ತುಮಕೂರು: ಕೊರೊನಾ ಸೋಂಕಿಗೆ ಒಳಗಾಗಿರೋ ಕುಣಿಗಲ್ ಕಾಂಗ್ರೆಸ್ ಶಾಸಕ ಡಾ. ರಂಗನಾಥ್ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿ ಕಾರ್ಯಕರ್ತರು ಯಡಿಯೂರಿನ ಸಿದ್ಧಲಿಂಗೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು.
ರಾಜೋಪಚಾರ ರಥೋತ್ಸವ ಅಷ್ಟೋತ್ತರ ಪೂಜೆಯನ್ನು ನೆರವೇರಿಸಿ ಶಾಸಕರು ಕೊರೊನಾದಿಂದ ಮುಕ್ತಿ ಪಡೆಯಲಿ ಎಂದು ಬೇಡಿಕೊಂಡಿರು.
ಈ ಸಂದರ್ಭದಲ್ಲಿ ಬಿಬಿಎಂಪಿ ಸದಸ್ಯ ಗೋವಿಂದರಾಜು, ಕಾಂಗ್ರೆಸ್ ಮುಖಂಡ ವೈ.ವಿ. ಕೆಂಪಣ್ಣ ಸೇರಿದಂತೆ ಪ್ರಮುಖ ಮುಖಂಡರು ಪೂಜೆಯಲ್ಲಿ ಪಾಲ್ಗೊಂಡಿದ್ದರು.