ಶಿರಸಿ : ಚಂದ್ರಮಾನ ಯುಗಾದಿ ಅಂಗವಾಗಿ ಸಹಸ್ರಾರು ಭಕ್ತರು ಶಕ್ತಿದೇವತೆ ಶಿರಸಿಯ ಮಾರಿಕಾಂಬಾ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಮುಂಜಾನೆಯೇ ಸ್ನಾನ ಮಾಡಿ, ಹೊಸ ಬಟ್ಟೆ ತೊಟ್ಟು ದೇವಾಲಯಕ್ಕೆ ಆಗಮಿಸಿದ ಭಕ್ತರು ಇಷ್ಟಾರ್ಥ ಸಿದ್ಧಿಸುವಂತೆ ಪ್ರಾರ್ಥಿಸಿದರು. ವಿಕಾರಿ ಸಂವತ್ಸರದಲ್ಲಿ ಒಳಿತಾಗಲೆಂದು ಬೇಡಿಕೊಂಡರು.
ಹಬ್ಬದ ನಿಮಿತ್ತ ಇಡೀ ನಗರ ಬ್ಯಾನರ್, ಬಂಟಿಂಗ್ಸ್ಗಳಿಂದ ಕೇಸರಿಮಯವಾಗಿದ್ದು, ಉತ್ಸವಾಚರಣೆ ಅದ್ಧೂರಿಯಾಗಿ ನಡೆಯಿತು.