ETV Bharat / state

ಹೊನ್ನಾವರ ಗಲಭೆ ಪ್ರಕರಣ: ಗಾಯಗೊಂಡಿದ್ದ ವ್ಯಕ್ತಿ ಸಾವು

2017 ರ ಡಿಸೆಂಬರ್ 6 ರಂದು ಹೊನ್ನಾವರ ಪಟ್ಟಣದಲ್ಲಿ ನಡೆದಿದ್ದ ಗಲಭೆಯಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವನ್ನಪ್ಪಿದ್ದಾನೆ. ಈ ನರಸಿಂಹ ಮೇಸ್ತ ಮೃತ ವ್ಯಕ್ತಿ.

ವ್ಯಕ್ತಿ ಸಾವು
author img

By

Published : May 5, 2019, 8:21 AM IST

ಕಾರವಾರ: ಕಳೆದ ವರ್ಷ ಪರೇಶ್ ಮೇಸ್ತ ನಿಗೂಢ ಸಾವಿನ ಬಳಿಕ ಹೊನ್ನಾವರ ಪಟ್ಟಣದಲ್ಲಿ ಗಲಭೆ ಉಂಟಾಗಿತ್ತು. ಈ ವೇಳೆ ತಲೆಗೆ ತೀವ್ರ ಪೆಟ್ಟು ಬಿದ್ದು ಆಸ್ಪತ್ರೆ ಸೇರಿದ್ದ ನರಸಿಂಹ ಮೇಸ್ತ ( 50 ) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

2017 ರ ಡಿಸೆಂಬರ್ 6 ರ ರಾತ್ರಿ ಹೊನ್ನಾವರ ಪಟ್ಟಣದ ಬಸ್ ನಿಲ್ದಾಣದ ಬಳಿ ಗಲಭೆ ನಡೆದಿತ್ತು. ಈ ಸಂದರ್ಭದಲ್ಲಿ ಕಣ್ಮರೆಯಾಗಿದ್ದ ಪರೇಶ್ ಮೇಸ್ತ ಎಂಬ ಯುವಕ ಶವವಾಗಿ ಪತ್ತೆಯಾಗಿದ್ದ. ಇದು ಮತ್ತಷ್ಟು ವಿಕೋಪಕ್ಕೆ ತಿರುಗಿ ಪಟ್ಟಣದಲ್ಲಿ ಗಲಾಟೆಗೆ ಕಾರಣವಾಗಿತ್ತು.

ಈ ಸಂದರ್ಭದಲ್ಲಿ ಅಂದು ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ನರಸಿಂಹ ಮೇಸ್ತ ಹಾಗೂ ದರ್ಶನ್ ಎಂಬುವರ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಅದರಲ್ಲಿ ತಲೆಗೆ ಗಂಭೀರ ಪೆಟ್ಟು ಬಿದ್ದ ನರಸಿಂಹ ಮೇಸ್ತ ಅವರನ್ನು ಚಿಕಿತ್ಸೆಗಾಗಿ ಉಡುಪಿಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಗುಣಮುಖರಾಗಿರಲಿಲ್ಲ. ಬಳಿಕ ಆತನ ಮನೆಯವರು ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು.

ಕುಟುಂಬಸ್ಥರು ಎಷ್ಟೇ ಪ್ರಯತ್ನಪಟ್ಟು ಹಲವು ಕಡೆ ತೋರಿಸಿದರೂ ನರಸಿಂಹ ಚೇತರಿಕೆ ಕಂಡಿರಲಿಲ್ಲ. ಬಡತನದಲ್ಲಿದ್ದ ಕುಟುಂಬ ಸಾಲ ಮಾಡಿ ಚಿಕಿತ್ಸೆಗಾಗಿ ಲಕ್ಷಾಂತರ ಹಣ ಖರ್ಚು ಮಾಡಿದೆ. ಆದರೂ ಚಿಕಿತ್ಸೆ ಫಲಕಾರಿಯಾಗದೆ ನರಸಿಂಹ ಸಾವನ್ನಪ್ಪಿದ್ದಾರೆ.

