ಕಾರವಾರ(ಉತ್ತರಕನ್ನಡ): ಉತ್ತರಕನ್ನಡ ಜಿಲ್ಲೆಯಲ್ಲಿಂದು 6 ಕೊರೊನಾ ಪ್ರಕರಣಗಳು ಕಂಡುಬಂದಿವೆ.
ಮುಂಬೈನಿಂದ ಹಳಿಯಾಳಕ್ಕೆ ಮರಳಿದ್ದ ನಾಲ್ಕು ವರ್ಷದ ಬಾಲಕ, ಮಂಗಳೂರಿನ ಕಂಟೈನ್ಮೆಂಟ್ ಝೋನ್ಗೆ ಹೋಗಿ ಬಂದಿದ್ದ ಅಂಕೋಲಾ ಮೂಲದ 50 ವರ್ಷದ ಪುರುಷ, ಮುಂಬೈನಿಂದ ಹೊನ್ನಾವರಕ್ಕೆ ವಾಪಸ್ ಆಗಿದ್ದ 37 ವರ್ಷದ ಪುರುಷ ಹಾಗೂ ಆತನ ಎರಡು ವರ್ಷದ ಮಗುವಿಗೆ ಸೋಂಕು ದೃಢಪಟ್ಟಿದೆ.
ಇನ್ನು, ಇತ್ತೀಚಿಗೆ ಸೋಂಕು ದೃಢಪಟ್ಟಿದ್ದ ಯಲ್ಲಾಪುರದ ಸಾರಿಗೆ ಬಸ್ ಕಂಡಕ್ಟರ್ ಸಂಪರ್ಕದಲ್ಲಿದ್ದ ಯಲ್ಲಾಪುರದ 26 ವರ್ಷದ ಸಾರಿಗೆ ಸಿಬ್ಬಂದಿ, ಮುಂಬೈನಿಂದ ವಾಪಸ್ ಆಗಿದ್ದ ಸೋಂಕಿತನ ಸಂಪರ್ಕದಲ್ಲಿದ್ದ 28 ವರ್ಷದ ಯಲ್ಲಾಪುರ ಮೂಲದ ಯುವಕನಿಗೂ ಸೋಂಕು ದೃಢಪಟ್ಟಿದೆ.