ಕಾರವಾರ(ಉತ್ತರಕನ್ನಡ): ಕಾರವಾರ ಮೆಡಿಕಲ್ ಕಾಲೇಜಿನ ಕೋವಿಡ್-19 ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ 52 ಸೋಂಕಿತರ ಪೈಕಿ 20 ಮಂದಿ ಸಂಪೂರ್ಣ ಗುಣಮುಖರಾಗಿದ್ದು, ಇಂದು ಬಿಡುಗಡೆಯಾಗಲಿದ್ದಾರೆ.
ಈವರೆಗೆ ಕಾಲೇಜಿನ ಕೋವಿಡ್-19 ವಾರ್ಡ್ನಲ್ಲಿ ಓರ್ವ ಗರ್ಭಿಣಿ, 5 ತಿಂಗಳ ಮಗು, 60 ವರ್ಷ ದಾಟಿದ ನಾಲ್ವರು ಸೋಂಕಿತರು ಸೇರಿ ಒಟ್ಟು 52 ಜನರು ಚಿಕಿತ್ಸೆ ಪಡೆಯುತ್ತಿದ್ದರು. ಇವರಲ್ಲಿ 20 ಮಂದಿ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆ ತಿಳಿಸಿದೆ.
ಇಲ್ಲಿ ಚಿಕಿತ್ಸೆಗೆ ದಾಖಲಾದವರ ಪೈಕಿ ಕೆಲವರು ಕೊರೊನಾ ಸೋಂಕಿನ ಜೊತೆಗೆ ಡಯಾಬಿಟಿಸ್ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಇಂತಹ ಕಾಯಿಲೆಗೊಳಗಾದವರು ಹಾಗೂ 60 ವರ್ಷ ದಾಟಿದವರಿಗೆ ಕೊರೊನಾ ಸೋಂಕು ಅಪಾಯ ತಂದಿಡುವ ಸಾಧ್ಯತೆಗಳು ಹೆಚ್ಚಿವೆ. ಆದರೆ, ವೈದ್ಯರು ಮತ್ತು ನರ್ಸಿಂಗ್ ಸಿಬ್ಬಂದಿಯ ಅವಿರತ ಪ್ರಯತ್ನದಿಂದಾಗಿ ಉತ್ತಮ ಚಿಕಿತ್ಸೆ ದೊರೆಯುತ್ತಿದ್ದು, ವೃದ್ಧರು ಕೂಡ ಗುಮುಖರಾಗಿದ್ದಾರೆ. ಹೀಗಾಗಿ ವೈದ್ಯಕೀಯ ಸಿಬ್ಬಂದಿಗೆ ಆತ್ಮಸ್ಥೈರ್ಯ ತುಂಬಲು ಅಭಿನಂದಿಸಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 64 ಸೋಂಕಿತರು ಪತ್ತೆಯಾಗಿದ್ದರು. ಈ ಪೈಕಿ ಮೊದಲು 12 ಜನರ ಗುಣಮುಖರಾಗಿದ್ದರು, ಇಂದು ಮತ್ತೆ 20 ಜನ ಬಿಡುಗಡೆಯಾಗಲಿದ್ದಾರೆ.