ETV Bharat / state

ನಿಶ್ಚಿತಾರ್ಥ ಮಾಡಿಕೊಂಡವನು ಪಕ್ಕಾ 420 : ಯುವತಿ ಬದುಕು ದುರಂತ ಅಂತ್ಯ!​ - ಮದುವೆ ಫಿಕ್ಸ್​ ಆಗಿದ್ದ ಹುಡುಗಿ ಸಾವು ಸುದ್ದಿ

ಮದುವೆ ಅನ್ನೋದು ಪ್ರತಿ ಹೆಣ್ಣಿನ ಬಾಳಿನ ಹೊಸಜೀವನಕ್ಕೆ ಮುನ್ನುಡಿ ಬರೆಯುತ್ತೆ. ಮದುವೆ ನಿಶ್ಚಯವಾದ ಬಳಿಕ ಭಾವಿ ಪತಿಯಾಗುವವನ ಬಗೆಗೆ ಕನಸು ಕಾಣುತ್ತಾ ಮದುವೆಯ ದಿನಕ್ಕಾಗಿ ಎದುರು ನೋಡ್ತಿರ್ತಾರೆ. ಆದರೆ ಸಪ್ತಪದಿ ತುಳಿಯೋ ಹುಡುಗ ನಿಶ್ಚಿತಾರ್ಥದ‌ ಬಳಿಕ ದೈಹಿಕ ಹಾಗೂ ವರದಕ್ಷಿಣೆ ಕಿರುಕುಳ ನೀಡಲು ಆರಂಭಿಸಿದ್ರೆ ಆಕೆಯ ಪಾಡು ಹೇಳತೀರದು. ಸೈಕೋ ಒಬ್ಬ ಯುವತಿ ಬಾಳಲ್ಲಿ ಆಟವಾಡಿದ ಪರಿಣಾಮ ಹುಡುಗಿ ತನ್ನ ಪ್ರಾಣವನ್ನೇ ತೆತ್ತಿದ್ದಾಳೆ.

girl commits suicide due to her fiancy torture
ಉಡುಪಿ
author img

By

Published : Dec 8, 2020, 12:05 PM IST

ಉಡುಪಿ: ಎಲ್ಲವೂ ಅಂದುಕೊಂಡಂತೆ ನಡೆದಿದ್ರೆ ಆಕೆ ಹಸೆಮಣೆ ಏರಲು ರೆಡಿಯಾಗಿರುತ್ತಿದ್ಲು. ಆದ್ರೆ ನಡೆದದ್ದೇ ಬೇರೆ. ‌ಯಾಕಂದ್ರೆ ಮದುವೆಯಾಗಬೇಕಿದ್ದ ಹುಡುಗ ದೊಡ್ಡ ಸೈಕೋ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಮದುವೆ ಮೊದಲೇ ಹಿಂಸೆ‌ ನೀಡುತ್ತಿದ್ದ. ಯುವತಿ‌ ಮನೆಯವರಲ್ಲೂ ವರದಕ್ಷಿಣೆಗಾಗಿ ಒತ್ತಾಯಿಸುತ್ತಿದ್ದ. ಅದ್ಯಾವುದು ನಡೆಯದೇ ಹೋದಾಗ ನಿಶ್ಚಿತಾರ್ಥ ಮಾಡಿಕೊಂಡ‌ ಯುವತಿಗೆ ಕೈಕೊಟ್ಟ ಎನ್ನಲಾಗ್ತಿದೆ. ಯುವಕನ ನಡತೆಯಿಂದ ಬೇಸತ್ತ ಯುವತಿ ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಬೈಂದೂರು ತಾಲೂಕಿನ ನಾಡ ಪಡುಕೋಣೆ‌ ನಿವಾಸಿಯಾಗಿರೋ 26 ರ ಹರೆಯದ ಯುವತಿ ನೋಡಲು ಸುಂದರಿ ಹಾಗೂ ತಂದೆ ತಾಯಿಯ ಮುದ್ದಿನ ಮಗಳು. ಆದರೆ ಹಸಿ ಹಸಿ ಸುಳ್ಳು ಹೇಳಿ ಮ್ಯಾಟ್ರಿಮೋನಿ ವೆಬ್​ಸೈಟ್​​ನಲ್ಲಿ ಪರಿಚಯವಾದ 28 ವರ್ಷದ ಯುವಕ ಗೋವರ್ಧನ್​​ ತನ್ನ ಜೀವನ ಸಂಗಾತಿಯಾಗುತ್ತಾನೆ ಅಂದುಕೊಂಡಿದ್ಲು. ಆದರೆ ತನ್ನ ಜೀವ ಹೋಗಲು ಆತನೇ ಕಾರಣನಾಗಿತ್ತಾನೆಂದು ಆಕೆ ಊಹೆ ಕೂಡ ಮಾಡಿರಲಿಲ್ಲ. ಈತ ಪಕ್ಕಾ 420. ‌ಮ್ಯಾಟ್ರಿಮೋನಿಯಲ್ಲಿ ಆ ಯುವತಿಗೆ ಮದುವೆ ಪ್ರಸ್ತಾಪ ಇಟ್ಟ ಗೋವರ್ಧನ್, ಮಾತುಕತೆ ಬಳಿಕ ಹುಡಗಿ ಮನೆಗೆ ಹೆಣ್ಣು ನೋಡಲು ಬರುವಾಗಲೇ ಯಾರದ್ದೋ ಕಾರಿನಲ್ಲಿ ಬಂದು ತನ್ನ ಕಾರು ಎಂಬಂತೆ ಪೋಸು ಕೊಟ್ಟಿದ್ದ. ಬಳಿಕ ಉಡುಪಿಯಲ್ಲಿರೋ ಸ್ನೇಹಿತನ ಫ್ಲಾಟ್ ಅನ್ನು ತನ್ನ ಫ್ಲಾಟ್ ಅಂತ ಸುಳ್ಳು ಹೇಳಿದ್ದ. ಅದಾದ ಬಳಿಕ ಆನ್ಲೈನ್ ಸೇಲ್ಸ್ ಉದ್ಯಮ ಮಾಡುತ್ತಿದ್ದೇನೆ ಅಂತ ಯಾರದ್ದೋ ಮಳಿಗೆಯನ್ನೇ ತನ್ನ ಕಚೇರಿ ಎಂದು ತೋರಿಸಿ ಯುವತಿ ಮನೆಯವರಿಗೆ ನಂಬಿಸಿದ್ದ. ಅದೇಗೋ ಈ ಆರೋಪಿ, ಹುಡುಗಿಯ ಕುಟುಂಬವನ್ನ ಯಾಮಾರಿಸಿ ಮದುವೆಗೆ ಗ್ರೀನ್ ಸಿಗ್ನಲ್ ಗಿಟ್ಟಿಸಿದ್ದ ಎನ್ನಲಾಗ್ತಿದೆ.

