ವಿಜಯಪುರ: ಕೇಂದ್ರ ಸಚಿವ, ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿಗೆ ಮತಯಾಚನೆ ವೇಳೆ ವಕೀಲನೋರ್ವ ಫುಲ್ ಕ್ಲಾಸ್ ತೆಗೆದುಕೊಂಡ ಘಟನೆ ನಗರದ ಜಿಲ್ಲಾ ನ್ಯಾಯವಾದಿಗಳ ಸಂಘದ ಸಭಾಭವನದಲ್ಲಿ ನಡೆದಿದೆ.
ನ್ಯಾಯವಾದಿಗಳ ಸಭಾ ಭವನದಲ್ಲಿ ಮತಯಾಚಿಸಲು ರಮೇಶ್ ಜಿಗಜಿಣಗಿ ಆಗಮಿಸಿದ್ದರು. ಈ ವೇಳೆ ಅವರ ಮೇಲೆ ವಕೀಲರು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಎರಡು ಬಾರಿ ಸಂಸದರಾದ ನೀವು ಜಿಲ್ಲೆಗೆ ಏನು ಕೊಡುಗೆ ಕೊಟ್ಟಿದ್ದೀರಿ ಎಂದು ವಕೀಲ ತಿಪ್ಪಣ್ಣ ದೊಡ್ಡಮನಿ ಪ್ರಶ್ನಿಸಿದ್ದಾರೆ.
ತಿಪ್ಪಣ್ಣರನ್ನ ಇತರೆ ವಕೀಲರು ಸಮಾಧಾನಪಡಿಸಲು ಮುಂದಾಗಿ ನಂತರ ಅವರನ್ನು ಸಭಾ ಭವನದಿಂದ ಹೊರಗೆ ಕರೆದೊಯ್ದರು. ಈ ವೇಳೆ ಮುಜುಗರಕ್ಕೀಡಾದ ರಮೇಶ್ ಜಿಗಜಿಣಗಿ, ಸ್ಥಳದಿಂದ ಕಾಲ್ಕಿತ್ತರು.