ETV Bharat / state

ಮಹೇಶ್​ ಕುಮಟಳ್ಳಿಗೆ ಟಿಕೆಟ್ ನೀಡದಿದ್ದರೆ ನಾನು ಚುನಾವಣೆಗೆ ಸ್ಪರ್ಧಿಸಲ್ಲ: ರಮೇಶ್​ ಜಾರಕಿಹೊಳಿ - ಅಥಣಿಯಿಂದ ಮಹೇಶ ಕುಮಟಳ್ಳಿಗೆ ಟಿಕೆಟ್

ಅಥಣಿಯಿಂದ ಮಹೇಶ ಕುಮಟಳ್ಳಿಗೆ ಟಿಕೆಟ್​ ಕೊಡದಿದ್ದರೆ ಗೋಕಾಕ್​ನಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ರಮೇಶ್​ ಜಾರಕಿಹೊಳಿ ಹೇಳಿದರು

ರಮೇಶ್​ ಜಾರಕಿಹೊಳಿ
ರಮೇಶ್​ ಜಾರಕಿಹೊಳಿ
author img

By

Published : Mar 10, 2023, 3:11 PM IST

ರಮೇಶ್​ ಜಾರಕಿಹೊಳಿ ಹೇಳಿಕೆ

ವಿಜಯಪುರ: ಮಹೇಶ ಕುಮಟಳ್ಳಿಗೆ ಟಿಕೆಟ್ ಸಿಗದಿದ್ದಿದ್ದರೆ ತಾವು ಗೋಕಾಕ್ ಕ್ಷೇತ್ರದಿಂದ ಸ್ಪರ್ಧೇ ಮಾಡಲ್ಲ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಸಿಗದೇ ಇರೋದಕ್ಕೆ ನನಗೆ ನಿರಾಶೆ ಇಲ್ಲ, ನಾನು ಇದ್ದ ಸಚಿವ ಸ್ಥಾನ ಬಿಟ್ಟು ಬಿಜೆಪಿಗೆ ಬಂದಿದ್ದೇನೆ ಬಿಜೆಪಿ ತತ್ವ ಸಿದ್ದಾಂತ ನಂಬಿ ಪಕ್ಷಕ್ಕೆ ಸೇರಿದ್ದೇನೆ ಎಂದರು.

ಬೆಳಗಾವಿಯಲ್ಲಿ ಈ ಬಾರಿ ಎಷ್ಟು ಸ್ಥಾನ ಬಿಜೆಪಿ ಗೆಲ್ಲಬಹುದು ಎಂಬ ವಿಚಾರವಾಗಿ ಮಾತನಾಡಿದ ಅವರು 13 ಸ್ಥಾನ ಬಿಜೆಪಿ ಗೆಲ್ಲಲಿದ್ದು, ಹೆಚ್ಚು ಗೆಲ್ಲೋಕೆ ಪ್ರಯತ್ನಿಸಿತ್ತೇವೆ ಎಂದರು. ಕಾಂಗ್ರೆಸ್ ನಿಂದ ಬಿಜೆಪಿಗೆ ಬಂದವರ ಅಸಮಾಧಾನ ಗೊಂಡಿದ್ದು, ಮತ್ತೆ ಕಾಂಗ್ರೆಸ್​ಗೆ ಸೇರುತ್ತಾರೆ ಎಂಬ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಮುಳುಗುವ ಹಡಗು, ಕಾಂಗ್ರೆಸ್ ಹಡಗು ಮುಳುಗುತ್ತಿದೆ. ಈ ವೇಳೆ, ಕಾಂಗ್ರೆಸ್​​​ಗೆ ಹೋಗೋದು ಸರಿ ಅಲ್ಲ ಎಂದ ಅವರು, ಬಿಜೆಪಿ ಬಿಡುವ ಮೂರ್ಖತನ ಯಾರು ಮಾಡಬಾರದು ಎಂದು ಹೇಳಿದರು. ಇನ್ನು ನಾರಾಯಣಗೌಡ ಕಾಂಗ್ರೆಸ್​ಗೆ ಸೆರಲಿದ್ದಾರೆ ಎಂಬ ಪ್ರಶ್ನೆಗೆ ಅವರು ಕಾಂಗ್ರೆಸ್​​ಗೆ ಹೋಗ್ತಾರೆ ಅನ್ನೋದು ನನಗೆ ಮಾಹಿತಿ ಇಲ್ಲ. ಮಾಧ್ಯಮಗಳಲ್ಲಿ ನೋಡಿ ತಿಳಿದುಕೊಂಡೆ, ನಾರಾಯಣಗೌಡರ ಜೊತೆ ಮಾತನಾಡುವೆ ಎಂದರು.

ಬಳಿಕ ಸೋಮಣ್ಣ ಕಾಂಗ್ರೆಸ್​​ ಸೇರುವ ವಿಚಾರವಾಗಿ ಮಾತನಾಡಿದ ಸಚಿವ ಸಿ.ಸಿ ಪಾಟೀಲ, ಸೋಮಣ್ಣ ನನಗೆ ಅತ್ಯಂತ ಆತ್ಮೀಯರು. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರೋದಿಲ್ಲ, ನಾನು ಅವರೊಂದಿಗೆ ಮಾತಾಡಿದ್ದೇನೆ ಎಂದರು. ಸಂಸದೆ ಸುಮಲತಾ ಬಿಜೆಪಿ ಸೇರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಅವರು ಬಿಜೆಪಿ ಸೇರ್ತಾರೆ ಎಂಬ ಸುದ್ದಿ ಇದೆ. ನನಗೆ ನಿಖರವಾಗಿ ಗೊತ್ತಿಲ್ಲ ಎಂದರು. ಬಳಿಕ ವಿಜಯ ಸಂಕಲ್ಪ ಯಾತ್ರೆ ವಿಚಾರವಾಗಿ ಮಾತನಾಡಿದ ರಮೇಶ್​ ಜಾರಕಿಹೊಳಿ, ರಾಜ್ಯದ ನಾಲ್ಕು ದಿಕ್ಕಿನಿಂದ ವಿಜಯ ಸಂಕಲ್ಪ ಯಾತ್ರೆ ಶುರುವಾಗಿದೆ.

