ETV Bharat / state

ಗ್ರಾಪಂ ಚುನಾವಣೆ: ಸದಸ್ಯತ್ವ ಹರಾಜಿನಲ್ಲಿ ಭಾಗಿಯಾಗಿದ್ದ 10 ಮಂದಿ ಗಡಿಪಾರಿಗೆ ನಿರ್ಧಾರ

author img

By

Published : Dec 19, 2020, 11:02 PM IST

ಗ್ರಾಪಂ ಚುನಾವಣೆ ಹಿನ್ನೆಲೆ ಸದಸ್ಯತ್ವ ಹರಾಜಿನಲ್ಲಿ ಭಾಗಿಯಾಗಿದ್ದ 10 ಜನರನ್ನು ಗಡಿಪಾರು ಮಾಡಲು ನಿರ್ಧರಿಸಲಾಗಿದೆ.

deport 10 people, deport 10 people in Tumkur, membership auctions, membership auctions case, GP Election 2020, GP Election 2020 news, 10 ಜನ ಗಡಿಪಾರು, ತುಮಕೂರಿನಲ್ಲಿ 10 ಜನ ಗಡಿಪಾರು, ಸದಸ್ಯತ್ವ ಹರಾಜು, ಸದಸ್ಯತ್ವ ಹರಾಜು ಸುದ್ದಿ, ಗ್ರಾಪಂ ಚುನಾವಣೆ 2020, ಗ್ರಾಮ ಪಂಚಾಯ್ತಿ ಚುನಾವಣೆ 2020 ಸುದ್ದಿ,
ಸದಸ್ಯತ್ವ ಹರಾಜಿನಲ್ಲಿ ಭಾಗಿಯಾಗಿದ್ದ 10 ಮಂದಿ ಗಡಿಪಾರಿಗೆ ನಿರ್ಧಾರ

ತುಮಕೂರು: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆ ಸದಸ್ಯತ್ವ ಸ್ಥಾನಗಳ ಹರಾಜು ಪ್ರಕ್ರಿಯೆಯ ಮೂಲಕ ಚುನಾವಣಾ ಅಕ್ರಮದಲ್ಲಿ ಭಾಗಿಯಾಗಿದ್ದ ಹತ್ತು ಜನ ಆರೋಪಿಗಳನ್ನು ಗಡಿಪಾರು ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.

ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಗ್ರಾಮ ಪಂಚಾಯಿತಿ ಚುನಾವಣೆ ಮುಗಿಯುವವರೆಗೂ ಗಡಿಪಾರು ಮಾಡಲು ನಿರ್ಧರಿಸಲಾಗಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕ ನಿಷ್ಪಕ್ಷಪಾತವಾದ ಯಾವುದೇ ಒತ್ತಡ ಮತ್ತು ಆಮಿಷಗಳನ್ನು ಹೊಂದದೇ ಚುನಾವಣೆ ನಡೆಸಲು ಇರುವ ನೀತಿ ಸಂಹಿತೆಗಳನ್ನು 10 ಮಂದಿ ಆರೋಪಿಗಳು ಉಲ್ಲಂಘನೆ ಮಾಡಿದ್ದಾರೆ.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಥಳೀಯ ದೇವಸ್ಥಾನಗಳ ಅಭಿವೃದ್ಧಿ ಹೆಸರಿನಲ್ಲಿ ಸದಸ್ಯತ್ವವನ್ನು ಹರಾಜು ಮೂಲಕ ಹಣ ನೀಡಿ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಘಟನೆ ಗುಬ್ಬಿ, ಕುಣಿಗಲ್, ಚಿಕ್ಕನಾಯಕನಹಳ್ಳಿ ಮತ್ತು ತುರುವೇಕೆರೆ ತಾಲೂಕಿನಲ್ಲಿ ನಡೆದಿದೆ.

ಈ ಹರಾಜು ಪ್ರಕ್ರಿಯೆಗೆ ಸಂಬಂಧಪಟ್ಟಂತೆ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಆರು ಪ್ರಕರಣಗಳು, ಕುಣಿಗಲ್​ , ಚಿಕ್ಕನಾಯಕನಹಳ್ಳಿ, ನೊಣವಿನಕೆರೆ, ಚೇಳೂರು ಪೊಲೀಸ್ ಠಾಣೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿವೆ. ಹುಳಿಯಾರ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ಸೇರಿದಂತೆ ಒಟ್ಟು 11 ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.