ETV Bharat / state

ಶೃಂಗೇರಿ ಘಟನೆ ಖಂಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬ್ರಾಹ್ಮಣ ಮಹಾಸಭಾ ಮನವಿ - muddhebihala

ಶೃಂಗೇರಿ ಘಟನೆಯನ್ನು ತಾಲೂಕು ಬ್ರಾಹ್ಮಣ ಮಹಾಸಭಾದ ಪದಾಧಿಕಾರಿಗಳು ಖಂಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಹಶೀಲ್ದಾರ್ ಮೂಲಕ ಸಿಎಂಗೆ ಮನವಿ ಪತ್ರ ಸಲ್ಲಿಸಿದರು.

muddhebihala
ಮನವಿ ಪತ್ರ ಸಲ್ಲಿಕೆ
author img

By

Published : Aug 17, 2020, 7:10 PM IST

ಮುದ್ದೇಬಿಹಾಳ: ಶೃಂಗೇರಿ ಶಂಕರಾಚಾರ್ಯ ಪ್ರತಿಮೆ ಘಟನೆಯನ್ನು ತಾಲೂಕು ಬ್ರಾಹ್ಮಣ ಮಹಾಸಭಾದ ಪದಾಧಿಕಾರಿಗಳು ಖಂಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಹಶೀಲ್ದಾರ್ ಮೂಲಕ ಸಿಎಂಗೆ ಮನವಿ ಪತ್ರ ಸಲ್ಲಿಸಿದರು.

ಮಹಾಸಭಾದ ಅಧ್ಯಕ್ಷ ಪ್ರಕಾಶ ಕುಲಕರ್ಣಿ

ಪಟ್ಟಣದ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಮಹಾಸಭಾದ ಪದಾಧಿಕಾರಿಗಳು ಗ್ರೇಡ್​-2 ತಹಶೀಲ್ದಾರ್ ಡಿ.ಜಿ.ಕಳ್ಳಿಮನಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಮಾತನಾಡಿದ ಮಹಾಸಭಾದ ಅಧ್ಯಕ್ಷ ಪ್ರಕಾಶ ಕುಲಕರ್ಣಿ, ಶೃಂಗೇರಿ ಘಟನೆ ಸನಾತನ ಹಿಂದೂ ಧರ್ಮಕ್ಕೆ ಬಗೆದ ಅಪಚಾರ. ಜಗತ್ತಿನಲ್ಲಿ ಶಾಂತಿ ಸ್ಥಾಪನೆಗೆ ಮತ್ತು ಮನುಕುಲದ ಉದ್ಧಾರಕ್ಕೆ ಶ್ರಮಿಸಿದ ಶಂಕರಾಚಾರ್ಯರ ಪುತ್ಥಳಿಯ ಸ್ಥಳದಲ್ಲಿ ದೇಶದ್ರೋಹಿಗಳ ಧ್ವಜವನ್ನು ಹಾಕಿ ಅವಮಾನಿಸಿದ್ದು ಖಂಡನಾರ್ಹ ಘಟನೆ ಎಂದು ಹೇಳಿದರು.

Sringeri
ಬ್ರಾಹ್ಮಣ ಮಹಾಸಭಾ

ಸರ್ಕಾರ ಹಿಂದೂ ಧರ್ಮದ ಮಠ ಮಾನ್ಯಗಳಿಗೆ, ದೇವಸ್ಥಾನಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಮನವಿ ಪತ್ರ ಸಲ್ಲಿಕೆ ಸಂದರ್ಭದಲ್ಲಿ ಮಹಾಸಭಾದ ಉಪಾಧ್ಯಕ್ಷ ಲಕ್ಷ್ಮಣರಾವ್​ ದೇಶಪಾಂಡೆ, ಪ್ರಧಾನ ಕಾರ್ಯದರ್ಶಿ ಮದನ ಕುಲಕರ್ಣಿ, ಖಜಾಂಚಿ ಬಸವಂತ್ರಾವ ದೇಶಪಾಂಡೆ, ಸದಸ್ಯ ವಿನಾಯಕ ಕುಲಕರ್ಣಿ, ಅರವಿಂದ ದೇಶಪಾಂಡೆ ಇದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.