ETV Bharat / state

ಮೋದಿಯವರ ಇಚ್ಛಾಶಕ್ತಿಯ ಫಲವಾಗಿ ಸ್ವಂತ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ: ಅರುಣ ಶಹಾಪೂರ ...

ಬ್ರಿಟಿಷರ ಮೆಕಾಲೆ ಕೇಂದ್ರಿತ ಶಿಕ್ಷಣ ಪದ್ಧತಿ ಕೈಬಿಟ್ಟು ಭಾರತ ತನ್ನದೇ ಶಿಕ್ಷಣ ವ್ಯವಸ್ಥೆ ಅನುಸರಿಸಲು ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಅರುಣ ಶಹಾಪೂರ ತಿಳಿಸಿದರು.

National Education Policy -20 Information Workshop
ರಾಷ್ಟ್ರೀಯ ಶಿಕ್ಷಣ ನೀತಿ-2020 ಮಾಹಿತಿ ಕಾರ್ಯಾಗಾರ
author img

By

Published : Oct 6, 2020, 6:24 PM IST

ಮುದ್ದೇಬಿಹಾಳ: ಪ್ರಧಾನಿ ನರೇಂದ್ರ ಮೋದಿಯವರ ಇಚ್ಛಾಶಕ್ತಿಯ ಫಲವಾಗಿ 34 ವರ್ಷಗಳ ನಂತರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಅರುಣ ಶಹಾಪೂರ ತಿಳಿಸಿದರು.

ವಿಧಾನಪರಿಷತ್ ಸದಸ್ಯ ಅರುಣ ಶಹಾಪೂರ ಮಾತನಾಡಿದರು

ಪಟ್ಟಣದ ಎಂಜಿವಿಸಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಿಕ್ಷಣ ನೀತಿ-2020 ಮಾಹಿತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬ್ರಿಟಿಷರ ಮೆಕಾಲೆ ಕೇಂದ್ರಿತ ಶಿಕ್ಷಣ ಪದ್ಧತಿ ಕೈಬಿಟ್ಟು ಭಾರತ ತನ್ನದೇ ಶಿಕ್ಷಣ ವ್ಯವಸ್ಥೆ ಅನುಸರಿಸಲು ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಾಗಿದೆ.ಎಲ್ಲರಿಗೂ ಸಮಾನ ಶಿಕ್ಷಣ ಸಿಗಬೇಕು. ಇದರಲ್ಲಿ ನಾಲ್ವರು ಕರ್ನಾಟಕ ರಾಜ್ಯದ ತಜ್ಞರು ನೀತಿ ನಿರೂಪಣೆ ಸಮಿತಿಯಲ್ಲಿದ್ದು ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್ ಅವರ ನೇತೃತ್ವದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲಾಗಿದೆ ಎಂದರು.

ಅಂಗನವಾಡಿಯಲ್ಲಿರುವ ಶಿಕ್ಷಕರಿಗೆ ತರಬೇತಿ ನೀಡಲು ಪ್ರಸ್ತಾಪಿಸಲಾಗಿದೆ. ಪಿಯುಸಿ ಕಲಿತವರಿಗೆ ಆರು ತಿಂಗಳು, ಎಸ್.ಎಸ್.ಎಲ್.ಸಿ ಆದವರಿಗೆ ವರ್ಷಗಳ ಕಾಲ ತರಬೇತಿ ನೀಡಲಾಗುತ್ತದೆ. ಪೂರ್ವ ಪ್ರಾಥಮಿಕ ಹಂತ ರಾಷ್ಟ್ರದ ಶಿಕ್ಷಣ ವ್ಯವಸ್ಥೆಯ ಬುನಾದಿಯನ್ನು ಭದ್ರಗೊಳಿಸಲಿದೆ. ಸರ್ಕಾರಿ ವ್ಯವಸ್ಥೆಯಲ್ಲೂ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬುದು ಪ್ರಸ್ತಾಪಿಸಲಾಗಿದೆ. ಐದನೇ ತರಗತಿಯವರೆಗೆ ಮಾತೃ ಭಾಷೆಯಲ್ಲಿ ಶಿಕ್ಷಣ ಆಗಬೇಕು. ಆಗ ಮಗುವಿನ ಕಲಿಕೆ ಸ್ಪಷ್ಟವಾಗಿರುತ್ತದೆ ಎಂದರು.

ಶಿಕ್ಷಕ ಸಂಘದ ಪ್ರತಿನಿಧಿ ಸಿದ್ದು ಹಂಚಿನಾಳ ಮಾತನಾಡಿದರು. ಕಾಲೇಜಿನ ಕಾರ್ಯಾಧ್ಯಕ್ಷ ಅಶೋಕ ತಡಸದ, ಬಿಇಒ ವೀರೇಶ ಜೇವರಗಿ, ಶಿಕ್ಷಕ ಸಂಘದ ಪ್ರಮುಖರಾದ ರವೀಂದ್ರ ತುಂಗಳ, ಶಿವಾನಂದ ಗುಡ್ಡೋಡಗಿ, ಪ್ರಾಚಾರ್ಯ ಎ.ಬಿ.ಕುಲಕರ್ಣಿ, ಎಸ್. ಎನ್.ಪೊಲೇಶಿ, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಎಸ್.ಬಿ.ಚಲವಾದಿ, ಪ್ರಭಾರಿ ದೈಹಿಕ ಶಿಕ್ಷಣ ಪರಿವೀಕ್ಷಕ ಎಚ್.ಎಲ್.ಕರಡ್ಡಿ, ಬಿಆರ್‌ಸ ಯು.ಬಿ.ಧರಿಕಾರ, ಟಿ.ಡಿ.ಲಮಾಣಿ, ಬಿ.ಎಸ್.ಪಾಟೀಲ, ಎಸ್.ಆರ್.ನಾಯಕ ಮೊದಲಾದವರು ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.