ETV Bharat / state

ಸುಪ್ರೀಂಕೋರ್ಟ್ ಆದೇಶಕ್ಕೆ ಉತ್ತರ ಕನ್ನಡ ಅರಣ್ಯ ನಿವಾಸಿಗಳಲ್ಲಿ ಹೆಚ್ಚಿದ ಆತಂಕ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿಕ್ರಮಣದಾರರಿಗೆ ಭೂಮಿ ಮಂಜೂರು ಮಾಡುವ ಕುರಿತು ಹಲವಾರು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಅರಣ್ಯ ಭೂಮಿಯಲ್ಲಿ ಮನೆ ಮಾಡಿಕೊಂಡು ಜೀವನ ನಡೆಸುವವರಿಗೆ ಸುಪ್ರೀಂ ಕೋರ್ಟ್​ ಆದೇಶ ಆತಂಕ ಮೂಡಿಸಿದೆ..

supreme-court-decision-on-uttara-kannada-forest-dwellers
ಸುಪ್ರೀಂಕೋರ್ಟ್ ಆದೇಶಕ್ಕೆ ಉತ್ತರ ಕನ್ನಡ ಅರಣ್ಯ ನಿವಾಸಿಗಳಲ್ಲಿ ಹೆಚ್ಚಿದ ಆತಂಕ
author img

By

Published : Jun 11, 2021, 12:51 PM IST

Updated : Jun 11, 2021, 1:47 PM IST

ಕಾರವಾರ : ಅರಣ್ಯ ಪ್ರದೇಶದಲ್ಲಿ ವಾಸ್ತವ್ಯಕ್ಕಾಗಿ ಮನೆ ಕಟ್ಟಿಕೊಂಡಿರುವ ಸುಮಾರು 10 ಸಾವಿರ ಕಟ್ಟಡಗಳು ಅನಧಿಕೃತವೆಂದು ಘೋಷಿಸಿ, ಮುಂದಿನ ಆರು ವಾರಗಳಲ್ಲಿ ಸಂಪೂರ್ಣ ಒಕ್ಕಲೆಬ್ಬಿಸಬೇಕೆಂಬ ಸುಪ್ರೀಂಕೋರ್ಟಿನ ಆದೇಶದಿಂದ ಇದೀಗ ಉತ್ತರಕನ್ನಡ ಜಿಲ್ಲೆಯ ಅರಣ್ಯ ಪ್ರದೇಶದಂಚಿನ ಸಾವಿರಾರು ಕುಟುಂಬಗಳಲ್ಲಿ ಆತಂಕ ಎದುರಾಗಿದೆ.

ಹರಿಯಾಣ ರಾಜ್ಯದ ಫರೀದಾಬಾದ್ ಜಿಲ್ಲೆಯ ಲಕ್ಕಾರ್‌ಪುರ್ ಕೋರಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಸುಮಾರು 10 ಸಾವಿರ ಕುಟುಂಬಗಳು ವಾಸ್ತವ್ಯಕ್ಕಾಗಿ ಅರಣ್ಯ ಭೂಮಿ ಅತಿಕ್ರಮಿಸಿದ್ದರು. ಅತಿಕ್ರಮಣವು ಅನಧಿಕೃತವೆಂದು ಘೋಷಿಸಿ ಅರಣ್ಯ ಭೂಮಿಯಲ್ಲಿ ಅನಧಿಕೃತ ಅತಿಕ್ರಮಣದಾರರೊಂದಿಗೆ ಯಾವುದೇ ರೀತಿಯ ರಾಜಿಯಾಗಲಿ ಅಥವಾ ವಿಶೇಷ ವಿನಾಯಿತಿಗಾಗಲಿ ಅರ್ಹರಲ್ಲವೆಂದು ಗಂಭೀರವಾಗಿ ಸುಪ್ರೀಂ ಆದೇಶದಲ್ಲಿ ವ್ಯಾಖ್ಯಾನಿಸಿದೆ.

ಅರಣ್ಯ ಭೂಮಿ ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ

ಅಲ್ಲದೇ, ಅನಧಿಕೃತ ಅರಣ್ಯ ಅತಿಕ್ರಮಣದಾರರು ಕಾನೂನು ನಿಯಮದಲ್ಲಿ ರಕ್ಷಣೆ ಪಡೆಯಲು ಸಾಧ್ಯವಿಲ್ಲವೆಂದು ಉಲ್ಲೇಖಿಸಿದೆ. ಹರಿಯಾಣದ ಅತಿಕ್ರಮಣದಾರರ ಮೇಲೆ ತೆಗೆದುಕೊಂಡ ನೀತಿಯನ್ನೇ ಸುಪ್ರೀಂ ಉತ್ತರಕನ್ನಡ ಜಿಲ್ಲೆಯ ಅತಿಕ್ರಮಣದಾರರು ಅನಧಿಕೃತವೆಂದು ಒಂದೊಮ್ಮೆ ಘೋಷಿಸಿದರೆ, ಜಿಲ್ಲೆಯ ಒಟ್ಟು ಜನಸಂಖ್ಯೆಯ 1/3ರಷ್ಟು ಜನರು ಅತಂತ್ರವಾಗಿ, ಬೀದಿಗೆ ಬೀಳುವ ಮೂಲಕ ಜಿಲ್ಲೆ ನಿರಾಶ್ರಿತರ ಜಿಲ್ಲೆಯಾಗುವುದರಲ್ಲಿ ಸಂಶಯವಿಲ್ಲ ಎನ್ನಲಾಗಿದೆ.

