ಮುದ್ದೇಬಿಹಾಳ(ವಿಜಯಪುರ): ಮನುಷ್ಯ ಹಾಗೂ ಮೂಕ ಪ್ರಾಣಿಗಳ ಮಧ್ಯೆ ಅವಿನಾಭಾವ ಸಂಬಂಧವಿದೆ. ಇದಕ್ಕೆ ಪೂರಕವಾಗುವಂತೆ ಪಟ್ಟಣದ ಪುರಸಭೆ ಸದಸ್ಯರೊಬ್ಬರ ಕುಟುಂಬದವರು ತಾವು ಮನೆಯಲ್ಲಿ ಸಾಕಿದ ಶ್ವಾನಕ್ಕೂ ಬರ್ತ್ಡೇ ಆಚರಣೆ ಮಾಡಿ ಸಂಭ್ರಮಿಸಿದರು.
ಪಟ್ಟಣದ ವಿದ್ಯಾನಗರ ನಿವಾಸಿ ಶುಭಂ ಜ್ಯುವೆಲ್ಲರಿ ಮಾಲೀಕ ವಿಜಯಕುಮಾರ್ ಬಡಿಗೇರ ಹಾಗೂ ಪುರಸಭೆ ಸದಸ್ಯೆ ಸಹನಾ ಬಡಿಗೇರ ಅವರೇ ತಮ್ಮ ಮನೆಯಲ್ಲಿ ಸಾಕಿರುವ 'ಟಫಿ' ಹೆಸರಿನ ಶ್ವಾನಕ್ಕೆ ಮೊದಲನೇ ವರ್ಷದ ಬರ್ತ್ಡೇಯನ್ನು ಕೇಕ್ ಕತ್ತರಿಸಿ ಆಚಸರಿಸಿದರು. ಮನೆಯ ಸದಸ್ಯನಂತಿರುವ ಶ್ವಾನದ ಹುಟ್ಟುಹಬ್ಬ ಆಚರಣೆಗೆ ಬಂದವರಿಗೆ ಇಡ್ಲಿ, ಸಾಂಬರ್, ಜ್ಯೂಸ್ ವಿತರಿಸಿದರು.
ಲಾಕ್ಡೌನ್ ಅವಧಿಯಲ್ಲಿ ಹೊರಹೋಗುವಂತಿಲ್ಲ. ಮಕ್ಕಳು ಮನೆಯಲ್ಲಿ ಇದ್ದು ಬೇಸರವಾಗುತ್ತಿದೆ ಎಂದಾಗ ಹೊಳೆದಿದ್ದೇ ನಮ್ಮ ಶ್ವಾನ. ಅದನ್ನು ನಾವು ತಂದು ವರ್ಷ ಕಳೆದಿತ್ತು. ಹೀಗಾಗಿ ಎಲ್ಲರೂ ಸೇರಿ ಬರ್ತ್ಡೇ ಸೆಲೆಬ್ರೇಟ್ ಮಾಡಿದೆವು ಎಂದು ಸಹನಾ ಬಡಿಗೇರ ಹೇಳಿದರು.
ಇದನ್ನೂ ಓದಿ: ಕುಕ್ಕರ್ ಮೂಲಕ ಸ್ಟ್ರೀಮಿಂಗ್ ವ್ಯವಸ್ಥೆ... ಗ್ರಾಮದಲ್ಲಿ ಕಡಿಮೆಯಾಯ್ತು ಕೊರೊನಾ ಪಾಸಿಟಿವ್ ಕೇಸ್!