ETV Bharat / state

ಮಂಗಳಮುಖಿಯರಿಂದ ಅನೈತಿಕ ದಂಧೆ ಆರೋಪ: ಕಾರ್ಯಾಚರಣೆಗಿಳಿದ ಉಡುಪಿ ಎಸ್ಪಿ

ಅನೈತಿಕ ದಂಧೆ ತಡೆಯಲು ಉಡುಪಿ ಎಸ್​ಪಿ ಕಾರ್ಯಾಚರಣೆ ನಡೆಸಿದ್ದಾರೆ. ಮಧ್ಯರಾತ್ರಿ ನಡೆಸಿದ ಕಾರ್ಯಚರಣೆಗೆ ಮಂಗಳಮುಖಿಯರು ದಂಗಾಗಿದ್ದು, ಎಸ್​ಪಿ ಜೊತೆ ಕೆಲಕಾಲ ವಾಗ್ವಾದಕ್ಕೆ ಇಳಿದಿದ್ದರು.

ಉಡುಪಿ ಎಸ್​ಪಿ ಕಾರ್ಯಾಚರಣೆ
ಉಡುಪಿ ಎಸ್​ಪಿ ಕಾರ್ಯಾಚರಣೆ
author img

By

Published : Dec 16, 2022, 2:32 PM IST

ಅನೈತಿಕ ದಂಧೆ ವಿರುದ್ಧ ಕಾರ್ಯಾಚರಣೆಗಿಳಿದ ಉಡುಪಿ ಎಸ್ಪಿ

ಉಡುಪಿ: ಇಲ್ಲಿನ ಸಿಟಿ ಬಸ್ ನಿಲ್ದಾಣದಲ್ಲಿ ಮಂಗಳಮುಖಿಯರ ಅನೈತಿಕ ದಂಧೆಯ ವಿರುದ್ಧ ಉಡುಪಿ ಎಸ್ಪಿ ಅಕ್ಷಯ್ ಹಾಕೆ ಮಚ್ಚಿಂದ್ರ ಸೈಲೆಂಟ್ ಕಾರ್ಯಾಚರಣೆ ನಡೆಸಿದ್ದಾರೆ. ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿದ ಎಸ್‌ಪಿ ದಾಳಿಗೆ ಮಂಗಳಮುಖಿಯರೇ ದಂಗಾಗಿದ್ದಾರೆ.

ಎಸ್ಪಿ ಅಂತ ತಿಳಿಯದ ಮಂಗಳಮುಖಿಯರು ಎಸ್ಪಿ ಜೊತೆಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಅವಾಚ್ಯ ಶಬ್ದಗಳಿಂದ ಎಸ್ಪಿ‌ಗೆ ಬೈದು ನಿಂದಿಸಿದ್ದಾರೆ ಎನ್ನಲಾಗ್ತಿದೆ. ಹೀಗಾಗಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕಾರ್ಯಾಚರಣೆ ವೇಳೆ ಇಬ್ಬರು ಮಧ್ಯವರ್ತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಅನುಮಾನಾಸ್ಪದ ವ್ಯಕ್ತಿಗಳ ಮನೆಗಳ ಮೇಲೆ ಪೊಲೀಸರ ದಾಳಿ: ಮಾರಕಾಸ್ತ್ರಗಳ ಪರಿಶೀಲನೆ

ಗ್ರಾಹಕರನ್ನು ರಿಕ್ಷಾದಲ್ಲಿ ಕರೆ ತಂದು ಅನೈತಿಕ ದಂಧೆಯಲ್ಲಿ ತೊಡಗಿಸುತ್ತಿದ್ದ, ಇಬ್ಬರ ವಿರುದ್ಧ ಸಾರ್ವಜನಿಕರು ದೂರು ನೀಡಿದ ಹಿನ್ನೆಲೆ ಸ್ವತಃ ಎಸ್‌ಪಿ ಕಾರ್ಯಾಚರಣೆಗಿಳಿದಿದ್ದರು. ಮಂಗಳಮುಖಿಯರು, ವಾಹನಗಳನ್ನು ಅಡ್ಡ ಹಾಕಿ ಸಾರ್ವಜನಿಕರಿಗೆ ತೊಂದರೆ ಮಾಡ್ತಾ ಇದ್ದರು. ದಾರಿದೀಪವನ್ನು ಒಡೆದು ಹಾಕಿ, ಕತ್ತಲಲ್ಲಿ ಜನರಿಂದ ಹಣ ವಸೂಲಿ ಮಾಡುತ್ತಾರೆ ಎನ್ನುವ ದೂರು ಬಂದಿತ್ತು. ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.