ಒಂದೊಂದು ಯಾತ್ರೆಯೂ ಒಂದೊಂದು ದಿನಕ್ಕೆ ಮೂರು ಕ್ಷೇತ್ರಗಳಲ್ಲಿ ಸಂಚಾರ ನಡೆಸಲಿದೆ. ಬಿಎಸ್​​ವೈ ಸೇರಿದಂತೆ ನಮ್ಮ‌ ಮುಖ್ಯಮಂತ್ರಿಗಳು ನೀಡಿದ ಕೊಡುಗೆಯನ್ನು ಜನರ ಮುಂದೆ ಯಾತ್ರೆ ಮೂಲಕ ತೆರೆದಿಡುತ್ತಿದ್ದೇವೆ. ಅಲ್ಲದೇ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಾಧನೆಗಳನ್ನು ಎಲ್ಲೆಡೆ ಮುಟ್ಟಿಸಲಿದ್ದೇವೆ. ಮಾರ್ಚ್ 20ರ ಒಳಗೆ ಎಲ್ಲಾ ಕ್ಷೇತ್ರಗಳಲ್ಲಿ ಯಾತ್ರೆ ಮುಗಿಸಲಿದ್ದೇವೆ. ನಮ್ಮ ಗುರಿ, ನಮ್ಮ ಧ್ಯೇಯ ಈ ಬಾರಿಯ ಚುನಾವಣೆಯಲ್ಲಿ 150 ಸೀಟ್ ಗೆಲ್ಲುವುದೇ ಆಗಿದೆ ಎಂದರು.

ಲಿಂಗಾಯತ ಅಸಮಾಧಾನದ ವಿಚಾರವಾಗಿ ಮಾತನಾಡಿದ ಸಚಿವರು, ಅವರ ಹೋರಾಟಕ್ಕೆ ಗೌರವವನ್ನು, ಬೆಂಬಲವನ್ನು ಕೊಟ್ಟಿದ್ದು ಬಿಜೆಪಿ ಪಕ್ಷವಾಗಿದೆ.
ಮುಖ್ಯಮಂತ್ರಿಗಳು ಸಕಾರಾತ್ಮಕ ನಿಲುವನ್ನು ಇಟ್ಟಿದ್ದಾರೆ. ಪಂಚಮಸಾಲಿ ಸಮಾಜವನ್ನು 3ಬಿಗೇ ಸೇರಿಸಿದ್ದೇ ಬಿಜೆಪಿ ಸರ್ಕಾರ. ಅಂದು 3 ಬಿ ಸೇರಿದ್ದರಿಂದಲೇ ಇಂದು 2ಎ ಕೇಳುವ ಅವಕಾಶ ಸಿಕ್ಕಿದೆ, ಈ ವಿಚಾರ ಸುಖಾಂತ್ಯ ಆಗಲಿದೆ ಎಂದು ನನಗೆ ಭರವಸೆ ಇದೆ ಎಂದು ನುಡಿದರು.

ಕೆಲ ಹಾಲಿ ಶಾಸಕರಿಗೆ ಟಿಕೆಟ್​ ತಪ್ಪುವ ವಿಚಾರವಾಗಿ ಮಾತನಾಡಿದ ಅವರು, ಯಾವುದೇ ರಾಜಕೀಯ ಪಕ್ಷಕ್ಕೆ ಚುನಾವಣೆಯಲ್ಲಿ ಗೆಲುವು ಮುಖ್ಯ, ನಾವು ಮೊದಲು 130 ಸೀಟ್ ತಲುಪಬೇಕಿದೆ. ಟಿಕೆಟ್​ ವಿಚಾರ ಹೈಕಮಾಂಡ್ ನಿರ್ಧರಿಸುತ್ತೆ. ನಾವು ಎಲ್ಲೇ ಹೋದರೂ ವ್ಯಕ್ತಿಯನ್ನು ಗೆಲ್ಲಿಸಿ ಎಂದು ಹೇಳಲ್ಲ, ಬಿಜೆಪಿ ಗೆಲ್ಲಿಸಿ ಎಂದು ಹೇಳುತ್ತೇವೆ. ಒಂದೊಂದು ಕ್ಷೇತ್ರದಲ್ಲಿ ಸ್ವಲ್ಪ ಸ್ವಲ್ಪ ಅಸಮಾಧಾನ ಇರುತ್ತೆ. ಅದನ್ನು ಹೈ ಕಮಾಂಡ್ ಗಮನಿಸುತ್ತಿದೆ ಎಂದರು.

ಇದನ್ನೂ ಓದಿ: ಬೊಮ್ಮಾಯಿ ತವರು ಪ್ರೀತಿ: ಅಧಿಕಾರದ ಕಡೆ ದಿನಗಳಲ್ಲಿ ನಿಗಮ, ಮಂಡಳಿಗೆ ಬೆಂಬಲಿಗರ ನೇಮಕ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.