ವಿಜಯಪುರ: ನಮಗೆ ಸರಿಯಾದ ವ್ಯವಸ್ಥೆ ಕಲ್ಪಿಸಿ ಕೊಡಿ. ಇಲ್ಲ ಊರಿಗೆ ಹೋಗಲು ಅವಕಾಶ ಮಾಡಿಕೊಡಿ ಎಂದು ಕೂಡಗಿ ಉಷ್ಣ ವಿದ್ಯುತ್ ಸ್ಥಾವರದ ಎದುರು ವಲಸೆ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ.
ಕೋಲ್ಹಾರ ತಾಲೂಕಿನ ಕೂಡಗಿ ಬಳಿ ಇರುವ ಎನ್ಟಿಪಿಸಿ ಸ್ಥಾವರದ ಬಳಿ ಪ್ರತಿಭಟನೆ ನಡೆಸಿದ ವಲಸೆ ಕಾರ್ಮಿಕರು, ನಮಗೆ ಆಡಳಿತಾಧಿಕಾರಿಗಳು ಸರಿಯಾದ ಊಟದ ವ್ಯವಸ್ಥೆ ಮಾಡುತ್ತಿಲ್ಲ, ಕೆಲಸವೂ ಇಲ್ಲ, ಬಾಕಿ ವೇತನವೂ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮಗೆ ಬಾಕಿ ವೇತನ ಕೊಟ್ಟು ಕೆಲಸ ಕೊಡಿ, ಇಲ್ಲವೇ ನಮ್ಮ ರಾಜ್ಯಗಳಿಗೆ ಹೋಗಲು ಅವಕಾಶ ಮಾಡಿಕೊಡಿ ಎಂದು ಬೇಡಿಕೆ ಸಲ್ಲಿಸಿದರು. ನೂರಕ್ಕೂ ಅಧಿಕ ಕಾರ್ಮಿಕರು ಕೂಡಗಿ ಎನ್ಟಿಪಿಸಿ ಮುಖ್ಯದ್ವಾರದ ಎದುರು ಪ್ರತಿಭಟನೆ ನಡೆಸಿದ್ದಾರೆ.