ETV Bharat / state

ಕಾರವಾರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತದ ಭೀತಿ: ಆತಂಕದಲ್ಲಿ ವಾಹನ ಸವಾರರು

ಕರ್ನಾಟಕ-ಗೋವಾ ಗಡಿ ಭಾಗವಾದ ಕಾರವಾರದ ಮೂಲಕ ಕರಾವಳಿ ಜಿಲ್ಲೆಗಳಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂತಹದೊಂದು ಸ್ಥಿತಿ ಇದೆ. ರಾಷ್ಟ್ರೀಯ ಹೆದ್ದಾರಿ 17ನ್ನೇ ಅಗಲೀಕರಣಗೊಳಿಸಿ ಚತುಷ್ಪಥ ಹೆದ್ದಾರಿಯನ್ನಾಗಿ ಮಾಡಲಾಗುತ್ತಿದೆ. ಕಳೆದ ಐದು ವರ್ಷಗಳಿಂದ ನಡೆಸುತ್ತಿರುವ ಈ ಕಾಮಗಾರಿ ಇನ್ನು ಪೂರ್ಣಗೊಳ್ಳುವ ಹಂತಕ್ಕೂ ತಲುಪಿಲ್ಲ.‌ ಆದರೆ ಆಗಿರುವ ಅರೆಬರೆ ಕಾಮಗಾರಿಯೇ ಈ ಭಾಗದಲ್ಲಿ ನಿತ್ಯ ಓಡಾಡುವ ಪ್ರಯಾಣಿಕರ ಜೀವ ಹಿಂಡುತ್ತಿದೆ.

ಕಾರವಾರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತದ ಭೀತಿ
author img

By

Published : Jul 7, 2019, 9:57 PM IST

ಕಾರವಾರ: ಅದು ರಾಷ್ಟ್ರೀಯ ಹೆದ್ದಾರಿ.‌ ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ತಿರುವುಮುರುವುಗಳನ್ನು ಒಳಗೊಂಡ ರಸ್ತೆ. ಆದರೆ ಈ ಹೆದ್ದಾರಿಯಲ್ಲಿ ಓಡಾಡಬೇಕು ಅಂದ್ರೆ ಮೈಯೆಲ್ಲಾ ಕಣ್ಣಾಗಿಸಿಕೊಂಡು ತೆರಳಬೇಕು. ಇಲ್ಲ ಅಂದ್ರೆ ಹೋಗೋ ಜಾಗ ತಲುಪುತ್ತೇವೆ ಅನ್ನೊ ಭರವಸೆಯೇ ಇಲ್ಲ.

ಹೌದು, ಕರ್ನಾಟಕ-ಗೋವಾ ಗಡಿ ಭಾಗವಾದ ಕಾರವಾರದ ಮೂಲಕ ಕರಾವಳಿ ಜಿಲ್ಲೆಗಳಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂತಹದೊಂದು ಸ್ಥಿತಿ ಇದೆ. ರಾಷ್ಟ್ರೀಯ ಹೆದ್ದಾರಿ 17ನ್ನೇ ಅಗಲೀಕರಣಗೊಳಿಸಿ ಚತುಷ್ಪಥ ಹೆದ್ದಾರಿಯನ್ನಾಗಿ ಮಾಡಲಾಗುತ್ತಿದೆ. ಕಳೆದ ಐದು ವರ್ಷಗಳಿಂದ ನಡೆಸುತ್ತಿರುವ ಈ ಕಾಮಗಾರಿ ಇನ್ನು ಪೂರ್ಣಗೊಳ್ಳುವ ಹಂತಕ್ಕೂ ತಲುಪಿಲ್ಲ.‌ ಆದರೆ ಆಗಿರುವ ಅರೆಬರೆ ಕಾಮಗಾರಿಯೇ ಈ ಭಾಗದಲ್ಲಿ ನಿತ್ಯ ಓಡಾಡುವ ಪ್ರಯಾಣಿಕರ ಜೀವ ಹಿಂಡುತ್ತಿದೆ.

