ETV Bharat / state

ಹಲ್ಲು ಸೆಟ್​ ಮುರಿದ ಕಾರಣಕ್ಕೆ ಬಡಿಗೆಯಿಂದ ಹೊಡೆದು ಬಾಲಕಿ ಹತ್ಯೆ ಮಾಡಿದ ಕ್ರೂರಿ - ವಿಜಯಪುರದಲ್ಲಿ ಬಾಲಕಿ ಹತ್ಯೆ

ಕೆಲ ದಿನಗಳ ಹಿಂದೆ ಬಾಲಕಿಯೊಬ್ಬಳ ಹತ್ಯೆ ನಡೆದಿತ್ತು. ಇದನ್ನು ಗಮನಿಸಿದ್ದ ಪೊಲೀಸರು ಅತ್ಯಾಚಾರ ಶಂಕೆ ವ್ಯಕ್ತಪಡಿಸಿ ಪ್ರಕರಣ ದಾಖಲಿಸಿದ್ದರು. ಆದರೆ, ಈಗ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದೆ.

A man killed a girl vijayapura
ಹಲ್ಲು ಸೆಟ್​ ಮುರಿದ ಕಾರಣಕ್ಕೆ ಬಡಿಗೆಯಿಂದ ಹೊಡೆದು ಬಾಲಕಿ ಹತ್ಯೆ ಮಾಡಿದ ಕ್ರೂರಿ
author img

By

Published : Aug 16, 2021, 3:09 PM IST

Updated : Aug 16, 2021, 3:28 PM IST

ವಿಜಯಪುರ: ಕೇವಲ ಹಲ್ಲುಸೆಟ್ ಒಡೆದಳು ಎನ್ನುವ ಕಾರಣಕ್ಕೆ 6 ವರ್ಷದ ಬಾಲಕಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ದೇವಸ್ಥಾನದ ಬಳಿ ಆಟವಾಡುತ್ತಿದ್ದ ಆರು ವರ್ಷದ ಬಾಲಕಿ ಶವವಾಗಿ ಪತ್ತೆಯಾಗಿದ್ದ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಓರ್ವನನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಸಂಗನಗೌಡ ಬಾಬುಗೌಡ ಬಿರಾದಾರ ಎಂದು ಗುರುತಿಸಲಾಗಿದೆ. ಕಳೆದ ಆಗಷ್ಟ್​ 9 ರಂದು ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಬೊಳೇಗಾಂವ್ ಗ್ರಾಮದಲ್ಲಿ ಈ ಘಟನೆ ನಡೆದಿತ್ತು.

ಕಾಣೆಯಾಗಿ ಎರಡು ದಿನಗಳ ಬಳಿಕ 6 ವರ್ಷದ ಬಾಲಕಿ ಶವವಾಗಿ ಪತ್ತೆಯಾಗಿದ್ದಳು. ಮೇಲ್ನೋಟಕ್ಕೆ ಪ್ರಕರಣದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು‌ ಶಂಕೆ ವ್ಯಕ್ತವಾಗಿತ್ತು. ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.

ಆನಂದ ಕುಮಾರ್,​​ ಎಸ್​ಪಿ

ಸಂಬಂಧಿಸಿದ ಸುದ್ದಿ: ಕಾಣೆಯಾಗಿದ್ದ ಬಾಲಕಿ ಶವವಾಗಿ ಪತ್ತೆ: ಅಪಹರಿಸಿ ಕೊಂದಿರುವ ಶಂಕೆ

ಘಟನೆ ಹಿನ್ನೆಲೆ: ಎರಡು ತಿಂಗಳ ಹಿಂದೆ ಬೋಳೆಗಾಂವ ಗ್ರಾಮದ ಕೊಲೆ ಆರೋಪಿ ಸಂಗನಗೌಡ ತಾಯಿ ತನ್ನ ಮನೆ ಮುಂದೆ ಹಲ್ಲಿನ ಸೆಟ್ ಬಿಚ್ಚಿಟ್ಟಿದ್ದಳು. ಈ ವೇಳೆ, ಅಲ್ಲೆ ಆಟವಾಡುತ್ತಿದ್ದ ಬಾಲಕಿ ಆ ಹಲ್ಲಿನ ಸೆಟ್​​​ನ್ನು ಮುರಿದು ಹಾಕಿದ್ದಾಳೆ. ಇದರಿಂದಾಗಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿದೆ.

ತನ್ನ ತಾಯಿಯ ಹಲ್ಲುಸೆಟ್ ಒಡೆದ ಕಾರಣ ಆಕೆ ಊಟ ಮಾಡಲು ಪರದಾಡುವುದನ್ನು‌ ನೋಡಿದ್ದ ಸಂಗನಗೌಡ ಬಿರಾದಾರ, ಮನನೊಂದು ಜೊತೆಗೆ ತೀವ್ರ ಕೋಪದಿಂದ ಹಲ್ಲು ಸೆಟ್​ ಮುರಿದ ಬಾಲಕಿಯನ್ನು ಮುಗಿಸುವ ಪ್ಲಾನ್​ ಮಾಡಿದ್ದಾನೆ. ಕಳೆದ ಆ. 9 ರಂದು ಬಾಲಕಿ ಗ್ರಾಮದ ಹನುಮಂತ ದೇವರ ದೇವಸ್ಥಾನದ ಬಳಿ ಆಟವಾಡುತ್ತಿದ್ದಳು. ಈ ವೇಳೆ, ಅಲ್ಲಿಗೆ ಬಂದ ಆರೋಪಿ ಸಂಗನಗೌಡ ಬಿರಾದಾರ ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ. ಬಳಿಕ ಬಾಲಕಿ ಕೈ - ಕಾಲು ಕಟ್ಟಿ, ಬಡಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ತದನಂತರ ಶವವನ್ನು ಸಮೀಪದ ಹಳ್ಳದಲ್ಲಿ ಎಸೆದು ಹೋಗಿದ್ದಾನೆ.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಎಸ್​ಪಿ ಆನಂದಕುಮಾರ್​ ತಿಳಿಸಿದ್ದಾರೆ. ಘಟನೆ ಸಂಬಂಧ ಹೊರ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.

Last Updated : Aug 16, 2021, 3:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.