ಹಲವು ವರ್ಷಗಳಿಂದ ನಡೆಯುತ್ತಿದೆ ಹೋರಾಟ..!

ರಾಜ್ಯದಲ್ಲಿಯೇ ಅತಿಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವ ಉತ್ತರ ಕನ್ನಡದಲ್ಲಿ ಸಾವಿರಾರು ಕುಟುಂಬ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡು ಜೀವನ ಸಾಗಿಸುತ್ತಿದೆ. ಜಿಲ್ಲೆಯಲ್ಲಿ ಮನೆಗಳ ನಿರ್ಮಾಣಕ್ಕೆ ಸಣ್ಣ ಪ್ರಮಾಣದಲ್ಲಿ ಭೂಮಿ ಒತ್ತುವರಿ ಮಾಡಿಕೊಂಡು ಜೀವನ ಸಾಗಿಸುವವರ ಸಂಖ್ಯೆಯೇ ಅಧಿಕ. ಹತ್ತಾರು ವರ್ಷದಿಂದ ಅರಣ್ಯ ಭೂಮಿಯಲ್ಲಿ ಮನೆ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಅತಿಕ್ರಮಣದಾರರು ತಮ್ಮ ಭೂಮಿಯ ಹಕ್ಕಿಗಾಗಿ ಹಲವಾರು ವರ್ಷಗಳ ಹಿಂದೆಯೇ ಅರ್ಜಿ ಹಾಕಿ ಮಂಜೂರಿಗಾಗಿ ಪರದಾಡುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿಂದು 1,884 ಜನರಿಗೆ ಕೋವಿಡ್‌ ಪಾಸಿಟಿವ್

ಅರಣ್ಯ ಹಕ್ಕು ಕಾಯಿದೆಯು ಅರಣ್ಯವಾಸಿಗಳ ಪರವಾಗಿದ್ದು, ಕೇಂದ್ರ ಸರಕಾರವು ಸದರಿ ಕಾನೂನು ಅಡಿಯಲ್ಲಿ ‘ಸಾಗುವಳಿದಾರರ ಪರ’ ರಾಷ್ಟ್ರೀಯ ನೀತಿ ರೂಪಿಸಬೇಕು. ಅತಿಕ್ರಮಣದಾರರಿಗೆ ಭೂಮಿ ಮಂಜೂರು ಮಾಡುವ ಕುರಿತು ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಭೂಮಿಯಲ್ಲಿ ಮನೆ ಮಾಡಿಕೊಂಡು ಜೀವನ ನಡೆಸುವವರ ಸಂಖ್ಯೆಯೇ ಹೆಚ್ಚಾಗಿದೆ. ಸುಪ್ರೀಂ ಕೋರ್ಟ್ ತೀರ್ಪು ಸದ್ಯ ಅತಿಕ್ರಮಣದಾರರಲ್ಲಿ ಭಯ ಹುಟ್ಟಿಸಿದೆ ಎಂಬುದು ಅರಣ್ಯ ಭೂಮಿ ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರ ಅಭಿಪ್ರಾಯವಾಗಿದೆ.

ಸದ್ಯ ಜಿಲ್ಲೆಯಲ್ಲಿ ಸುಮಾರು 85,575 ಅರ್ಜಿಗಳು ಸಲ್ಲಿಕೆಯಾಗಿದ್ದು, ಇದರಲ್ಲಿ 74,220 ಅರ್ಜಿ ತಿರಸ್ಕೃತಗೊಂಡಿದ್ದವು. ಸುಪ್ರೀಂ ಕೋರ್ಟ್ ತಿರಸ್ಕೃತಗೊಂಡ ಅರ್ಜಿಯನ್ನು ಪುನರ್ ಪರಿಶೀಲನೆ ಮಾಡುವಂತೆ ತಿಳಿಸಿದ ಹಿನ್ನೆಲೆಯಲ್ಲಿ 2019ರ ಜುಲೈ 9ರಂದು ರಾಜ್ಯ ಸರ್ಕಾರ 18 ತಿಂಗಳಿನಲ್ಲಿ ಅರ್ಜಿ ವಿಲೇವಾರಿ ಮಾಡಲಾಗುವುದು ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು. ಆದರೆ ಈವರೆಗೂ ಯಾವ ಅರ್ಜಿಗಳೂ ವಿಲೇವಾರಿಯಾಗಿಲ್ಲ.

ರಾಜ್ಯ ಸರ್ಕಾರ ಸಲ್ಲಿಸಿದ್ದ ಅವಧಿ ಕಳೆದ ಜನವರಿ ತಿಂಗಳಿಲ್ಲಿಯೇ ಮುಗಿದಿದೆ. ಈ ಹಿನ್ನೆಲೆಯಲ್ಲಿ ಮುಂಚಿತವಾಗಿ ಸರ್ಕಾರ ಅರಣ್ಯವಾಸಿಗಳ ಭೂಮಿ ಮಂಜೂರಿಗೆ ಸಂಬಂಧಿಸಿ ಕಾನೂನಾತ್ಮಕ ಕ್ರಮ ಜರುಗಿಸಬೇಕೆಂಬುದು ಜಿಲ್ಲೆಯ ಅತಿಕ್ರಮಣದಾರರ ಆಗ್ರಹವಾಗಿದೆ.

Last Updated : Jun 11, 2021, 1:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.