ವಿಜಯಪುರ : ಇಂಡಿ ತಾಲೂಕಿನ ಬರಗುಡಿ ಗ್ರಾಮದಲ್ಲಿ ಮಳೆರಾಯನ ಕೃಪೆಗಾಗಿ ಇಲ್ಲಿನ ರೈತರು ಗುರ್ಜಿ ಪೂಜೆ ಸಲ್ಲಿಸಿ ಕುಣಿದು ಪ್ರಾರ್ಥನೆ ಸಲ್ಲಿಸಿದರು. ತವೆಯ ಮೇಲೆ ಕಪ್ಪೆಯನ್ನಿಟ್ಟು, ಕೆಸರನ್ನು ಮೆತ್ತಿ, ಕರಕಿಯನ್ನು ನೆಟ್ಟು, ಅರಶಿಣ, ಕುಂಕುಮ ಹಚ್ಚಿ, ಪೂಜೆ ಸಲ್ಲಿಸಿ, ಸಾಮೂಹಿಕವಾಗಿ ವರುಣನ ಕೃಪೆಗಾಗಿ ಆರಾಧಿಸಿದ ದೃಶ್ಯ ಗಮನಸೆಳೆಯಿತು.
![vijayapura](https://etvbharatimages.akamaized.net/etvbharat/prod-images/kn-vjp-03-gujiri-pooja-av-7202140_19072019174320_1907f_1563538400_474.jpg)
ಬಳಿಕ ಓರ್ವ ರೈತನೊಬ್ಬ ಗುರ್ಜಿ ಕುಣಿತದ ನಾದಕ್ಕೆ ಹೆಜ್ಜೆ ಹಾಕಿ ಮಳೆಯನ್ನು ಆರಾಧಿಸಿದ್ದು ವಿಶೇಷವಾಗಿತ್ತು. ನಂತರ ಗ್ರಾಮದ ದುರ್ಗಾ ದೇವಿ ದೇವಸ್ಥಾನದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಗ್ರಾಮಸ್ಥರೆಲ್ಲರೂ ಒಗ್ಗೂಡಿ ಮೆರವಣಿಗೆ ನಡೆಸಿದರು.
![vijayapura](https://etvbharatimages.akamaized.net/etvbharat/prod-images/kn-vjp-03-gujiri-pooja-av-7202140_19072019174320_1907f_1563538400_986.jpg)
ಕಾರ್ಯಕ್ರಮದಲ್ಲಿ ವಿಠ್ಠಲಗೌಡ ಬಿರಾದಾರ, ಶಿವಾನಂದ ವಿಜಾಪುರೆ, ಅಮರಸಿದ್ಧ ದೇಸಾಯಿ, ಭೈರಪ್ಪ ಕನ್ನೊಳ್ಳಿ, ಭೂತಾಳಿ ಬಿರಾದಾರ, ಅಭಿಮನ್ಯು ಕೋಳಿ, ಉಮೇಶ ಗಿರಣಿವಡ್ಡರ, ಮದರಗೌಡ ಪಟೇಲ್ ಸೇರಿದಂತೆ ಹಲವು ರೈತರು, ಯುವಕರು ಭಾಗವಹಿಸಿದ್ದರು.