ETV Bharat / state

ವಿದೇಶಿ ವ್ಯಾಮೋಹ ಬಿಟ್ಟು ಸ್ವದೇಶಕ್ಕೆ ಬಂದ್ರು: ಕೃಷಿಯಲ್ಲಿ ತೊಡಗಿಸಿಕೊಂಡು ಮಾದರಿಯಾದ್ರು!!

ವಿದೇಶಿ ಉದ್ಯೋಗ ತೊರೆದು ತಾಯ್ನಾಡಿಗೆ ಬಂದು ಕೃಷಿಯಲ್ಲಿ ತೊಡಗಿಸಿಕೊಂಡ ವಿಜಯಪುರದ ಕುಟುಂಬವೊಂದು ಇಂದಿನ ಯುವ ಸಮುದಾಯಕ್ಕೆ ಮಾದರಿಯಾಗಿದೆ. ಈ ಕುರಿತು ವಿಶೇಷ ಸುದ್ದಿ ಇಲ್ಲಿದೆ.

ಭಾರತೀಯ ಕೃಷಿಯಲ್ಲಿ ತೊಡಗಿದ ಮಾದರಿ ದಂಪತಿ
ಭಾರತೀಯ ಕೃಷಿಯಲ್ಲಿ ತೊಡಗಿದ ಮಾದರಿ ದಂಪತಿ
author img

By

Published : Jul 31, 2020, 9:00 AM IST

Updated : Jul 31, 2020, 10:13 AM IST

ವಿಜಯಪುರ: ವಿದೇಶಿ ವ್ಯಾಮೋಹ ಇಂದಿನ ಯುವ ಜನತೆಯಲ್ಲಿ ಹೆಚ್ಚುತ್ತಿದೆ. ವಿದೇಶದಲ್ಲಿದ್ದರೆ ಸಮಾಜದಲ್ಲಿ ದೊರೆಯುವ ಗೌರವವೇ ಬೇರೆ ಎನ್ನುವ ಭ್ರಮಾಲೋಕದಲ್ಲಿ ಬದುಕುತ್ತಿದ್ದಾರೆ. ಇಂತಹುವುದರಲ್ಲಿ ಬೇರೆಯಾಗಿ ಎದ್ದು ಕಾಣುವ ಈ ದಂಪತಿ ವಿದೇಶಿದಲ್ಲಿ ಕೈ ತುಂಬಾ ಸಂಬಳ ಪಡೆಯುತ್ತಿದ್ದರೂ, ಅದನ್ನು ಬಿಟ್ಟು ತಾಯಿನಾಡಿಗೆ ಬಂದು ಕೃಷಿಯಲ್ಲಿ ಬದುಕು ಕಟ್ಟಿಕೊಂಡಿದೆ. ವಾರ್ಷಿಕ ಲಕ್ಷಾಂತರ ರೂ. ಸಂಪಾದಿಸಿ ಆರೋಗ್ಯಕರ ಜೀವನ ನಡೆಸುತ್ತಿದೆ.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದ ನಿವಾಸಿ ಶಿವರಾಜ್ ಪಾರಗೊಂಡ ಎಂಟೆಕ್ ಮುಗಿಸಿ ಜರ್ಮನಿಯಲ್ಲಿ 8 ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದರು. ಇವರ ಪತ್ನಿ ಪುಷ್ಪಾ ಸಹ ಪತಿಯ ಕಂಪನಿಯಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದರು. ಭಾರತದ ರೂಪಾಯಿ ಲೆಕ್ಕದಲ್ಲಿ 50 ಲಕ್ಷ ರೂ. ತಿಂಗಳ ಸಂಬಳ ಪಡೆಯುತ್ತಿದ್ದರು. ಜರ್ಮನಿಯ ಇವರ ಸ್ನೇಹಿತ ರಿಚರ್ಡ್ ಲೂಯಿ ಅವರ ಮನೆಗೆ ಡಿನ್ನರ್​ಗೆ ಹೋದಾಗ ಅವರು ಭಾರತದ ಕೃಷಿ ಪದ್ದತಿಯಾಗಿರುವ ನೈಸರ್ಗಿಕ, ಸುಸ್ಥಿರ ಕೃಷಿ ಅಳವಡಿಸಿಕೊಂಡು 150 ಕುಟುಂಬಗಳಿರುವ ಬಡಾವಣೆಯನ್ನು ವೆಜಿಟೇಬಲ್ ವಿಲೇಜ್ ಆಗಿ ಪರಿವರ್ತಿಸಿದ್ದರು. ಇದು ಶಿವರಾಜ್. ದಂಪತಿಗೆ ಪ್ರೇರಣೆಯಾಗಿತ್ತು. ನಮ್ಮ ದೇಶದ ಪುರಾತನ ಕೃಷಿ ಪದ್ದತಿಯನ್ನು ವಿದೇಶಿಗನೊಬ್ಬ ಅಳವಡಿಸಿಕೊಂಡು ಯಶಸ್ವಿಯಾಗಿರುವುದು ಅಚ್ಚರಿ ಮೂಡಿಸಿದ್ದಲ್ಲದೇ, ಬೇರೆ ದೇಶದಲ್ಲಿ ಅವರ ಕೈ ಕೆಳಗೆ ದುಡಿಯುವ ಬದಲು ನಮ್ಮ ದೇಶದಲ್ಲಿ ಕೃಷಿಯಲ್ಲಿ ಏನಾದರೂ ಸಾಧನೆ ಮಾಡಿ ಬೇರೆಯವರಿಗೆ ಮಾದರಿಯಾಗಬೇಕು ಎಂದು ಶಿವರಾಜ್ ದಂಪತಿ 2017ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಭಾರತಕ್ಕೆ ವಾಪಸ್ ಆಗಿದ್ದಾರೆ.

