ETV Bharat / state

ದಾಂಡೇಲಿಯಲ್ಲಿ 60 ಲಕ್ಷಕ್ಕೂ ಅಧಿಕ ಮುಖಬೆಲೆಯ ಕೋಟಾನೋಟುಗಳು ಪತ್ತೆ: ಪೊಲೀಸರ ಮುಂದಿದೆ ಹೊಸ ಸವಾಲು

ದಾಂಡೇಲಿ ನಗರ ನೆರೆಯ ಬೆಳಗಾವಿ, ಹುಬ್ಬಳ್ಳಿ ಹಾಗೂ ಗೋವಾ ರಾಜ್ಯಕ್ಕೆ ಸಮೀಪದಲ್ಲಿದ್ದು, ಇಲ್ಲಿ ಪೇಪರ್ ತಯಾರಿಕಾ ಕಾರ್ಖಾನೆ ಇರುವುದರಿಂದ ಖೋಟಾನೋಟು ತಯಾರಿಕಾ ಜಾಲ ಹುಟ್ಟಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು, ಇನ್ನಷ್ಟು ಮಾಹಿತಿ ಹೊರ ಬರುವ ಸಾಧ್ಯತೆಯಿದೆ.

Karwar
ಕೋಟಾ ನೋಟು ಪತ್ತೆ
author img

By

Published : Jun 3, 2021, 8:47 AM IST

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಖೋಟಾನೋಟು ಚಲಾವಣೆಯ ಜಾಲವನ್ನು ಪತ್ತೆ ಮಾಡಿದ್ದು, 60 ಲಕ್ಷಕ್ಕೂ ಅಧಿಕ ಮುಖಬೆಲೆಯ ಖೋಟಾನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಲಾಕ್​​ಡೌನ್ ಜಾರಿಯಲ್ಲಿದ್ದರೂ ಇಷ್ಟು ಪ್ರಮಾಣದಲ್ಲಿ ಚಲಾವಣೆಗೆ ಸಿದ್ಧವಾಗಿದ್ದ ಖೋಟಾನೋಟಿನ ಹಿಂದೆ ದೊಡ್ಡ ಜಾಲವೇ ಇರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರಿಗೆ ಇದೀಗ ಹೊಸ ಸವಾಲು ಎದುರಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಪ್ರಕಾಶ ದೇವರಾಜು

ದಾಂಡೇಲಿ ತಾಲೂಕಿನ ಭರ್ಚಿ ಗ್ರಾಮದ ಚೆಕ್​​​ ಪೋಸ್ಟ್​​​ನಲ್ಲಿ ಜೂನ್ 1ರಂದು ಖಚಿತ ಮಾಹಿತಿಯ ಮೇಲೆ ಪೊಲೀಸರು ಸ್ವಿಫ್ಟ್ ಡಿಸೈರ್ ಕಾರೊಂದರ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಕಾರಿನಲ್ಲಿ ಬರೋಬ್ಬರಿ 9 ಲಕ್ಷ ರೂ. ಹಣ ಪತ್ತೆಯಾಗಿತ್ತು. ಆದ್ರೆ ಆ ಹಣವನ್ನ ಕೂಲಂಕಷವಾಗಿ ಪರಿಶೀಲಿಸಿದಾಗ ಖೋಟಾನೋಟು ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರು ಕಾರಿನಲ್ಲಿದ್ದ ನಾಲ್ವರು ಹಾಗೂ ಹಣವನ್ನು ತಂದಿದ್ದ ಇನ್ನಿಬ್ಬರನ್ನ ವಶಕ್ಕೆ ಪಡೆದಿದ್ದಾರೆ.

