ವಿಜಯಪುರ: ಅಣ್ಣ ಕುಡಿಯಲು ಪದೇ ಪದೇ ಹಣ ಕೇಳುತ್ತಿದ್ದರಿಂದ ಬೇಸತ್ತು ಆತನನ್ನು ಸ್ವಂತ ತಮ್ಮನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಚಡಚಣ ತಾಲೂಕಿನ ದೇವರನಿಂಬರಗಿ ಗ್ರಾಮದಲ್ಲಿ ನಡೆದಿದೆ. ಜಗ್ಗೇಶ್ ವಡ್ಡರ್ ಹತ್ಯೆಯಾದ ವ್ಯಕ್ತಿ. ರಾಹುಲ್ ವಡ್ಡರ್ ಪ್ರಕರಣದ ಕೊಲೆ ಆರೋಪಿ.
ತನ್ನ ಬಳಿ ಪ್ರತಿದಿನವೂ ಕುಡಿಯಲು ಜಗ್ಗೇಶ್ ಹಣ ಕೇಳುತ್ತಿದ್ದರಿಂದ ಬೇಸತ್ತು ರಾಹುಲ್ ವಡ್ಡರ್ ಕಳೆದ ರಾತ್ರಿ ಆಯುಧದಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಚಡಚಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ವಾಮಾಚಾರ ಮಾಡುತ್ತಿದ್ದ ಶಂಕೆ.. ಜಾರ್ಖಂಡ್ನಲ್ಲಿ ಮೂವರು ಮಹಿಳೆಯರ ಬರ್ಬರ ಹತ್ಯೆ