ಜಿಲ್ಲೆಯಲ್ಲಿ ಕಾರವಾರದಿಂದ ಭಟ್ಕಳದವರೆಗೆ ಕರಾವಳಿ ತಾಲೂಕುಗಳಲ್ಲಿ ಹಾದು ಹೋಗಿರುವ ಹೆದ್ದಾರಿಯಲ್ಲಿ ಬೃಹತ್ ಗುಡ್ಡಗಳನ್ನು ಕೊರೆದು ಅಗಲೀಕರಣಗೊಳಿಸಲಾಗಿದೆ. ಇನ್ನು ಕೆಲ ಭಾಗಗಳಲ್ಲಿ ಕೊರೆದ ಗುಡ್ಡಗಳು ಕುಸಿಯದಂತೆ ಸಿಮೆಂಟ್ ಮೂಲಕ ಜಾಲರಿ ಅಳವಡಿಸಲಾಗಿದೆ. ವಿಚಿತ್ರ ಅಂದ್ರೆ ಮಳೆಗಾಲದ ಆರಂಭದಲ್ಲಿಯೇ ಈ ಸಿಮೆಂಟ್ ಕೆಲ ಭಾಗಗಳಲ್ಲಿ ಕೊರೆದು ಹೋಗಿದ್ದು, ಗುಡ್ಡದಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡಿದೆ.

ಕಾರವಾರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತದ ಭೀತಿ!

ಇದಲ್ಲದೆ ಕಾರವಾರದ ಬಿಣಗಾ ಘಟ್ಟದಲ್ಲಿ ಹೆದ್ದಾರಿ ಪಕ್ಕದ ಗುಡ್ಡಗಳನ್ನು ಕೊರೆದಿದ್ದು, ಮೊನ್ನೆ ಸುರಿದ ಭಾರಿ ಮಳೆಗೆ ನಾಲ್ಕೈದು ಕಡೆಗಳಲ್ಲಿ ಗುಡ್ಡ ಕುಸಿದು ಬಿದ್ದಿದೆ. ಜತೆಗೆ ಇದರಲ್ಲಿದ್ದ ಬೃಹತ್ ಬಂಡೆಗಲ್ಲುಗಳು ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಆ ಹೆದ್ದಾರಿಯಲ್ಲಿ ಸಂಚಾರಕ್ಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಸಂಭವಿಸಬಹುದಾದ ಅಪಾಯ ತಪ್ಪಿದಂತಾಗಿದೆ. ಆದರೂ ಕೂಡ ಗುಡ್ಡ ಇನ್ನಷ್ಟು ಪ್ರಮಾಣದಲ್ಲಿ ಕುಸಿಯುವ ಸಾಧ್ಯತೆಗಳಿದ್ದು, ಅಕಸ್ಮಾತ್ ಅದರಲ್ಲಿನ ಬಂಡೆಗಲ್ಲುಗಳು ಉರುಳಿದಲ್ಲಿ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕುವ ಆತಂಕ ಇದೆ.

ಅಲ್ಲದೆ ಕಳೆದೆರಡು ವರ್ಷದ ಹಿಂದೆ ಕುಮಟಾದ ತಂಡ್ರಕುಳಿ ಬಳಿ ಮಣ್ಣು ಕುಸಿದು ಸಂಭವಿಸಿದ ದುರಂತದಲ್ಲಿ ಮೂವರು ಮಕ್ಕಳು ಅಸುನಿಗಿದ್ದರು. ಅಲ್ಲದೆ ಆಗಾಗ ಹೆದ್ದಾರಿಯುದ್ದಕ್ಕೂ ಅವಘಡಗಳು ಸಂಭವಿಸುತ್ತಲೇ ಇದ್ದು, ನಿತ್ಯ ಸಂಚರಿಸುವ ನಮ್ಮಂತ ವಾಹನ ಸವಾರರಿಗೆ ಜೀವಭಯ ಕಾಡತೊಡಗಿದೆ ಎನ್ನುತ್ತಾರೆ ವಾಹನ ಸವಾರ ದೇವರಾಜ್.