ಸೈಕೋನನ್ನು ನಂಬಿ ಪ್ರಾಣ ತೆತ್ತ ಯುವತಿ: ಆರೋಪಿ ಬಂಧನಕ್ಕೆ ಬಲೆ ಬೀಸಿದ ಪೊಲೀಸರು

ಅವನ ಪ್ಲಾನ್​ನಂತೆ ಇದೇ ಆ.16ಕ್ಕೆ ನಿಶ್ಚಿತಾರ್ಥವೂ ಆಯಿತು. ನಿಶ್ಚಿತಾರ್ಥ ಮಾಡಿಕೊಂಡ ಗೋವರ್ಧನ್ ಆಗಾಗ್ಗೆ ಯುವತಿ‌ ಮನೆಗೆ ಬಂದು ಅವಳನ್ನು ಹೊರಗೆ ಸುತ್ತಾಡಲು ಕರೆದುಕೊಂಡು ಹೋಗುತ್ತಿದ್ದ. ಈ ವೇಳೆ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದನಂತೆ. ಅಷ್ಟೇ ಅಲ್ಲ, ಪದೇ ಪದೇ ವಾಟ್ಸಾಪ್ ನಲ್ಲಿ ನಗ್ನ ಚಿತ್ರ ಕಳುಹಿಸು ಎಂದು ಬೇಡಿಕೆ ಇಡುತ್ತಿದ್ದನಂತೆ. ಆಗ್ಲೇ ಗೊತ್ತಾಗಿದ್ದು ಈತ ಒಬ್ಬ ಸೈಕೋ, ಒಬ್ಬ ಕಾಮುಕ ಅಂತ. ಇದಕ್ಕೆ ಯುವತಿ ಒಪ್ಪದಿದ್ದಾಗ ಮದುವೆಗೆ 10 ಲಕ್ಷ ನಗದು 50 ಪವನ್ ಚಿನ್ನ ಕೊಡಲೇಬೇಕು ಅಂತ ಪಟ್ಟು ಹಿಡಿದಿದ್ದನಂತೆ ಗೋವರ್ಧನ್. ಇದಕ್ಕೆ‌ ಒಪ್ಪದಿದ್ದಾಗ ನಿಮ್ಮ ಮಗಳಿಗೆ ವಿಷ‌ ಕೊಟ್ಟು ಸಾಯಿಸಿ ಎಂದು ಹೇಳಿದ್ದನಂತೆ. ಇವೆಲ್ಲದರಿಂದ ಖಿನ್ನತೆಗೆ ಜಾರಿದ್ದ ಯುವತಿ ನವೆಂಬರ್ 6ರಂದು ಇಲಿಪಾಶಾಣ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಇದೀಗ ಗಂಗೋಳ್ಳಿ ಪೊಲೀಸ್ ಠಾಣೆಯಲ್ಲಿ ಆರೋಪಿ ಗೋವರ್ಧನ್ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ತಾಯಿ‌-ಮಗ ಇಬ್ಬರೂ ನಾಪತ್ತೆಯಾಗಿದ್ದಾರೆ. ಇನ್ನೊಂದು ಕಡೆ ಆತನನ್ನ ಬೇಗ ಹುಡುಕಿ ಶಿಕ್ಷೆ ಕೊಡುವಂತೆ ಒತ್ತಾಯಿಸಿರುವ ಮೃತ ಯುವತಿಯ ಪೋಷಕರು ಇನ್ಯಾರು ಆತನಿಗೆ ಹುಡುಗಿ‌ ಕೊಡಬೇಡಿ ಎಂದು ವಿನಂತಿಸಿದ್ದಾರೆ. ಒಟ್ಟಾರೆ ಬದುಕಿ ಬಾಳಬೇಕಿದ್ದ ಹೆಣ್ಣುಜೀವವೊಂದು ದುಷ್ಟನ ಮಾತಿಗೆ ಮರುಳಾಗಿ ಜೀವವನ್ನೇ ಬಿಟ್ಟಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.