ಗಲಾಟೆ ಪ್ರಕರಣದಲ್ಲಿ ನೂರಾರು ಜನರ ವಿರುದ್ಧ ದಾಖಲಾಗಿರುವ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

Intro:
ಹೊನ್ನಾವರ ಗಲಭೆ ವೇಳೆ ಗಾಯಗೊಂಡಿದ್ದ ವ್ಯಕ್ತಿ ಸಾವು
ಕಾರವಾರ: ಕಳೆದ ವರ್ಷ ಪರೇಶ ಮೇಸ್ತ ಹತ್ಯೆ ಬಳಿಕ ಹೊನ್ನಾವರ ಪಟ್ಟಣದಲ್ಲಿ ನಡೆದ- ಗಲಭೆ ವೇಳೆ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದ ನರಸಿಂಹ ಮೇಸ್ತ ( 50 ) ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ತಮ್ಮ ಮನೆಯಲ್ಲಿ ಮೃತಪಟ್ಟಿದ್ದಾರೆ.
2017 ರ ಡಿಸೆಂಬರ್ 6 ರಂದು ರಾತ್ರಿ ಹೊನ್ನಾವರ ಪಟ್ಟಣದ ಬಸ್ ನಿಲ್ದಾಣದ ಬಳಿ ಗಲಭೆ ನಡೆದಿತ್ತು. ಈ ಸಂದರ್ಭದಲ್ಲಿ ಕಣ್ಮರೆಯಾಗಿದ್ದ ಪರೇಶ ಮೇಸ್ತ್ರ ಎಂಬ ಯುವಕ ಶವವಾಗಿ ಪತ್ತೆಯಾಗಿದ್ದ. ಇದು ಮತ್ತಷ್ಟು ವಿಕೋಪಕ್ಕೆ ತಿರುಗಿ ಪಟ್ಟಣದಲ್ಲಿ ಗಲಾಟೆಗೆ ಕಾರಣವಾಗಿತ್ತು.
ಆದರೆ ಅಂದು ಕೆಲಸ ಮುಗಿಸಿ ನಡೆದುಕೊಂಡು ಮನೆಗೆ ತೆರಳುತ್ತಿದ್ದ ನರಸಿಂಹ ಮೇಸ್ತ ಹಾಗೂ ದರ್ಶನ ಎಂಬುವರ ಮೇಲೆ ದುಷ್ಕರ್ಮಿಗಳಿಂದ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿತ್ತು . ಅದರಲ್ಲಿ ತಲೆಗೆ ಗಂಭೀರ ಪೆಟ್ಟು ಬಿದ್ದ ನರಸಿಂಹ ಮೇಸ್ತ ಅವರನ್ನು ಚಿಕಿತ್ಸೆಗಾಗಿ - . ಉಡುಪಿಯ ಆಸತ್ರೆಗೆ ಸೇರಿಸಲಾಗಿತ್ತು. ಆದರೆ ಗುಣಮುಖರಾಗಿರಲಿಲ್ಲ. ಬಳಿಕ ಮನೆಯವರು ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಮುಂದುವರಿಸಿದ್ದರು.
ಮನೆಯವರು ಎಷ್ಟೆ ಪ್ರಯತ್ನಪಟ್ಟು ಹಲವು ಕಡೆ ತೋರಿಸಿದರು ನರಸಿಂಹ ಚೇತರಿಕೆ ಕಂಡಿರಲಿಲ್ಲ. ಬಡತನದಲ್ಲಿದ್ದ ಕುಟುಂಬ ಸಾಲ ಮಾಡಿ ಚಿಕಿತ್ಸೆಗಾಗಿ ಲಕ್ಷಾಂತರ ಹಣ ಕರ್ಚು ಮಾಡಿದೆ. ಆದರೂ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ನಿಧನರಾಗಿದ್ದಾರೆ. ಈ ಗಲಾಟೆ ಪ್ರಕರಣದಲ್ಲಿ ನೂರಾರು ಜನರ ಮೇಲೆ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದಲ್ಲಿದೆ. ಇನ್ನು ಘಟನೆ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು . Body:KConclusion:K
ETV Bharat Logo

Copyright © 2024 Ushodaya Enterprises Pvt. Ltd., All Rights Reserved.