ಇನ್ನು ಚತುಷ್ಫಥ ಹೆದ್ದಾರಿ ಕಾಮಗಾರಿಯನ್ನು ಗುತ್ತಿಗೆ ಪಡೆದಿರುವ ಐಆರ್​ಬಿ ಕಂಪನಿ, ಕಾಮಗಾರಿ ಪೂರ್ಣಗೊಳಿಸುವಲ್ಲಿ ಕುಂಟುತ್ತಿದೆ. ಆದರೆ ಇದು ಪ್ರತಿ ಮಳೆಗಾಲ ಹಾಗೂ ಬೇಸಿಗೆಯಲ್ಲಿ ವಾಹನ ಸವಾರರ ಮೇಲೆ ನೇರ ಪರಿಣಾಮ ಬೀರುತ್ತಿದೆ. ಈಗಾಗಲೇ ಹೆದ್ದಾರಿಯಲ್ಲಿನ ಅವೈಜ್ಞಾನಿಕ ತಿರುವು ಹಾಗೂ ಇನ್ನಿತರ ಕಾರಣಗಳಿಗೆ ಹಲವು ಅಪಘಾತಗಳು ಸಂಭವಿಸಿ ಹಲವರು ಜೀವ ಕಳೆದುಕೊಂಡಿದ್ದು, ಇದೀಗ ಗುಡ್ಡ ಕುಸಿತದ ಭೀತಿ ಎಲ್ಲರನ್ನು ಕಾಡುತ್ತಿದೆ.

ಇನ್ನು ಈ ಬಗ್ಗೆ ಪ್ರಭಾರ ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ್ ಅವರನ್ನು ಕೇಳಿದಾಗ, ಮಳೆಗಾಲ ಪೂರ್ವದಲ್ಲಿಯೇ ಹೆದ್ದಾರಿಯಲ್ಲಿ ಸಂಭವಿಸಬಹುದಾದ ಅವಘಡಗಳನ್ನು ತಪ್ಪಿಸಲು ಜಿಲ್ಲಾಡಳಿತ ಐಆರ್​​ಬಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅಲ್ಲದೆ ಅಪಾಯ ಸಂಭವಿಸಬಹುದಾದ ಪ್ರದೇಶಗಳಲ್ಲಿ ಉಪ ವಿಭಾಗಾಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ. ಇದೀಗ ಗುಡ್ಡ ಕುಸಿಯುತ್ತಿರುವ ಪ್ರದೇಶಗಳಲ್ಲಿಯೂ ಐಆರ್​​ಬಿ ಕಂಪನಿಯವರಿಗೆ ತಿಳಿಸಿ ಮುಂಜಾಗೃತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

