ETV Bharat / state

ವೈದ್ಯಕೀಯ ಸಿಬ್ಬಂದಿ ರಕ್ಷಣೆಗೆ ಫೇಸ್ ಶೀಲ್ಡ್.. ಭಟ್ಕಳದ 'ಮೇಕರ್ಸ್ ಹಬ್’ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ’

author img

By

Published : Apr 5, 2020, 8:14 PM IST

ಕೊರೊನಾ ಸೋಂಕು ಜಗತ್ತಿನ ಎಲ್ಲರಿಗೂ ಜೀವಭಯದಲ್ಲಿ ಬದುಕುವಂತೆ ಮಾಡಿದೆ. ಸೋಂಕಿತರ ರಕ್ಷಣೆಗಾಗಿ ತಮ್ಮ ಜೀವದ ಹಂಗು ತೊರೆದು ಸಾವಿರಾರು ಮಂದಿ ವೈದ್ಯರು ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

Preparing a face shield for the protection of medical personnel
ವೈದ್ಯಕೀಯ ಸಿಬ್ಬಂದಿಗಳ ರಕ್ಷಣೆಗೆ ಫೇಸ್ ಶೀಲ್ಡ್ ತಯಾರಿ

ಭಟ್ಕಳ : ನಗರದ ಮದೀನಾ ಕಾಲೋನಿಯಲ್ಲಿರುವ 'ಮೇಕರ್ಸ್ ಹಬ್'ನ ವಿದ್ಯಾರ್ಥಿಗಳು ವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸರಿಗೆ ನೆರವಾಗಬಲ್ಲ 'ಫೇಸ್ ಶೀಲ್ಡ್' (ಮುಖಕ್ಕೆ ಹಾಕಿಕೊಳ್ಳುವ ಗುರಾಣಿ)ಯನ್ನು ಸ್ವತಃ ಸಿದ್ಧಗೊಳಿಸುತ್ತಿದ್ದಾರೆ. ಅವರ ಉದ್ದೇಶ ಕೊರೊನಾ ವಿರುದ್ಧದ ಯುದ್ಧದಲ್ಲಿ ವೈದ್ಯಕೀಯ ಸಿಬ್ಬಂದಿ ಹಾಗೂ ದಿನವಿಡೀ ರಸ್ತೆಯಲ್ಲೇ ಓಡಾಡುವ ಪೊಲೀಸರ ರಕ್ಷಣೆಗಾಗಿ ಮುಖ ಗುರಾಣಿ ಸಿದ್ಧಗೊಳಿಸಿ ವಿತರಿಸುವುದಾಗಿದೆ.

ವೈದ್ಯಕೀಯ ಸಿಬ್ಬಂದಿ ರಕ್ಷಣೆಗೆ ಫೇಸ್ ಶೀಲ್ಡ್..
ಸದ್ಯಕ್ಕೆ ಮೇಕರ್ಸ್ ಹಬ್‌ನ ಸದಸ್ಯರು ಕೈಯಿಂದಲೇ ಇದನ್ನು ಸಿದ್ದಿಗೊಳಿಸುತ್ತಿದ್ದು, ಆರಂಭದಲ್ಲಿ ಕನಿಷ್ಠ 100 ಫೇಸ್ ಶೀಲ್ಡ್‌ಗಳನ್ನು ಸಿದ್ಧಗೊಳಿಸಲು ಯೋಜಿಸಲಾಗಿದೆ. ಇದಕ್ಕಾಗಿ ಕೋವಿಡ್-19 ವೈದ್ಯಕೀಯ ನೋಡಲ್ ಅಧಿಕಾರಿ ಡಾ.ಶರದ್ ನಾಯಕರು ನಮಗೆ ಅನುಮತಿ ನೀಡಿದ್ದಾರೆ. ಮುಂದೆ ಇದನ್ನು ಸಿದ್ಧಗೊಳಿಸುವ ಯಂತ್ರವನ್ನು ತರುವ ಯೋಜನೆಯಿದೆ. ಒಂದು ದಿನಕ್ಕೆ 500ಕ್ಕೂ ಹೆಚ್ಚು ಫೇಸ್ ಶೀಲ್ಡ್‌ಗಳನ್ನು ಸಿದ್ಧಗೊಳಿಸಬಹುದಾಗಿದೆ ಎಂದು ತಿಳಿಸಿದ್ದಾರೆ. ಎಂಜಿನಿಯರಿಂಗ್ ಕಲಿಯುತ್ತಿರುವ ಹಾಗೂ ಇತರ ಆಸಕ್ತ ವಿದ್ಯಾರ್ಥಿಗಳು 2018ರಲ್ಲಿ 'ಮೇಕರ್ಸ್ ಹಬ್’ ಹೆಸರಲ್ಲಿ ಮದೀನಾ ಕಾಲೋನಿಯ ಕುತುಬ್ ಹಾಲ್‌ನಲ್ಲಿ ಸಂಸ್ಥೆಯೊಂದನ್ನು ಹುಟ್ಟು ಹಾಕಿದ್ದು, ಅದೀಗ ತನ್ನ ಮೂರನೇ ವರ್ಷಕ್ಕೆ ಕಾಲಿಟ್ಟಿದೆ. ಎಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಯೋಜನೆಗಳನ್ನು ಸಿದ್ಧಗೊಳಿಸುವುದು ಅವರಿಗೆ ಮಾರ್ಗದರ್ಶನ ನೀಡುವುದು, ಯುವ ಪೀಳಿಗೆಗೆ ತಂತ್ರಜ್ಞಾನದಲ್ಲಿ ಆಸಕ್ತಿ ಬೆಳೆಸಲು ಕಾರ್ಯಾಗಾರಗಳನ್ನು ಆಯೋಜಿಸುವುದು ಈ ಮೇಕರ್ಸ್ ಹಬ್‌ನ ಕಾರ್ಯ. ತಂತ್ರಜ್ಞಾನ ಬಳಿಸಿ ಜಗತ್ತಿನ ಸರಳ ಮತ್ತು ಸಂಕೀರ್ಣ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು, ಎನ್‌ಜಿಒ ಮತ್ತು ಕೈಗಾರಿಕೆಗಳೊಂದಿಗೆ ಸಹಕರಿಸುವುದು ಮೇಕರ್ಸ್ ಹಬ್ ಮಾಡುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.