ETV Bharat / state

ಶಾಲೆ ಗೋಡೆಯಲ್ಲಿ ಅರಳಿದ ನಾಡ ಬಾವುಟ.. ಹೊಸ ರಂಗು ನೀಡಿದ ಗೆಳೆಯರ ಬಳಗ

ಶಾಲೆಯ ಪ್ರತಿ ಕೊಠಡಿಗೆ ಕರ್ನಾಟಕದ ನಾಡಧ್ವಜದ ಬಣ್ಣ ಲೇಪಿಸಿದ್ದರೆ, ಪ್ರತಿ ಕೊಠಡಿಗಳಿಗೆ ದಾರ್ಶನಿಕರ ಹೆಸರನ್ನಿಡಲಾಗಿದೆ. ಬಣ್ಣದ ಜೊತೆಗೆ ನೆಲಮೂಲದ ತತ್ವಗಳು ಮಕ್ಕಳ ಬದುಕಿನ ಭಾಗವಾಗಲಿ ಎನ್ನುವ ಪರಿಕಲ್ಪನೆಯಡಿ ಗ್ರಾಮಸ್ಥರು, ಗೆಳೆಯರ ಬಳಗ ಶಾಲೆಗೆ ಹೊಸ ರೂಪ ನೀಡಿದ್ದಾರೆ.

the-state-flag-on-the-school-walls
ಶಾಲೆ ಗೋಡೆಯಲ್ಲಿ ಅರಳಿದ ನಾಡ ಬಾವುಟ
author img

By

Published : Aug 13, 2022, 5:10 PM IST

Updated : Aug 13, 2022, 5:37 PM IST

ವಿಜಯಪುರ : ಸೌಲಭ್ಯದಿಂದ ವಂಚಿತವಾಗಿ ಸರ್ಕಾರಿ ಶಾಲೆ ಮುಚ್ಚಬಾರದು. ಆ ಶಾಲೆಯಲ್ಲೇ ಊರಿನ ಮಕ್ಕಳ ಭವಿಷ್ಯ ಅರಳಬೇಕೆಂಬ ದೂರದೃಷ್ಟಿಯಿಂದ ಗ್ರಾಮಸ್ಥರು ಹಾಗೂ ಆರೂರು ಗೆಳೆಯರ ಬಳಗದ ಸದಸ್ಯರೆಲ್ಲರು ಒಟ್ಟು ಸೇರಿ ಹೊಸ ರೂಪವನ್ನು ಕೊಟ್ಟಿದ್ದಾರೆ. ಅದರ ಫಲಿತಾಂಶವಾಗಿ ಈ ಶಾಲೆಯೀಗ ಹೊಸ ಪೋಷಾಕಿನಲ್ಲಿ ನಳನಳಿಸುವ ಮೂಲಕ ಮಕ್ಕಳೇ ಬನ್ನಿ ಶಾಲೆಗೆ ಎಂದು ಕೈಬೀಸಿ ಕರೆಯುತ್ತಿದೆ.

ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಹಂಚಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೇ ನಾಡಿನ ಬಾವುಟ ಬಣ್ಣ ತೊಟ್ಟು ನಳನಳಿಸುತ್ತಿದೆ. ಮಕ್ಕಳಲ್ಲಿ ಬಣ್ಣ-ಬಣ್ಣದ ಕನಸುಗಳನ್ನು ಬಿತ್ತುತ್ತಿದೆ. 1ರಿಂದ 7ನೇ ವರ್ಗದಲ್ಲಿ 150ಕ್ಕೂ ಹೆಚ್ಚು ಮಕ್ಕಳು ಈ ಶಾಲೆಯಲ್ಲಿ ಓದುತ್ತಿದ್ದಾರೆ. ಆದರೆ ಶಾಲೆ ಮೂಲಭೂತ ಸೌಲಭ್ಯದಿಂದ ನರಳುತ್ತಿರುವುದನ್ನರಿತ ಆರೂರು ಗೆಳೆಯರ ಬಳಗದ ಸದಸ್ಯರು, ಶಾಲೆಗೆ ಬರೀ ಬಣ್ಣ ಬಳೆಯುವುದಲ್ಲ. ಬಣ್ಣದ ಪರಿಕಲ್ಪನೆ ಜೊತೆಗೆ ನೆಲಮೂಲದ ತತ್ವಗಳು ಮಕ್ಕಳ ಬದುಕಿನ ಭಾಗವಾಗಲಿ ಎನ್ನುವ ಪರಿಕಲ್ಪನೆಯಡಿ ಈ ಶಾಲೆಯನ್ನು ಅಭಿವೃದ್ಧಿಪಡಿಸಿದ್ದಾರೆ.