Intro:ಕಾರವಾರ: ಅದು ರಾಷ್ಟ್ರೀಯ ಹೆದ್ದಾರಿ.‌ ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ತಿರುವು ಮುರುವುಗಳನ್ನೊಳೊಗೊಂಡ ರಸ್ತೆ. ಆದರೆ ಈ ಹೆದ್ದಾರಿಯಲ್ಲಿ ಓಡಾಡಬೇಕು ಅಂದ್ರೆ ಮೈಯೆಲ್ಲಾ ಕಣ್ಣಾಗಿಸಿಕೊಂಡು ತೆರಳಬೇಕು. ಇಲ್ಲ ಅಂದ್ರೆ ಹೋಗೊ ಜಾಗಾ ತಲುಪುತ್ತೇವೆ ಅನ್ನೊ ಭರವಸೆಯೇ ಇಲ್ಲ. ಅರ್ರೆ ಯಾಕೆ ? ಎನಾಗಿದೆ ಹೆದ್ದಾರಿಗೆ ಅಂತೀರಾ ಈ ಸ್ಟೋರಿ ನೋಡಿ‌.
ಹೌದು, ಕರ್ನಾಟಕ-ಗೋವಾ ಗಡಿಭಾಗವಾದ ಕಾರವಾರದ ಮೂಲಕ ಕರಾವಳಿ ಜಿಲ್ಲೆಗಳಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ೬೬ ರಲ್ಲಿ ಇಂತಹದೊಂದು ಸ್ಥಿತಿ ಇದೆ. ರಾಷ್ಟ್ರೀಯ ಹೆದ್ದಾರಿ ೧೭ನ್ನೆ ಅಗಲೀಕರಣಗೊಳಿಸಿ ಚತುಷ್ಪಥ ಹೆದ್ದಾರಿಯನ್ನಾಗಿ ಮಾಡಲಾಗುತ್ತಿದೆ. ಕಳೆದ ಐದು ವರ್ಷಗಳಿಂದ ನಡೆಸುತ್ತಿರುವ ಈ ಕಾಮಗಾರಿ ಇನ್ನು ಪೂರ್ಣಗೊಳ್ಳುವ ಹಂತಕ್ಕೂ ತಲುಪಿಲ್ಲ.‌ ಆದರೆ ಆಗಿರುವ ಅರೆಬರೆ ಕಾಮಗಾರಿಯೇ ಈ ಭಾಗದಲ್ಲಿ ನಿತ್ಯ ಓಡಾಡುವ ಪ್ರಯಾಣಿಕರ ಜೀವ ಹಿಂಡುತ್ತಿದೆ.
ಜಿಲ್ಲೆಯಲ್ಲಿ ಕಾರವಾರದಿಂದ ಭಟ್ಕಳದವರೆಗೆ ಕರಾವಳಿ ತಾಲ್ಲೂಕುಗಳಲ್ಲಿ ಹಾದು ಹೋಗಿರುವ ಹೆದ್ದಾರಿಯಲ್ಲಿ ಬೃಹತ್ ಗುಡ್ಡಗಳನ್ನು ಕೊರೆದು ಅಗಲೀಕರಣಗೊಳಿಸಲಾಗಿದೆ. ಇನ್ನು ಕೆಲ ಭಾಗಗಳಲ್ಲಿ ಕೊರೆದ ಗುಡ್ಡಗಳು ಕುಸಿಯದಂತೆ ಸಿಮೆಂಟ್ ಮೂಲಕ ಜಾಲರಿ ಅಳವಡಿಸಲಾಗಿದೆ. ವಿಚಿತ್ರ ಅಂದ್ರೆ ಮಳೆಗಾಲದ ಆರಂಭದಲ್ಲಿಯೇ ಈ ಸಿಮೆಂಟ್ ಕೆಲ ಭಾಗಗಳಲ್ಲಿ ಕೊರೆದು ಹೋಗಿದ್ದು, ಗುಡ್ಡದಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡಿದೆ.
ಇದಲ್ಲದೆ ಕಾರವಾರದ ಬಿಣಗಾ ಘಟ್ಟದಲ್ಲಿ ಹೆದ್ದಾರಿ ಪಕ್ಕದ ಗುಡ್ಡಗಳನ್ನು ಕೊರೆದಿದ್ದು, ಮೊನ್ನೆ ಸುರಿದ ಭಾರಿ ಮಳೆಗೆ ನಾಲ್ಕೈದು ಕಡೆಗಳಲ್ಲಿ ಗುಡ್ಡ ಕುಸಿದು ಬಿದ್ದಿದೆ. ಜತೆಗೆ ಇದರಲ್ಲಿದ್ದ ಬೃಹತ್ ಬಂಡೆಗಲ್ಲುಗಳು ಉರುಳಿ ಬಿದ್ದಿದ್ದು, ಅದೃಷ್ಟವಸಾತ್ ಆ ಹೆದ್ದಾರಿಯಲ್ಲಿ ಸಂಚಾರಕ್ಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಸಂಭವಿಸಬಹುದಾದ ಅಪಾಯ ತಪ್ಪಿದಂತಾಗಿದೆ.
ಆದರೂ ಕೂಡ ಗುಡ್ಡ ಇನ್ನಷ್ಟು ಪ್ರಮಾಣದಲ್ಲಿ ಕುಸಿಯುವ ಸಾಧ್ಯತೆಗಳಿದ್ದು,ಅಕಸ್ಮಾತ್ ಅದರಲ್ಲಿನ ಬಂಡೆಗಲ್ಲುಗಳು ಉರುಳಿದಲ್ಲಿ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕುವ ಆತಂಕ ಇದೆ.