ಬಳಿಕ ಆರೋಪಿತರ ಬಳಿ ವಿಚಾರಿಸಿದಾಗ ಬರ್ಚಿ ಗ್ರಾಮದ ಶಿವಾಜಿ ಕಾಂಬಳೆ ಹಾಗೂ ಶಬ್ಬೀರ್ ಇಸ್ಮಾಯಿಲ್ ಶೇಖ್ ಮಹಾರಾಷ್ಟ್ರ ಮೂಲದವರ ಬಳಿ ನಾಲ್ಕೂವರೆ ಲಕ್ಷ ರೂ. ನೀಡಿದರೆ ಅದಕ್ಕೆ ಬದಲಾಗಿ 9 ಲಕ್ಷ ನೀಡೋದಾಗಿ ಹೇಳಿ ಕರೆಸಿಕೊಂಡಿದ್ದರಂತೆ. ಅದರಂತೆ ದಾಂಡೇಲಿಗೆ ಬಂದಿದ್ದ ಗ್ಯಾಂಗ್ ಹಣವನ್ನು ಪರಿಶೀಲನೆ ಮಾಡುವ ವೇಳೆ ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದೆ.

ಪ್ರಕರಣದಲ್ಲಿ ದಾಂಡೇಲಿಯ ಶಿವಾಜಿ ಹಾಗೂ ಇಸ್ಮಾಯಿಲ್ ಸೇರಿ ಖೋಟಾನೋಟು ಖರೀದಿಸಲು ಬಂದಿದ್ದ ಮಹಾರಾಷ್ಟ್ರ ಮೂಲದ ಕಿರಣ ದೇಸಾಯಿ, ಗಿರೀಶ ಪೂಜಾರಿ, ಬೆಳಗಾವಿ ಮೂಲದ ಅಮರ ನಾಯ್ಕ ಹಾಗೂ ಸಾಗರ ಕುಣ್ಣೂರಕರ್ ಎಂಬುವವರನ್ನು ಬಂಧಿಸಲಾಗಿದೆ.

ಬಳಿಕ ಶಿವಾಜಿ ಕಾಂಬಳೆ ಮನೆ ಮೇಲೆ ದಾಳಿ ನಡೆಸಿದ ವೇಳೆ ಸುಮಾರು 60 ಲಕ್ಷಕ್ಕೂ ಅಧಿಕ ಮುಖಬೆಲೆಯ ಖೋಟಾನೋಟುಗಳು ಪತ್ತೆಯಾಗಿವೆ. ಜೊತೆಗೆ ನೋಟು ಮುದ್ರಣ ಮಾಡುವ ಯಂತ್ರ, ಪೇಪರ್ ಕಟಿಂಗ್ ಯಂತ್ರ ಸೇರಿದಂತೆ ಖೋಟಾನೋಟು ತಯಾರಿಸಲು ಬಳಸಲಾಗಿದ್ದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ದಾಂಡೇಲಿ ನಗರ ನೆರೆಯ ಬೆಳಗಾವಿ, ಹುಬ್ಬಳ್ಳಿ ಹಾಗೂ ಗೋವಾ ರಾಜ್ಯಕ್ಕೆ ಸಮೀಪದಲ್ಲಿದ್ದು, ಇಲ್ಲಿ ಪೇಪರ್ ತಯಾರಿಕಾ ಕಾರ್ಖಾನೆ ಇರುವುದರಿಂದ ಖೋಟಾನೋಟು ತಯಾರಿಕಾ ಜಾಲ ಹುಟ್ಟಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು, ಇನ್ನಷ್ಟು ಮಾಹಿತಿ ಹೊರ ಬರುವ ಸಾಧ್ಯತೆಯಿದೆ.

ಕೇವಲ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದ್ದ ಸುಂದರ ನಗರ ದಾಂಡೇಲಿಯಲ್ಲಿ ಇದೀಗ ಖೋಟಾನೋಟಿನ ಕರಾಳ ದಂಧೆ ಬಯಲಾಗಿದ್ದು, ಜಿಲ್ಲೆಯ ಜನತೆಯನ್ನ ಬೆಚ್ಚಿ ಬೀಳಿಸಿದೆ. ಪೊಲೀಸರ ಚಾಣಾಕ್ಷತನದಿಂದ ಖೋಟಾನೋಟಿನ ಜಾಲವೊಂದು ಖೆಡ್ಡಾಕ್ಕೆ ಬಿದ್ದಿದ್ದು, ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಓದಿ: ದಾಂಡೇಲಿಯಲ್ಲಿ 72 ಲಕ್ಷ ರೂ. ಖೋಟಾ ನೋಟು ವಶ: 6 ಜನ ಆರೋಪಿಗಳ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.