ಯಾದಗಿರಿ: ಕಾಯಕಲ್ಪ ಯೋಜನೆ ಅನುಷ್ಠಾನ ಕುರಿತು ಕಲಬುರಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಾ. ಹಬೀಬ್ ಉಸ್ಮಾನ್ ಪಟೇಲ್ ಇಂದು ಯಾದಗಿರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಹಿಂದೆ ಕೂಡ ಯಾದಗಿರಿ ಜಿಲ್ಲಾಸ್ಪತ್ರೆಯು ಸ್ವಚ್ಛತೆ ಹಾಗೂ ರೋಗಿಗಳಿಗೆ ಉತ್ತಮ ಸೇವೆ ನೀಡಿದ ಹಿನ್ನೆಲೆ ಕಾಯಕಲ್ಪ ಪ್ರಶಸ್ತಿಗೆ ಭಾಜನವಾಗಿತ್ತು. ಈಗ ಮತ್ತೆ ಸಮರ್ಪಕವಾಗಿ ಕಾಯಕಲ್ಪ ಯೋಜನೆ ಅನುಷ್ಠಾನ ಮಾಡಲು ಆರೋಗ್ಯ ಇಲಾಖೆಯು ಯಾದಗಿರಿ ಜಿಲ್ಲಾಸ್ಪತ್ರೆ, ಸುರಪುರ ತಾಲೂಕು ಆಸ್ಪತ್ರೆ ಹಾಗೂ ಹುಣಸಗಿ ಸಮುದಾಯ ಆರೋಗ್ಯ ಕೇಂದ್ರ ಆಯ್ಕೆ ಮಾಡಿದ್ದ ಹಿನ್ನಲೆ, ಆರೋಗ್ಯ ಇಲಾಖೆ ಉಪನಿರ್ದೇಶಕ ಡಾ. ಹಬೀಬ್ ಉಸ್ಮಾನ್ ಪಟೇಲ್ ಅವರು ಯಾದಗಿರಿ ಜಿಲ್ಲಾಸ್ಪತ್ರೆಯನ್ನು ಪರಿಶೀಲನೆ ಮಾಡಿದರು.
ಭೇಟಿ ವೇಳೆ ಸ್ವಚ್ಛತೆ ಕಾಪಾಡುವ ಜೊತೆ ರೋಗಿಗಳಗೆ ಸರಿಯಾಗಿ ಸೌಲಭ್ಯ ಕಲ್ಪಿಸಬೇಕೆಂದು ಆಸ್ಪತ್ರೆ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.