ಅಲ್ಲದೆ ಕಳೆದೆರಡು ವರ್ಷದ ಹಿಂದೆ ಕುಮಟಾದ ತಂಡ್ರಕುಳಿ ಬಳಿ ಮಣ್ಣು ಕುಸಿದು ಸಂಭವಿಸಿದ ದುರಂತದಲ್ಲಿ ಮೂವರು ಮಕ್ಕಳು ಅಸುನಿಗಿದ್ದರು. ಅಲ್ಲದೆ ಆಗಾಗ ಹೆದ್ದಾರಿಯುದ್ದಕ್ಕೂ ಅವಘಡಗಳು ಸಂಭವಿಸುತ್ತಲೇ ಇದ್ದು, ನಿತ್ಯ ಸಂಚರಿಸುವ ನಮ್ಮಂತ ವಾಹನ ಸವಾರರಿಗೆ ಜೀವಭಯ ಕಾಡತೊಡಗಿದೆ ಎನ್ನುತ್ತಾರೆ ವಾಹನ ಸವಾರ ದೇವರಾಜ್.
ಇನ್ನು ಚತುಷ್ಫಥ ಹೆದ್ದಾರಿ ಕಾಮಗಾರಿಯನ್ನು ಗುತ್ತಿಗೆ ಪಡೆದಿರುವ ಐಆರ್ ಬಿ ಕಂಪೆನಿ ಕಾಮಗಾರಿ ಪೂರ್ಣಗೊಳಿಸುವಲ್ಲಿ ಕುಂಟುತ್ತಿದೆ. ಆದರೆ ಇದು ಪ್ರತಿ ಮಳೆಗಾಲ ಬೇಸಿಗೆಯಲ್ಲಿ ವಾಹನ ಸವಾರರ ಮೇಲೆ ನೇರ ಪರಿಣಾಮ ಬೀರುತ್ತಿದೆ. ಈಗಾಗಲೇ ಹೆದ್ದಾರಿಯಲ್ಲಿನ ಅವೈಜ್ಞಾನಿಕ ತಿರುವು ಹಾಗೂ ಇನ್ನಿತರ ಕಾರಣಗಳಿಗೆ ಹಲವು ಅಪಘಾತಗಳು ಸಂಭವಿಸಿ ಜೀವ ಕಳೆದುಕೊಂಡಿದ್ದು, ಇದೀಗ ಗುಡ್ಡ ಕುಸಿತದ ಭೀತ ಎಲ್ಲರನ್ನು ಕಾಡುತ್ತಿದೆ.
ಇನ್ನು ಈ ಬಗ್ಗೆ ಪ್ರಭಾರ ಅಪರ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ್ ಅವರನ್ನು ಕೇಳಿದಾಗ, ಮಳೆಗಾಲ ಪೂರ್ವದಲ್ಲಿಯೇ ಹೆದ್ದಾರಿಯಲ್ಲಿ ಸಂಭವಿಸಬಹುದಾದ ಅವಘಡಗಳನ್ನು ತಪ್ಪಿಸಲು ಜಿಲ್ಲಾಡಳಿತ ಐಆರ್ಬಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅಲ್ಲದೆ ಅಪಾಯ ಸಂಭವಿಸಬಹುದಾದ ಪ್ರದೇಶಗಳಲ್ಲಿ ಉಪವಿಭಾಗಾಧಿಕಾರಿಗಳಿಗೆ ಚರ್ಚಿಸಿ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ. ಇದೀಗ ಗುಡ್ಡ ಕುಸಿಯುತ್ತಿರುವ ಪ್ರದೇಶಗಳಲ್ಲಿಯೂ ಐಆರ್ ಬಿ ಕಂಪನಿಯವರಿಗೆ ತಿಳಿಸಿ ಮುಂಜಾಗೃತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಒಟ್ಟಾರೆ ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಹೆದ್ದಾರಿಯಲ್ಲಿ ಗುಡ್ಡ ಕುಸಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಮುನ್ಸೂಚನೆ ನಡುವೆಯೂ ಹಲವೆಡೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸಾಕಷ್ಟು ಅವಘಡ, ಅಪಘಾತಗಳು ಸಂಭವಿಸಿದ್ದು, ಈ ಬಗ್ಗೆ ಸಂಬಂಧಪಟ್ಟವರು ಕೂಡಲೇ ತುರ್ತು ಕ್ರಮ ಕೈಗೊಂಡು ಸಂಭವಿಸಬಹುದಾದ ಅಪಾಯವನ್ನು ತಪ್ಪಿಸಬೇಕಿದೆ.

ಬೈಟ್ ೧ ದೇವರಾಜ್, ಬೈಕ್ ಸವಾರ

ಬೈಟ್ ಎಸ್ ಯೋಗೇಶ್ವರ, ಪ್ರಭಾರ ಅಪರ ಜಿಲ್ಲಾಧಿಕಾರಿ

Body:ಕ

Conclusion:ಕ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.