ವಿಜಯಪುರ : ಧರ್ಮರಾಜ್ ಚಡಚಣ ಹಾಗೂ ಗಂಗಾಧರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶಿವಾನಂದ ಬಿರಾದಾರ್ ತನ್ನ ಮನೆ ಎದುರು ಸಿಂಗಲ್ ಬ್ಯಾರಲ್ ಗನ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಭೀಮಾತೀರದ ಚಡಚಣ ತಾಲೂಕಿನ ಉಮರಾಣಿ ಗ್ರಾಮದಲ್ಲಿ ಘಟನೆ ನಡೆದಿದೆ.
ದೀಪಾವಳಿ ಹಿನ್ನೆಲೆಯಲ್ಲಿ ವಾಹನಗಳ ಪೂಜೆ ಬಳಿಕ ಗಾಳಿಯಲ್ಲಿ ಗುಂಡು ಹಾರಿಸಿ ಅದನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾನೆ. ಹಂತಕ ಧರ್ಮರಾಜ್ ಚಡಚಣ ಹಾಗೂ ಗಂಗಾಧರ ಹತ್ಯಾಕಾಂಡ ಪ್ರಕರಣದಲ್ಲಿ ಶಿವಾನಂದ ಬಿರಾದಾರ್ 5ನೇ ಆರೋಪಿಯಾಗಿದ್ದ.
ಕಳೆದ ಏಪ್ರಿಲ್ 22 ರಂದು ಹೈಕೋರ್ಟ್ ಶಿವಾನಂದ್ಗೆ ಜಾಮೀನು ಮಂಜೂರು ಮಾಡಿತ್ತು. ಬಳಿಕ ಜಿಲ್ಲಾಡಳಿತ ಶಿವಾನಂದ ಬಿರಾದಾರ್ ಸೇರಿ ಹಲವು ಆರೋಪಿಗಳ ಗನ್ ಲೈಸನ್ಸ್ ರದ್ದು ಪಡಿಸಿತ್ತು.