ಭಾರತೀಯ ಕೃಷಿಯಲ್ಲಿ ತೊಡಗಿದ ವಿಜಯಪುರದ ಮಾದರಿ ದಂಪತಿ

ಜರ್ಮನಿಯಿಂದ ಲಕ್ಷಾಂತರ ರೂ. ಸಂಬಳ ಬರುವ ಉದ್ಯೋಗ ಬಿಟ್ಡು ತವರಿಗೆ ಆಗಮಿಸಿದಾಗ ಇವರಿಗೇನು ಮನೆಯಲ್ಲಿ ರತ್ನಗಂಬಳಿ ಸ್ವಾಗತವೇನು ಸಿಗಲಿಲ್ಲ. ಕುಟುಂಬ ವರ್ಗ, ಸ್ನೇಹಿತರು, ಸಂಬಂಧಿಕರು ಇದೇನು ಹುಚ್ಚಾಟ ಎಂದು ಬೈದವರೇ ಹೆಚ್ಚು. ಶಿವರಾಜ್ ತಾಯಿಯಂತೂ ಆಘಾತಕ್ಕೆ ಒಳಗಾಗಿ ನಾಲ್ಕು ದಿನ ಉಪವಾಸ ಮಾಡಿದ್ದರಂತೆ. ತಂದೆ ತನ್ನ 80 ಎಕರೆ ಭೂಮಿಯಲ್ಲಿ ಒಂದಿಂಚು ನೀಡುವುದಿಲ್ಲ ಎಂದು ಗದರಿಸಿದ್ದಾರೆ. ಇಷ್ಟು ಸಾಲದ್ದಕ್ಕೆ ಪತ್ನಿ ಪುಷ್ಪಾ ಪೋಷಕರಿಂದಲೂ ಕೃಷಿ ಬೇಡ ವಾಪಸ್ ಜರ್ಮನಿಗೆ ಹೋಗಲು ಒತ್ತಡ ಹಾಕಿದ್ದಾರೆ. ಆದರೆ, ಪಟ್ಟು ಬಿಡದ ದಂಪತಿಗೆ ಅನಿರ್ವಾಯವಾಗಿ ರೂಗಿ - ಸಾಲೋಟಗಿ ರಸ್ತೆಯ 8 ಎಕರೆ ಬರಡು ಭೂಮಿ ನೀಡಿದ್ದಾರೆ. ಇದನ್ನು ನೋಡಿಯಾದರೂ ವಾಪಸ್ ಹೋಗಬಹುದು ಎಂದು. ಇದಕ್ಕೂ ಜಗ್ಗದೇ, ಇದ್ದ ಜಮೀನಿನಲ್ಲಿ 4.5 ಎಕರೆ ಭೂಮಿಯಲ್ಲಿ ತೋಟಗಾರಿಕೆ, ಸಾವಯವ ಕೃಷಿ, ಸಿರಿಧಾನ್ಯ ಬೆಳೆದು ಮೂರು ವರ್ಷದಲ್ಲಿ ಯಶಸ್ವಿ ಕೃಷಿ ದಂಪತಿಯಾಗಿದ್ದಾರೆ. ಇದರ ಜತೆ ತಮ್ಮ ಎರಡು ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿ ಬೆಳೆಸುತ್ತಿರುವ ತೃಪ್ತಿ ಅವರಲ್ಲಿದೆ.

2017ರಲ್ಲಿ ಜರ್ಮನಿಯಿಂದ ಉದ್ಯೋಗ ಬಿಟ್ಟು ಬಂದ ಮೇಲೆ 4 ಎಕರೆ ಭೂಮಿಯಲ್ಲಿ ಪೇರು, ಲಿಂಬೆ, ದಾಳಿಂಬೆ, ಸಪೋಟಾ ಸೇರಿದಂತೆ 13 ವಿವಿಧ ರೀತಿಯ ಫಲಗಳನ್ನು ಬೆಳೆಯುತ್ತಿದ್ದಾರೆ. 2,400 ಗಿಡಗಳನ್ನು ಬೆಳೆಸಲಾಗಿದೆ. ಹಣ್ಣು ಬೆಳೆಯ ಮಧ್ಯೆ ತರಕಾರಿ ಬೆಳೆಸುತ್ತಿದ್ದಾರೆ. ಉಳಿದ 5 ಎಕರೆ ಭೂಮಿಯನ್ನು ಒಣ ಬೇಸಾಯಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇವರ ಪರಿಶ್ರಮ ಕೃಷಿ ಕಂಡು ಅವರ ತಂದೆ ಉಳಿದ 72 ಎಕರೆ ಜಮೀನು ಸಹ ಬೇಸಾಯಕ್ಕೆ ಉಪಯೋಗಿಸಲು‌ ನೀಡಿದ್ದಾರೆ. ವಿದೇಶಿ ವ್ಯಾಮೋಹ ತೊರೆದು ಭೂತಾಯಿ ನಂಬಿದರೆ ನಾವೇ ಹತ್ತಾರು ಜನರಿಗೆ ಉದ್ಯೋಗ ನೀಡುವ ಸಾಮರ್ಥ್ಯ ಹೊಂದುತ್ತೇವೆ ಎನ್ನುವುದನ್ನ ಈ ದಂಪತಿ ತೋರಿಸಿಕೊಟ್ಟಿದ್ದಾರೆ.

Last Updated : Jul 31, 2020, 10:13 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.