ಶಿರಸಿ: ಶ್ರೀಗಂಧ ಮರದ ತುಂಡುಗಳನ್ನು ಕದ್ದು ಸಾಗಿಸುತ್ತಿದ್ದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ಗಂಧದ ತುಂಡುಗಳನ್ನು ವಶಪಡಿಸಿಕೊಂಡ ಘಟನೆ ತಾಲೂಕಿನ ಶಿಗೇಹಳ್ಳಿಯಲ್ಲಿ ನಡೆದಿದೆ.
ಮಣಜವಳ್ಳಿಯ ಕೃಷ್ಣ ಬಂಗಾರಿ ಗೌಡ (30) ಬಂಧಿತ ಆರೋಪಿ. ಈತ ಶೀಗೇಹಳ್ಳಿ ಗ್ರಾಮ ಅರಣ್ಯ ಸ.ನಂ.51ರಲ್ಲಿ ಶ್ರೀಗಂಧದ ಮರ ಕಟಾವು ಮಾಡಿದ್ದ. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಹುಲೇಕಲ್ ವಲಯಾರಣ್ಯಾಧಿಕಾರಿಗಳು 16.4 ಕೆ.ಜಿ. ಗಂಧದ ತುಂಡು, ಕಳ್ಳತನಕ್ಕೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.