ಉಡುಪಿ: ಗಣೇಶ ಚತುರ್ಥಿ ಹಬ್ಬವನ್ನು ಸಾಮೂಹಿಕ ಆಚರಣೆ ಮಾಡಲು ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿ ಜಗದೀಶ್ ಹೇಳಿದ್ದಾರೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಈಗಾಗಲೇ ಬಂದಿದೆ. ರಾಜ್ಯ ಸರ್ಕಾರವು ಮಾರ್ಗಸೂಚಿ ಹೊರಡಿಸಿದೆ. ಸಾರ್ವಜನಿಕರು ತಮ್ಮ ತಮ್ಮ ಮನೆಗಳಲ್ಲಿ ಹಬ್ಬ ಆಚರಿಸಬಹುದು ಎಂದಿದ್ದಾರೆ.
ಸಾರ್ವಜನಿಕವಾಗಿ ಗಣೇಶ ಚತುರ್ಥಿ ಆಚರಣೆಗೆ ಅವಕಾಶ ಇಲ್ಲ ಎಂದು ಎರಡೂ ಮಾರ್ಗಸೂಚಿಗಳಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ನಮ್ಮ ಜಿಲ್ಲೆಯಲ್ಲಿ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ರಾಜ್ಯಾದ್ಯಂತ ಒಂದೇ ಮಾರ್ಗಸೂಚಿ ಅನುಸರಿಸಲು ಆದೇಶಿಸಲಾಗಿದೆ. ಗಣೇಶ ದೇವಸ್ಥಾನಗಳಲ್ಲಿ ಗಣಪತಿ ಪೂಜೆ ಮಾಡಬಹುದು. ತಮ್ಮ ಮನೆಗಳಲ್ಲೂ ಪೂಜೆ ಮಾಡಬಹುದು ಎಂದರು.
ಇನ್ನು ಉತ್ಸವ, ಮೆರವಣಿಗೆ, ಮೈಕ್ ಅಳವಡಿಸಲು ಅವಕಾಶವಿಲ್ಲ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ನಿರ್ಧಾರ ಮಾಡಲಾಗಿದೆ. ಅವರವರ ಮನೆಯಗಳಲ್ಲಿರುವ ಬಾವಿಗಳಲ್ಲಿ ಗಣೇಶ ವಿಸರ್ಜನೆಗೆ ವ್ಯವಸ್ಥೆ ಮಾಡಿಕೊಳ್ಳಬೇಕು. ಸಾಮೂಹಿಕ ವಿಸರ್ಜನೆಗೆ ಅವಕಾಶವಿಲ್ಲ. ದೇವಸ್ಥಾನದಲ್ಲಿ ಪೂಜೆ ವೇಳೆ ಸಾಮಾಜಿಕ ಅಂತರ, ಮಸ್ಕ್ ಕಡ್ಡಾಯ ಎಂದಿದ್ದಾರೆ.