ವಿಜಯಪುರ: ರಾಜ್ಯದಲ್ಲಿ ಸರ್ಕಾರ ಸ್ಥಿರವಾಗಿಲ್ಲ. ಇಂದು ಕಾಂಗ್ರೆಸ್ ನಂಬಿ ಕುಮಾರಸ್ವಾಮಿ ಹಾಳಾದರು ಎಂದು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಹೇಳಿದರು.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನ ಹತ್ತು ಜನ ಶಾಸಕರು ಮೊದಲು ಓಡಿ ಹೋದರು, ಬಳಿಕ ಜೆಡಿಎಸ್ ನವರ ತಲೆ ಕೆಡಿಸಿ ಕರೆದುಕೊಂಡು ಹೋದರು.ಇದರಲ್ಲಿ ಬಿಜೆಪಿಯವರ ಯಾವುದೇ ಕೈವಾಡ ಇಲ್ಲ ಎಂದರು.
ತಾವಾಗಿಯೇ ಬಂದು ಬಿಜೆಪಿ ಸೇರುತ್ತೇನೆ ಎಂದರೆ ಅದು ರಾಜ್ಯ ನಾಯಕರಿಗೆ ಬಿಟ್ಟ ವಿಚಾರ ಎಂದ ಅವರು, ಯತ್ನಾಳ ಪರ ಬ್ಯಾಟಿಂಗ್ ಮಾಡಿ, ಜಿಲ್ಲೆಯಲ್ಲಿ ಮೂರು ಜನ ಬಿಜೆಪಿಯ ಶಾಸಕರು ಪ್ರಭಾವಿಗಳಿದ್ದಾರೆ. ಇದರಲ್ಲಿ ಯಾರಿಗೆ ಬೇಕಾದರೂ ಸಚಿವ ಸ್ಥಾನ ಕೊಡಲಿ ಎಂದು ಹೇಳಿದರು.