ಕಾರವಾರ: ಗೋ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸ್ಥಳಿಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಅಂಕೋಲಾ ತಾಲೂಕಿನ ಕನಸೇಗದ್ದೆ ಬಳಿ ನಡೆದಿದೆ.
ಬಂಧಿತರನ್ನು ಗಂಗಾವಳಿಯ ಖಾದರ ಬಾಷಾ ಮೈನುದ್ದೀನ್ ಕೊಯಬಾ (31) ಮತ್ತು ಮುಜಾಮಿನ್ ಅಬ್ದುಲ್ ಖಾದರ್ (18) ಎಂದು ತಿಳಿದು ಬಂದಿದೆ. ಈ ಇಬ್ಬರು ಬಹಿರಂಗವಾಗಿ ರಸ್ತೆ ಮೇಲೆ ಗೋ ಮಾಂಸ ಮಾರುತ್ತಿದ್ದರು. ಇದನ್ನು ಕಂಡು ಕನಸೇಗದ್ದೆ ಯುವಕರು ಪ್ರಶ್ನಿಸಿದಾಗ 25 ಕೆಜಿ ಮಾಂಸವನ್ನು ಮಂಗಳೂರಿನಿಂದ ತಂದು ಮಾರುತ್ತಿರುವುದಾಗಿ ಇಬ್ಬರು ಒಪ್ಪಿಕೊಂಡಿದ್ದಾರೆ. ತಕ್ಷಣ ಅವರನ್ನು ಹಿಡಿದ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಂಧಿತರಿಂದ ಒಟ್ಟು 6 ಕೆ.ಜಿ ಮಾಂಸ ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.