ವಿಜಯಪುರ : ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ಇಂಡಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಬಸ್ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಡಿಕ್ಕಿ ಹೊಡೆದ ಮೇಲೆ ಪಕ್ಕದಲ್ಲಿ ಇದ್ದ ಬ್ಯಾಂಕ್ ಕಟ್ಟಡಕ್ಕೆ ಗುದ್ದಿ ಒಳನುಗ್ಗಿದೆ. ಬಸ್ ಡಿಕ್ಕಿಯಾದ ಕೂಡಲೇ ಡ್ರಿಪ್ ಆದ ಟಿಸಿ ಬಳಿಕ ವಿದ್ಯುತ್ ಸಂಪರ್ಕವನ್ನೂ ಹೆಸ್ಕಾಂ ಕಡಿತಗೊಳಿಸಿದ್ದಾರೆ.
ಬಳ್ಳಾರಿಯಿಂದ ಬಸ್ ಇಂಡಿಗೆ ಹೊರಟಿತ್ತು. ಕೆಎ- 34, ಎಫ್-1383 ನಂಬರ್ನ ಬಸ್ ಇದಾಗಿದ್ದು, ಇದರಲ್ಲಿದ್ದ ಓರ್ವ ಬಾಲಕಿಗೆ ಗಾಯವಾಗಿದೆ. ಆಕೆಯನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವಘಡ ಸಂಭವಿಸಿದಾಗ ಬಸ್‌ನಲ್ಲಿದ್ದ ಪ್ರಯಾಣಿಕರು ನಿದ್ದೆಯಲ್ಲಿದ್ದರು. ಬಸ್ ಚಾಲಕನ ಅಜಾಗರೂಕತೆಯೇ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಇಂಡಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.