ಸರ್ಕಾರಿ ಶಾಲೆಗೆ ಹೊಸ ರಂಗು ನೀಡಿದ ಗೆಳೆಯರ ಬಳಗ

ಶಾಲೆಯ ಪ್ರತಿ ಕೊಠಡಿಗೆ ನಾಡಧ್ವಜದ ಬಣ್ಣ ಲೇಪಿಸಿದ್ದರೆ, ಪ್ರತಿ ಕೊಠಡಿಗಳಿಗೆ ಈ ನೆಲದ ದಾರ್ಶನಿಕರ ಹೆಸರನ್ನಿಡಲಾಗಿದೆ. 1ರಿಂದ 2ನೇ ತರಗತಿಗೆ, ಮಕ್ಕಳ ಸಾಹಿತಿ ಶಂ.ಗು. ಬಿರಾದಾರ, 5ನೇ ತರಗತಿಗೆ ಭಕ್ತ ಕನಕದಾಸ, 7ನೇ ತರಗತಿ ಕೊಠಡಿಗೆ ವಿಶ್ವ ಗುರು ಬಸವಣ್ಣ, 6ನೇ ತರಗತಿಗೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಎಂಬುದಾಗಿ ನಾಮಕರಣ ಮಾಡಿ, ಆಯಾ ದಾರ್ಶನಿಕರ ಸಂಕ್ಷಿಪ್ತ ಪರಿಚಯ ಹಾಗೂ ಅವರ ಸಂದೇಶಗಳನ್ನು ಬರೆಸಿದ್ದಾರೆ.

ಶಾಲೆಗೆ ನಾಮಫಲಕ : ಹಲವು ದಶಕಗಳಿಂದ ಸುಣ್ಣ-ಬಣ್ಣವನ್ನೇ ಕಾಣದ ಈ ಶಾಲೆಗೆ ನಾಮಫಲಕವೂ ಇರಲಿಲ್ಲ. ಅದಕ್ಕಾಗಿ 25 ಸಾವಿರ ರೂ. ಖರ್ಚು ಮಾಡಿ, ಹೊಸ ನಾಮಫಲಕ ಹಾಕಿಸಲಾಗಿದೆ.

ಶುದ್ಧ ಕುಡಿಯುವ ನೀರು : ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದ್ದನ್ನು ಮನಗಂಡ ಬಳಗದ ಬಸು ಕುಂಟೋಜಿ, 25 ಸಾವಿರ ರೂ. ವೆಚ್ಚ ಮಾಡಿ ಶುದ್ಧ ಕುಡಿವ ನೀರಿನ ಸೌಲಭ್ಯ ಕಲ್ಪಿಸಿದರೆ, ಸದಸ್ಯರು ಶಾಲೆಯ ದಾಖಲೆಗಳನ್ನು ಸಂರಕ್ಷಿಸಿಡಲು ಹೊಸ ತಿಜೋರಿ ಪೂರೈಸಿದ್ದಾರೆ.

ಊಟದ ತಟ್ಟೆ : ಮಕ್ಕಳು ಶಾಲೆಗೆ ಪುಸ್ತಕ ತರುವುದೇ ಕಷ್ಟ. ಅಂಥದ್ದರಲ್ಲಿ ಬಿಸಿಯೂಟಕ್ಕೆ ಮನೆಯಿಂದ ತಟ್ಟೆ ತರುವುದಕ್ಕೆ ಬ್ರೇಕ್ ನೀಡಬೇಕೆಂದು ಬಳಗದ ಸದಸ್ಯರು ಮಕ್ಕಳಿಗೆ ಊಟದ ತಟ್ಟೆ ಹಾಗೂ ಗ್ಲಾಸ್‌ಗಳನ್ನು ಪೂರೈಸಿದ್ದಾರೆ.

1.68 ಲಕ್ಷ ರೂ. ವೆಚ್ಚ : ಹಂಚಲಿ ಗ್ರಾಮಸ್ಥರು, ಮೂವರು ಗ್ರಾ.ಪಂ ಸದಸ್ಯರು ಹಾಗೂ ಆರೂರು ಗೆಳೆಯರ ಬಳಗದ ಸದಸ್ಯರೆಲ್ಲ ಸೇರಿ ಈ ಶಾಲೆಗೆ ಒಟ್ಟು 1.68 ಲಕ್ಷ ರೂ. ಖರ್ಚಿನ ಯೋಗದಾನ ಮಾಡಿದ್ದಾರೆ. ಈ ಮೂಲಕ ಶಾಲೆಗೆ ಬರುವ ಮಕ್ಕಳಿಗೆ ರಾಷ್ಟ್ರಭಕ್ತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಸರಿಯಾಗಿ ಮೇಲ್ಛಾವಣಿಯೇ ಇಲ್ಲದ ಸರ್ಕಾರಿ ಕನ್ನಡ ಶಾಲೆಗಳಿಗೆ ಇದು ಮಾದರಿಯಾಗಿದೆ.

ಇದನ್ನೂ ಓದಿ : ಮನೆಗೆಂದು ಕೂಡಿಟ್ಟ ಹಣದಲ್ಲಿ ಶಾಲೆ ಕಟ್ಟಿಸಿದ ಆದರ್ಶ ದಂಪತಿ.. ಓದಿದ ಶಾಲೆಗೆ ಹೊಸ ರೂಪ

Last Updated : Aug 13, 2022, 5:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.