತಿ ನೀಡುವ ಬಗ್ಗೆ ಸಿಎಂ ಸದನದಲ್ಲಿ ಭರವಸೆ ನೀಡಿದ್ದಾರೆ. ಸರ್ಕಾರದಲ್ಲಿ ಮಂತ್ರಿ ದೊಡ್ಡವರಾ? ಮುಖ್ಯಮಂತ್ರಿ ದೊಡ್ಡವರಾ? ಎಂದು ಪ್ರಶ್ನಿಸಿದರು.

ನಿರಾಣಿ​ ಅವರೇ ದೊಡ್ಡ ನಾಲಾಯಕ್​​, ಅವರಿಗೆ ಅಧಿಕಾರದ ಹುಚ್ಚು ಹಿಡಿದಿದೆ: ಕಾಶಪ್ಪನವರ್

ಬಸನಗೌಡ ಪಾಟೀಲ್​ ಯತ್ನಾಳ್​ ಅವರು ತಮ್ಮ ಸಮಾಜದ ಪರ ನಿಂತಿದ್ದಕ್ಕೆ ನಿರಾಣಿ​ ಹೀಗೆಲ್ಲಾ ಮಾತನಾಡುತ್ತಿದ್ದಾರೆ. ಒಂದು ವೇಳೆ ಸರ್ಕಾರ 6 ತಿಂಗಳಲ್ಲಿ ಮೀಸಲಾತಿ ಘೊಷಣೆ ಮಾಡದಿದ್ದರೆ, ನಿರಾಣಿ ಮನೆ ಮುಂದೆ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಕಾಶಪ್ಪನವರ್​​ ಎಚ್ಚರಿಕೆ ನೀಡಿದರು.

ಸಮಾಜದ ವಿರುದ್ಧ ಹೀಗೆ ಹೇಳಿಕೆ ನೀಡಿದರೆ ಸಮಾಜವೇ ತಕ್ಕ ಪಾಠ ಕಲಿಸುತ್ತದೆ. ಸ್ವಾಮೀಜಿಯವರ ಆಶೀರ್ವಾದದಿಂದಲೇ ನಿರಾಣಿ ಮಂತ್ರಿಯಾಗಿರುವುದನ್ನು ಮರೆಯಬಾರದು ಅಂತಾ ಕಾಶಪ್ಪನವರ್​ ಹೇಳಿದರು.

Last Updated : Apr 4, 2021, 6:43 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.