ಉಡುಪಿ: ಮೂವರು ಮಕ್ಕಳು ನೀರುಪಾಲಾದ ದುರ್ಘಟನೆ ಕಾಪು ತಾಲೂಕು ಪಾಂಬೂರು ಬಳಿ ನಡೆದಿದೆ.
ಶಿರ್ವ ಗ್ರಾಮದ ಪಾಂಬೂರು ಪೈಂಟಿಂಗ್ ಕೆಲಸ ಮುಗಿಸಿ ಬಂದ ಐದು ಜನ ಯುವಕರು ಕೈಕಾಲು ತೊಳೆಯಲು ಪಾಪನಾಶಿನಿ ನದಿ ನೀರಿಗಿಳಿದಿದ್ದರು. ಆಗ ಓರ್ವ ಕಾಲು ಜಾರಿ ಬಿದ್ದಿದ್ದು, ಆತನನ್ನು ರಕ್ಷಿಸಲು ಇನ್ನಿಬ್ಬರು ಹೋಗಿದ್ದರು. ಆದ್ರೆ ಮೂವರು ಸಹ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಶಂಕರಪುರ ನಿವಾಸಿ ಕೆಲ್ವಿನ್ (21), ಕಟಪಾಡಿ ಸರ್ಕಾರಿ ಗುಡ್ಡೆ ನಿವಾಸಿಗಳಾದ ರಿಜ್ವಾನ್ (18) ಮತ್ತು ಜಾಬಿರ್ (19) ಮೃತ ಯುವಕರು. ಮಲ್ಪೆ ಮುಳುಗು ತಜ್ಞ ಈಶ್ವರ್ ನೀರಿಗಿಳಿದು ಮೃತದೇಹಗಳನ್ನು ಮೇಲಕ್ಕೆತ್ತಿದ್ದಾರೆ.
ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ಅಜ್ಜರಕಾಡು ಆಸ್ಪತ್ರೆಗೆ ರವಾನಿಸಲಾಗಿದೆ. ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಾಪು ವೃತ್ತ ನಿರೀಕ್ಷಕರಾದ ಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.