ವಿಜಯಪುರ : ಪತ್ರಕರ್ತರೆಂದು ಹೇಳಿಕೊಂಡು ಹಣಕ್ಕೆ ಬೇಡಿಕೆ ಇರಿಸಿದ್ದಲ್ಲದೇ ವ್ಯಾಪಾರಿಯೊಬ್ಬನ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿರುವ ಘಟನೆ ವಿಜಯಪುರದ ಕೆಐಎಡಿಬಿಯ ಬಾಲಾಜಿ ಮೆಟಲ್ ಇಂಡಸ್ಟ್ರೀಜ್‌ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪತ್ರಕರ್ತರೆಂದು ವಿವಿಧ ಚಾನಲ್ ಮತ್ತು ಪತ್ರಿಕೆಯ ಹೆಸರು ಹೇಳಿಕೊಂಡು ಶುಭಮ್ ಬಾಳಾಸಾಹೇಬ ವಾಡೇಕರ್ ಎಂಬುವರಿಗೆ ಹಣಕ್ಕೆ ಬೇಡಿಕೆ ಇರಿಸಿದ್ದಾರೆ. ಹಣ ಕೊಡಲು ನಿರಾಕರಿಸಿದ ಶುಭಮ್ಗೆ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ಗಾಯಗೊಂಡ ಶುಭಮ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಿಜ್ವಾನ್ ಅಹ್ಮದ್ ಮುಲ್ಲಾ, ಕಲ್ಮೇಶ ಶ್ಯಾಪೇಟಿ, ರಿಯಾಜ್ ಜಹಗೀರದಾರ್ ಹಾಗೂ ಮೈಬೂಬ ಸಾರವಾನ್ ಎಂಬಾತ ಸೇರಿ ಮತ್ತಿತರರ ಮೇಲೆ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ಜೈಲು ವಾರ್ಡನ್ ಮೇಲೆ ಗ್ಯಾಂಗ್ಸ್ಟಾರ್ಗಳಿಂದ ಹಲ್ಲೆ