ಶಿರಸಿ: ಉತ್ತರ ಕನ್ನಡ ಜಿಲ್ಲೆಯನ್ನು ಪ್ರತ್ಯೇಕಿಸಿ ಶಿರಸಿ ಜಿಲ್ಲೆಯನ್ನು ರಚನೆ ಮಾಡಬೇಕು ಎಂದು ಶಿರಸಿ ಜಿಲ್ಲಾ ಹೋರಾಟ ಸಮಿತಿ ಶುಕ್ರವಾರದಿಂದ ಪತ್ರ ಚಳವಳಿಯನ್ನು ಆರಂಭಿಸಿದೆ.
ಇಲ್ಲಿನ ಬಿಡಕಿ ಬೈಲಿನಲ್ಲಿರುವ ಗಾಂಧಿ ಪ್ರತಿಮೆಯ ಬಳಿ ಜಮಾಯಿಸಿದ ಸಮಿತಿಯ ಮುಖಂಡರು, ಸಾರ್ವಜನಿಕರು ಶಿರಸಿ ಜಿಲ್ಲೆ ಆಗಬೇಕು ಎಂದು ಘೋಷಣೆ ಕೂಗಿದರು. ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಹಿರಿಯ ಮುಖಂಡ ಕಾಶಿನಾಥ್ ಮೂಡಿ ಚಳುವಳಿಗೆ ಚಾಲನೆ ನೀಡಿದರು.
ಶಿರಸಿ ಹೋರಾಟ ಸಮಿತಿ ಮುಖಾಂತರ ಪ್ರತಿಯೊಬ್ಬರಿಂದ ತಲಾ ಮೂರು ಪತ್ರವನ್ನು ಬರೆದು, ಮುಖ್ಯಮಂತ್ರಿಗಳಿಗೆ ಹಾಗೂ ರಾಜ್ಯಪಾಲಕರಿಗೆ ಕಳುಹಿಸುವ ಕ್ರಮ ಕೈಗೊಳ್ಳಲಾಗಿದೆ. ಆ ಮುಖಾಂತರ ಶಿರಸಿ ಜಿಲ್ಲೆ ಅನಿವಾರ್ಯ ಎಂಬುದನ್ನು ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿಕೊಳ್ಳುವುದಾಗಿ ತಿಳಿಸಿದರು.