ETV Bharat / state

ಈರುಳ್ಳಿ ಬೆಲೆ ದಿಢೀರ್​ ಕುಸಿತ: ವಿಜಯಪುರದಲ್ಲಿ ರೈತರ ಆಕ್ರೋಶ

ಈರುಳ್ಳಿ ಬೆಲೆ ದಿಢೀರ್​ ಕುಸಿತದ ಕಾರಣ ವಿಜಯಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರು ಈರುಳ್ಳಿ ತೂರಾಡಿ ದಲ್ಲಾಳಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Farmer outrage in Vijayapura
ಈರುಳ್ಳಿ ಬೆಲೆ ಕುಸಿತ:ವಿಜಯಪುರದಲ್ಲಿ ರೈತರ ಆಕ್ರೋಶ
author img

By

Published : Dec 8, 2019, 6:33 PM IST

ವಿಜಯಪುರ: ಈರುಳ್ಳಿ ಬೆಲೆ ಕುಸಿತದ ಕಾರಣ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರು ಈರುಳ್ಳಿ ತೂರಾಡಿ ದಲ್ಲಾಳಿಗಳ ವಿರುದ್ಧ ಕಿಡಿಕಾರಿದರು.

ಈರುಳ್ಳಿ ಬೆಲೆ ಕುಸಿತ:ವಿಜಯಪುರದಲ್ಲಿ ರೈತರ ಆಕ್ರೋಶ

ನಗರದ ಎಪಿಎಂಸಿ ಈರುಳ್ಳಿ ಮಾರುಕಟ್ಟೆಗೆ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ಅನೇಕ ಭಾಗಗಳಿಂದ ರೈತರು ಈರುಳ್ಳಿ ಮಾರಾಟ ಮಾಡಲು ಬಂದಿದ್ರು. ದಿಢೀರ್ ಈರುಳ್ಳಿ ಬೆಲೆ ಕುಸಿದ ಪರಿಣಾಮ ದಲ್ಲಾಳಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಭಾನುವಾರ ವಿಜಯಪುರ ಎಪಿಎಂಸಿ ಮಾರುಕಟ್ಟೆ ಪ್ರತಿ ಕ್ವಿಂಟಲ್‌ಗೆ 20 ಸಾವಿರ ಗಡಿ ದಾಟಿ ಮಾರಾಟವಾಗಿತ್ತು. ಆದ್ರೆ ಇಂದು 3 ಸಾವಿರಕ್ಕಿಂತ ಕಡಿಮೆ ಬೆಲೆಗೆ ಈರುಳ್ಳಿಯನ್ನು ರೈತರಿಂದ ದಲ್ಲಾಳಿಗಳು ಕೇಳಿದ್ದಕ್ಕಾಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರು ಗೊಂದಲಕ್ಕೀಡಾಗಿ ಮಾತಿನ ಚಕಮಕಿ ನಡೆಸಿದ್ರು.

Intro:ವಿಜಯಪುರ : ಬಂಗಾರದ ಬೆಲೆಗೆ ಮಾರಾಟವಾಗುತ್ತಿದ್ದ ಈರುಳ್ಳಿ ಬೆಲೆ ಕುಸಿತ ಕಾರಣ ಎಪಿಎಂಸಿ ಮಾರುಕಟ್ಟೆ ರೈತರು ಈರುಳ್ಳಿ ತೂರಾಟ ನಡೆಸಿ ದಲ್ಲಾಳಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

Body:ನಗರದ ಎಪಿಎಂಸಿ ಈರುಳ್ಳಿ ಮಾರುಕಟ್ಟೆಗೆ ವಿಜಯಪುರ ಹಾಗೂ ಬಾಗಲಕೋಟ ಜಿಲ್ಲೆಯ ಅನೇಕ ಭಾಗಗಳಿಂದ ರೈತರು ಈರುಳ್ಳಿ ಮಾರಾಟ ಮಾಡಲು ಬಂದಿದ್ರು ದಿಢೀರ್ ಈರುಳ್ಳಿ ಬೆಲೆಯಲ್ಲಿ ಕುಂಠಿತಗೊಂಡ ಪರಿಣಾಮವಾಗಿ ರೈತರು ದಲ್ಲಾಳಿಗಳ ವಿರುದ್ಧ ಈರುಳ್ಳಿ ತೂರಾಟ ನಡೆಸಿ ಆಕ್ರೋಶಗೊಂಡಿದ್ದಾರೆ. ಕಳೆದ ರವಿವಾರ ವಿಜಯಪುರ ಎಪಿಎಂಸಿ ಮಾರುಕಟ್ಟೆ ಪ್ರತಿ ಕ್ವಿಂಟಲ್‌ಗೆ 20 ಸಾವಿರ ಗಡಿ ದಾಟಿ ಮಾರಾಟವಾಗಿತು‌‌. ಅದ್ರೆ ಇಂದು 3 ಸಾವಿರಕ್ಕಿಂತ ಕಡಿಮೆ ಬೆಲೆಗೆ ಈರುಳ್ಳಿಯನ್ನು ರೈತರಿಂದ ದಲ್ಲಾಳಿಗಳು ಕೇಳಿದಕ್ಕಾಗಿ ಎಪಿಎಂಸಿ ಮಾರುಕಟ್ಟೆ ಬಂದ ರೈತರು ದಲ್ಲಾಳಿಗಳ ವಿರುದ್ಧ ಕಿಡಿಕಾರಿದ್ದಾರೆ.

Conclusion:ಜಿಲ್ಲೆಯ ಅನೇಕ ರೈತರು ಈರುಳ್ಳಿಗೆ ಬೆಂಬಲ ಬೆಲೆ ಸಿಗುವ ಭರವಸೆಯಲ್ಲಿ ವಾಹನಗಳನ್ನು ಬಾಡಿಗೆ ಪಡೆದು ಈರುಳ್ಳಿ ನಗರದ ಎಪಿಎಂಸಿ ಮಾರುಕಟ್ಟೆಗೆ ತಂದಿದ್ದರು. ದಿಢೀರ್ ಈರುಳ್ಳಿ ಬೆಲೆ ಕುಸಿತಕ್ಕೆ ರೈತರಿಂದ ವಿರೋಧ ವ್ಯಕ್ತವಾಯಿತು.

ಶಿವಾನಂದ ಮದಿಹಳ್ಳಿ
ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.