ETV Bharat / state

ಗುಡ್‌ನೈಟ್ ಲಿಕ್ವಿಡ್ ಕುಡಿದು ಎರಡು ವರ್ಷದ ಮಗು ಅಸ್ವಸ್ಥ - goodnight liquid drunk by child

ಮನೆಯ ಹಾಲ್‌ನಲ್ಲಿ ಸೊಳ್ಳೆ ಓಡಿಸಲೆಂದು ಹಚ್ಚಿದ್ದ ಗುಡ್‌ನೈಟ್ ಲಿಕ್ವಿಡ್‌ ಅನ್ನು ಎರಡು ವರ್ಷದ ಬಾಲಕ ಬಾಯಿಗೆ ಹಾಕಿಕೊಂಡಿದ್ದಾನೆ. ತಕ್ಷಣ ಅಸ್ವಸ್ಥಗೊಂಡ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಚೇತರಿಸಿಕೊಂಡಿದ್ದಾನೆ.

Goodnight Liquid Drunk by Two year old child
ಪೋಷಕರೇ ಎಚ್ಚರ: ಗುಡ್‌ನೈಟ್ ಲಿಕ್ವಿಡ್ ಕುಡಿದು ಎರಡು ವರ್ಷದ ಮಗು ಅಸ್ವಸ್ಥ!
author img

By

Published : Oct 11, 2020, 8:34 PM IST

ಮುದ್ದೇಬಿಹಾಳ: ಸೊಳ್ಳೆಗಳನ್ನು ಓಡಿಸಲೆಂದು ಹಚ್ಚುವ ಗುಡ್‌ನೈಟ್ ಲಿಕ್ವಿಡ್ ಕುಡಿದು ಎರಡು ವರ್ಷದ ಮಗು ತೀವ್ರ ಅಸ್ವಸ್ಥಗೊಂಡ ಘಟನೆ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ.

ಆಜಾದ್ ನಗರದ ನಿವಾಸಿ ಮಹ್ಮದ್​​ ಆಸೀಫ್ ಕವಡಿಮಟ್ಟಿ ಅವರ ಎರಡು ವರ್ಷದ ಪುತ್ರ ಅರಹಾನ್ ಕವಡಿಮಟ್ಟಿಯೇ ಮನೆಯಲ್ಲಿದ್ದ ಗುಡ್‌ನೈಟ್ ಲಿಕ್ವಿಡ್ ಕುಡಿದು ಅಸ್ವಸ್ಥಗೊಂಡ ಬಾಲಕ. ಮನೆಯ ಹಾಲ್‌ನಲ್ಲಿ ಸೊಳ್ಳೆ ಓಡಿಸಲೆಂದು ಹಚ್ಚಿದ್ದ ಗುಡ್‌ನೈಟ್ ಲಿಕ್ವಿಡ್‌ ಅನ್ನು ಕಿತ್ತು ಅದನ್ನು ಒಡೆದು ಬಾಯಿಗೆ ಹಾಕಿಕೊಂಡಿದ್ದಾನೆ. ಬಳಿಕ ಏಕಾಏಕಿ ಕೆಮ್ಮುವುದಕ್ಕೆ ಶುರು ಮಾಡಿದ್ದಾನೆ. ಇದರಿಂದ ಗಾಬರಿಗೊಂಡ ಪಾಲಕರು ಕೂಡಲೇ 108 ಆರೋಗ್ಯ ಕವಚ ಅಂಬ್ಯುಲೆನ್ಸ್ ಮೂಲಕ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಮಗುವನ್ನು ಕರೆತಂದಿದ್ದಾರೆ. ಆಗ ವೈದ್ಯರು ತಾಳಿಕೋಟಿ ಮಕ್ಕಳ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದಾರೆ. ತಡ ಮಾಡದೇ ಆಂಬ್ಯುಲೆನ್ಸ್​​ನಲ್ಲಿಯೇ ಮಗುವಿಗೆ ಚಿಕಿತ್ಸೆ ನೀಡುತ್ತಾ ಮಕ್ಕಳ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.

ಗುಡ್‌ನೈಟ್ ಲಿಕ್ವಿಡ್ ಕುಡಿದು ಎರಡು ವರ್ಷದ ಮಗು ಅಸ್ವಸ್ಥ

ಈ ಕುರಿತು ಈಟಿವಿ ಭಾರತ್ ಪ್ರತಿನಿಧಿಯೊಂದಿಗೆ ಮಾತನಾಡಿದ ಬಾಲಕನ ದೊಡ್ಡಪ್ಪ ಇಮಾಮ್‌ಅಲಿ ಕವಡಿಮಟ್ಟಿ, ಮನೆಯಲ್ಲಿ ಆಟವಾಡುತ್ತಲೇ ಮಗು ಲಿಕ್ವಿಡ್​​​ ಕುಡಿದಿದೆ. ಏಕಾಏಕಿ ಕೆಮ್ಮುವುದಕ್ಕೆ ಶುರು ಮಾಡಿದ್ದರಿಂದ ಆಸ್ಪತ್ರೆಗೆ ತಂದಿದ್ದೇವೆ. ಸದ್ಯ ಮಗು ಚೇತರಿಸಿಕೊಂಡಿದೆ ಎಂದು ತಿಳಿಸಿದರು.

ಮಗುವಿಗೆ ಚಿಕಿತ್ಸೆ ನೀಡುತ್ತಿರುವ ತಾಳಿಕೋಟಿ ಭಾಗ್ಯವಂತಿ ಆಸ್ಪತ್ರೆಯ ವೈದ್ಯ ಡಾ. ಈರಗಂಟೆಪ್ಪ ತಳ್ಳೊಳ್ಳಿ ಮಾತನಾಡಿ, ಗುಡ್‌ನೈಟ್ ಲಿಕ್ವಿಡ್ ಅಪಾಯಕಾರಿ ವಸ್ತು. ಅದನ್ನು ಸೇವಿಸಿದರೆ ಕೋವಿಡ್ ಲಕ್ಷಣಗಳು ಗೋಚರಿಸುತ್ತವೆ. ಪಾಲಕರು ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಸದ್ಯ ಮಗು ಚೇತರಿಸಿಕೊಂಡಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.