ಕಾರವಾರ: ಸಿಎಎ ಹಾಗೂ ಎನ್ಆರ್‌ಸಿ ಕಾಯ್ದೆ ಜಾರಿ ವಿರೋಧಿಸಿ ಕಾರವಾರದಲ್ಲಿ ನಾರ್ಥ್ ಕೆನರಾ ಮುಸ್ಲಿಂ ಯುನೈಟೆಡ್ ಫೋರಂ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ ತೆಗೆದುಹಾಕುವಂತೆ ಆಗ್ರಹಿಸಿದರು. ಅಲ್ಲದೇ, ಸಿಎಎ ಕಾಯ್ದೆಯನ್ನು ಜಾತಿ ಆಧಾರದಲ್ಲಿ ರೂಪಿಸಿದ್ದು, ಇದರಲ್ಲಿ ಮುಸ್ಲಿಂಮರನ್ನ ದೇಶದಿಂದ ಹೊರಹಾಕುವ ದುರುದ್ದೇಶವಿದೆ. ಇದು ಅಸಂವಿಧಾನಿಕ ಕಾಯ್ದೆಯಾಗಿದ್ದು, ಕೇಂದ್ರ ಸರ್ಕಾರ ಸಿಎಎ,ಎನ್ಆರ್‌ಸಿ ಕಾಯ್ದೆಗಳನ್ನು ಕೂಡಲೇ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ನ್ಯಾಯಾಧೀಶರಿಗೆ ಮನವಿ ಸಲ್ಲಿಸಿ,ಕಾಯ್ದೆ ಹಿಂಪಡೆಯುವಂತೆ ಮನವಿ ಸಲ್ಲಿಸಿದರು.