ETV Bharat / state

ಮುದ್ದೇಬಿಹಾಳದಲ್ಲಿ ದಿನಸಿ ಕಿಟ್ ವಿತರಿಸಿ ರಾಹುಲ್ ಗಾಂಧಿ ಜನ್ಮ ದಿನಾಚರಣೆ - ಮುದ್ದೇಬಿಹಾಳ ವಿಜಯಪುರ ಲೆಟೆಸ್ಟ್ ನ್ಯೂಸ್

ಕೊರೊನಾ ಹಿನ್ನೆಲೆ ಎಲ್ಲೆಡೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿದ್ದ ಯುವ ಕಾಂಗ್ರೆಸ್ ಹಾಗೂ ಎನ್‌ಎಸ್‌ಯೂಐ ಕಾರ್ಯಕರ್ತರು ಯಾವುದೇ ನಿಯಮ ಪಾಲಿಸಲಿಲ್ಲ.

Rahul gandi birthday
Rahul gandi birthday
author img

By

Published : Jun 19, 2020, 9:16 PM IST

ಮುದ್ದೇಬಿಹಾಳ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಜನ್ಮದಿನದ ಪ್ರಯುಕ್ತ ಯುವ ಕಾಂಗ್ರೆಸ್ ಹಾಗೂ ಎನ್‌ಎಸ್‌ಯೂಐ ಸಂಘಟನೆ ನೇತೃತ್ವದಲ್ಲಿ ಪಟ್ಟಣದ ಗಣೇಶ ನಗರದಲ್ಲಿ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಮಹಮದ್ ರಫೀಕ ಶಿರೋಳ ಹಾಗೂ ಎನ್‌ಎಸ್‌ಯೂಐ ಜಿಲ್ಲಾಧ್ಯಕ್ಷ ಸದ್ದಾಂ ಕುಂಟೋಜಿ ಮಾತನಾಡಿ, ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಈ ಸಂದರ್ಭದಲ್ಲಿ ತೊಂದರೆಯಲ್ಲಿರುವ ಬಡವರ ನೆರವಿಗೆ ಧಾವಿಸುವಂತೆ ರಾಹುಲ್ ಗಾಂಧಿ ಅವರು ಕರೆ ನೀಡಿರುವ ಹಿನ್ನೆಲೆಯಲ್ಲಿ ಬಡವರಿಗೆ ದಿನಸಿ ಕಿಟ್ ವಿತರಣೆ ಮಾಡುತ್ತಿದ್ದೇವೆ ಎಂದರು.

ಸಾಮಾಜಿಕ ಅಂತರ ನಿಯಮ‌ ಉಲ್ಲಂಘನೆ : ಕೊರೊನಾ ಹಿನ್ನೆಲೆ ಎಲ್ಲೆಡೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿದ್ದ ಯುವ ಕಾಂಗ್ರೆಸ್ ಹಾಗೂ ಎನ್‌ಎಸ್‌ಯೂಐ ಕಾರ್ಯಕರ್ತರು ಯಾವುದೇ ನಿಯಮ ಪಾಲಿಸಲಿಲ್ಲ. ಬಡವರಿಗೆ ದಿನಸಿ ಕಿಟ್ ವಿತರಿಸುವ ಸಂದರ್ಭ ಅಂತರ ಕಾಯ್ದುಕೊಳ್ಳದೇ, ಮಾಸ್ಕ್ ಕೂಡಾ ಧರಿಸದಿರುವ ದೃಶ್ಯ ಕಂಡು ಬಂದಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.