ETV Bharat / state

ಬಸರಕೋಡ ಪಿಕೆಪಿಎಸ್​ಗೆ 12 ಮಂದಿ ಅವಿರೋಧ ಆಯ್ಕೆ: 45 ವರ್ಷದ ಬಳಿಕ ಆಡಳಿತ ಚುಕ್ಕಾಣಿ ಬದಲು?

author img

By

Published : Nov 17, 2020, 7:28 AM IST

Updated : Nov 17, 2020, 9:39 AM IST

ಮುದ್ದೇಬಿಹಾಳ ತಾಲೂಕಿನ ಬಸರಕೋಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ 45 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಬೇರೆಯವರ ಪಾಲಾಗಲಿದೆ ಎಂಬ ಮಾತುಗಳು ಕೇಳಿ ಬಂದಿವೆ.

muddebihal agricultural co-operative society election
12 ಸ್ಥಾನಗಳಿಗೆ ಅವಿರೋಧ ಆಯ್ಕೆ

ಮುದ್ದೇಬಿಹಾಳ: ತಾಲೂಕಿನ ಬಸರಕೋಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತದ ಚುಕ್ಕಾಣಿ ಹಿಡಿದಾಗಿನಿಂದ ಒಬ್ಬರ ಹಿಡಿತದಲ್ಲಿತ್ತು. ಇದೇ ಮೊದಲ ಬಾರಿಗೆ ಬೇರೆಯವರ ಕೈಗೆ ಹೋಗುವ ಸಾಧ್ಯತೆ ಇದೆ.

ಅಧ್ಯಕ್ಷ ಸ್ಥಾನಕ್ಕೆ ಮೇಟಿ ಆಯ್ಕೆ ಬಹುತೇಕ ಪಕ್ಕಾ: ಜಿ.ಪಂ. ಮಾಜಿ ಸದಸ್ಯ ಹೇಮರಡ್ಡಿ ಬ.ಮೇಟಿ ಈಗಾಗಲೇ ಬಸರಕೋಡ ಭಾಗದಲ್ಲಿ ಪ್ರಭಾವಿ ನಾಯಕ ಆಗಿರುವುದರಿಂದ ಅವರೇ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಪಕ್ಕಾ ಎನ್ನಲಾಗ್ತಿದೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ದಿನಾಂಕ ನಿಗದಿಯಾಗಿಲ್ಲವಾದರೂ ಅವಿರೋಧ ಆಯ್ಕೆಯಾದವರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹೇಮರಡ್ಡಿ ಮೇಟಿ ಅವರ ಪರವಾಗಿಯೇ ಬಹುತೇಕ ಸದಸ್ಯರು ಒಲವು ಹೊಂದಿದ್ದಾರೆ. ಇನ್ನುಳಿದ ಉಪಾಧ್ಯಕ್ಷ ಸ್ಥಾನಕ್ಕೆ ಹಿರಿಯರೊಬ್ಬರನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ಸಂಘದ 12 ಸ್ಥಾನಗಳಿಗೆ ಸೋಮವಾರ ಅವಿರೋಧ ಆಯ್ಕೆ ನಡೆದಿದ್ದು, ಕಳೆದ 40 ವರ್ಷಗಳಿಗೂ ಹೆಚ್ಚು ಕಾಲ ಒಬ್ಬರ ಹಿಡಿತದಲ್ಲಿದ್ದ ಪಿಕೆಪಿಎಸ್ ಆಡಳಿತ ಮಂಡಳಿಯ ಚುಕ್ಕಾಣಿ ಬೇರೆಯವರ ಪಾಲಾಗಲಿದೆ ಎಂಬ ಮಾತುಗಳು ಕೇಳಿ ಬಂದಿವೆ.

ಬಸರಕೋಡ ಪಿಕೆಪಿಎಸ್ ವ್ಯಾಪ್ತಿಯಲ್ಲಿ ಬಸರಕೋಡ, ಗುಂಡಕರ್ಜಗಿ, ಸಿದ್ದಾಪೂರ, ಗುಡದಿನ್ನಿ ಹೀಗೆ ಒಟ್ಟು ನಾಲ್ಕು ಹಳ್ಳಿಗಳು ಬರುಲಿದ್ದು, ಐದು ಸಾಮಾನ್ಯ,ಎರಡು ಮಹಿಳಾ, ಹಿಂದುಳಿದ ವರ್ಗ ಅ, ಹಿಂದುಳಿದ ವರ್ಗ ಬ ಎಸ್‌ಸಿ, ಎಸ್​​​ಟಿ, ಬಿನ್ ಸಾಲಗಾರ ಕ್ಷೇತ್ರ ಹೀಗೆ 12 ಸ್ಥಾನಗಳಿಗೆ ಆಯ್ಕೆ ನಡೆಸಬೇಕಿತ್ತು. ಸದ್ಯ 12 ಸ್ಥಾನಗಳಿಗೆ ನಾಮಪತ್ರಗಳು ಮಾತ್ರ ಸ್ವೀಕಾರವಾಗಿರುವುದರಿಂದ ಎಲ್ಲ ಹನ್ನೆರಡು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ ಎಂದು ಚುನಾವಣಾಧಿಕಾರಿ ಎಸ್.ಡಿ. ಮನಗೂಳಿ ಘೋಷಿಸಿದ್ದಾರೆ.

ಅವಿರೋಧ ಆಯ್ಕೆಯಾದವರ ವಿವರ: ಸಾಮಾನ್ಯ ಕ್ಷೇತ್ರದಿಂದ ಸಿಂಧೂಬಲ್ಲಾಳ ಬಸವರಾಜ ನಾಡಗೌಡ, ಲಕ್ಕಪ್ಪ ರಾಯಪ್ಪ ಸೋಮನಾಳ, ಬಾಬು ಮಲಕಪ್ಪ ಸೂಳಿಭಾವಿ, ಹೇಮರಡ್ಡಿ ಬಸಪ್ಪ ಮೇಟಿ, ಬಸವರಾಜ ಭೀಮನಗೌಡ ಪಾಟೀಲ, ಮಹಿಳಾ ಕ್ಷೇತ್ರದಿಂದ ಪಾರ್ವತಿ ಅಂದಾನಯ್ಯ ಸಾಲಿಮಠ, ಸಿದ್ದಮ್ಮ ರಾಯನಗೌಡ ಬಿರಾದಾರ, ಹಿಂದುಳಿದ ಅ ವರ್ಗದಿಂದ ಶಾಂತಪ್ಪ ದೇಸಾಯಪ್ಪ ಸಂಕನಾಳ, ಹಿಂದುಳಿದ ಬ ವರ್ಗದಿಂದ ಸೋಮಪ್ಪ ನಿಂಗಪ್ಪ ಮೇಟಿ, ಎಸ್‌ಸಿ ವರ್ಗದಿಂದ ಯಲ್ಲಪ್ಪ ಮಲ್ಲಪ್ಪ ಮರೆಪ್ಪ ಚಲವಾದಿ, ಎಸ್‌ಟಿ ವರ್ಗದಿಂದ ಮಡಿವಾಳಪ್ಪ ಬಸಪ್ಪ ತಳವಾರ, ಸಾಲಗಾರ ಕ್ಷೇತ್ರದಿಂದ ಸುನೀಲಕುಮಾರ ಬಸವಂತ್ರಾಯ ಸೂಳಿಭಾವಿ ಆಯ್ಕೆಯಾಗಿದ್ದಾರೆ.

Last Updated : Nov 17, 2020, 9:39 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.