ETV Bharat / state

ಶಿರಸಿಯಲ್ಲೂ ಮುನ್ನೆಲೆಗೆ ಬಂದ ವಸ್ತ್ರಸಂಹಿತೆ ವಿಚಾರ: ಮಾರಿಕಾಂಬೆ ದರ್ಶನಕ್ಕೂ ಸಾಂಪ್ರದಾಯಿಕ ಉಡುಗೆಯೇ?

ಶಿರಸಿಯ ಮಾರಿಕಾಂಬಾ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರಬೇಕು ಎಂಬ ಒತ್ತಡ ಕೇಳಿ ಬಂದಿದೆ. ಈ ಬಗ್ಗೆ ಆಡಳಿತ ಮಂಡಳಿ ಯಾವ ರೀತಿ ನಿರ್ಧಾರಕ್ಕೆ ಮುಂದಾಗುತ್ತದೆ ಕಾದು ನೋಡಬೇಕಿದೆ.

Etv Bharat
ಶಿರಸಿಯ ಮಾರಿಕಾಂಬಾ ದೇವಸ್ಥಾನ
author img

By

Published : Nov 23, 2022, 8:27 PM IST

ಶಿರಸಿ(ಉತ್ತರ ಕನ್ನಡ): ದಕ್ಷೀಣ ಕನ್ನಡದ ದೇವಾಲಯಗಳಲ್ಲಿ ಸಾಮಾನ್ಯವಾಗಿರುವ ವಸ್ತ್ರ ಸಂಹಿತೆ ನೀತಿ ಇದೀಗ ಮಲೆನಾಡ ಭಾಗದವರೆಗೂ ತಲುಪಿದೆ. ಕರಾವಳಿಯ ಹಲವು ದೇವಾಲಯಗಳಲ್ಲಿ ಈ ಬಗ್ಗೆ ವಾದ - ವಿವಾದಗಳು ನಡೆಯುತ್ತಲೇ ಇದ್ದು, ಇದೀಗ ದಕ್ಷಿಣ ಭಾರತದಲ್ಲೇ ಅತ್ಯಂತ ಜಾಗೃತ ಪೀಠ ಎನಿಸಿಕೊಂಡ ಮಲೆನಾಡ ಆದಿ ದೇವತೆ ಶಿರಸಿ ಮಾರಿಕಾಂಬಾ ದೇವಾಲಯದತ್ತ ಮುಖ ಮಾಡಿದೆ.

ಶಿರಸಿಯ ಮಾರಿಕಾಂಬಾ ದೇವಸ್ಥಾನದಲ್ಲಿ ಸಾತ್ವಿಕ ಉಡುಪುಗಳನ್ನು ಧರಿಸಿ ಬರುವ ದೃಷ್ಟಿಯಿಂದ ದೇವಾಲಯದಲ್ಲಿ ವಸ್ತ್ರಸಂಹಿತೆ ಜಾರಿಗೆ ತರಬೇಕೆಂದು ಹಿಂದೂ ಜನಜಾಗೃತಿ ಸಮಿತಿ ದೇವಸ್ಥಾನದ ಆಡಳಿತ ವರ್ಗದವರಿಗೆ ಮನವಿಯನ್ನು ನೀಡಿದ್ದಾರೆ. ಮಾರಿಕಾಂಬಾ ದೇವಸ್ಥಾನವು ಉತ್ತರಕನ್ನಡ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲೊಂದು.

ಶಿರಸಿ ಮಾರಿಕಾಂಬಾ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ದೇವಾಲಯದ ಆಡಳಿತ ಮಂಡಳಿಗೆ ಮನವಿ ಮಾಡಿದೆ

ಭಕ್ತರು ಬೇಡಿದ್ದನ್ನು ನೀಡುತ್ತಾಳೆಂಬ ನಂಬಿಕೆ ಇರುವ ಶ್ರೀ ಮಾರಿಕಾಂಬಾ ದೇವಸ್ಥಾನವು ಒಂದು ಕಾರಣಿಕ ಸ್ಥಳವಾಗಿದ್ದು, ಅತ್ಯಂತ ಪವಿತ್ರ ಹಾಗೂ ಸಮಾಜಕ್ಕೆ ಚೈತನ್ಯವನ್ನು ನೀಡುವ ಪುಣ್ಯಕ್ಷೇತ್ರವಾಗಿದೆ. ಹಿಂದೂ ಸಂಸ್ಕೃತಿಯ ಪ್ರಕಾರ ಉಡುಪುಗಳನ್ನು ಧರಿಸುವುದರಿಂದ ದೇವಸ್ಥಾನದ ಪಾವಿತ್ರ್ಯವನ್ನು ಜೋಪಾನ ಮಾಡಿದಂತಾಗುತ್ತದೆ. ವಿದೇಶಿ ಸಂಸ್ಕೃತಿಯ ಉಡುಪುಗಳಿಂದ ದೇವಸ್ಥಾನದ ಸಾತ್ವಿಕತೆಗೆ ಭಂಗ ಉಂಟಾಗಲಿದೆ ಎಂಬುದು ವೇದಿಕೆಯ ಅಭಿಪ್ರಾಯವಾಗಿದೆ.

ಆದರೆ ವಸ್ತ್ರ ಸಂಹಿತೆ ಜಾರಿಗೆ ಮಾಡುವುದರಿಂದ ದೇವಾಲಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆ ಆಗುವ ಭೀತಿ ಇದೆ. ಇದಕ್ಕೆ ಮುಖ್ಯ ಕಾರಣ ಎಂದರೆ ಮಲೆನಾಡಿನ ಸೌಂದರ್ಯ ಸವಿಯಲು ಬರುವ ಪ್ರವಾಸಿಗರೇ ಹೆಚ್ಚು ದೇವಾಲಯಕ್ಕೆ ಭೇಟಿ ನೀಡುತ್ತಿರುವುದರಿಂದ ವಸ್ತ್ರ ಸಂಹಿತೆ ಬಂದಲ್ಲಿ ದರ್ಶನ ಪಡೆಯುವವರ ಸಂಖ್ಯೆ ಕಡಿಮೆ ಆಗುವ ಶಂಕೆ ಎಂದು ಸ್ಥಳೀಕರು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: ಕುಕ್ಕೆಯಲ್ಲಿ ಚಂಪಾಷಷ್ಠಿಗೆ ಅನ್ಯಮತೀಯರ ವ್ಯಾಪಾರ ವಹಿವಾಟಿಗೆ ಅವಕಾಶ ಇಲ್ಲ: ಬ್ಯಾನರ್ ಪ್ರತ್ಯಕ್ಷ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.