ETV Bharat / state

ದಿನಸಿ ಅಂಗಡಿಗೆ ಪರ್ಮಿಟ್​ ಪಡೆದು ನಡೆಯುತ್ತಿವೆ ನಕಲಿ ಕ್ಲಿನಿಕ್​​ಗಳು... ಫೇಕ್​ ಡಾಕ್ಟರ್​ ಬಗ್ಗೆ ಇರಲಿ ಎಚ್ಚರ - ತುಮಕೂರಿನಲ್ಲಿ ನಕಲಿ ಕ್ಲಿನಿಕ್​ಗಳು ಆರಂಭ

ತುಮಕೂರಿನಲ್ಲಿ ಪಾಲಿಕೆಯಿಂದ ಟ್ರೇಡ್ ಲೈಸೆನ್ಸ್ ಪಡೆದು ಸದ್ದಿಲ್ಲದೇ ಒಟ್ಟು100 ನಕಲಿ ಕ್ಲಿನಿಕ್​ಗಳು ಆರಂಭಗೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ

ತುಮಕೂರು ಪಾಲಿಕೆಯಿಂದ ಟ್ರೇಡ್ ಲೈಸೆನ್ಸ್ ಪಡೆದು ತಲೆಯೆತ್ತಿವೆ ನಕಲಿ ಕ್ಲಿನಿಕ್​ಗಳು
author img

By

Published : Nov 13, 2019, 10:33 PM IST

ತುಮಕೂರು: ಜಿಲ್ಲೆಯಲ್ಲಿ ಪಾಲಿಕೆಯಿಂದ ಟ್ರೇಡ್ ಲೈಸೆನ್ಸ್ ಪಡೆದು ಸದ್ದಿಲ್ಲದೇ ಒಟ್ಟು100 ನಕಲಿ ಕ್ಲಿನಿಕ್​ಗಳು ಆರಂಭಗೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ತುಮಕೂರು ಪಾಲಿಕೆಯಿಂದ ಟ್ರೇಡ್ ಲೈಸೆನ್ಸ್ ಪಡೆದು ತಲೆಯೆತ್ತಿವೆ ನಕಲಿ ಕ್ಲಿನಿಕ್​ಗಳು

ಈಗಾಲೇ ಒಟ್ಟು100 ನಕಲಿ ಕ್ಲಿನಿಕ್​ಗಳಿದ್ದು, ಮುಖ್ಯವಾಗಿ ಇಂತಹ ಕ್ಲಿನಿಕ್ ಗಳನ್ನು ಆರಂಭಿಸುವ ಸಂದರ್ಭದಲ್ಲಿ ಟ್ರೇಡ್ ಲೈಸನ್ಸ್ ಪಡೆಯುವ ಅಗತ್ಯವಿದೆ. ಸಂಬಂಧಪಟ್ಟಂತಹ ಮಹಾನಗರಪಾಲಿಕೆ, ಪುರಸಭೆ, ಪಟ್ಟಣ ಪಂಚಾಯಿತಿ, ನಗರಸಭೆ ವೈದ್ಯರುಗಳಿಗೆ ಕ್ಲಿನಿಕ್ ಆರಂಭಿಸಲು ಲೈಸೆನ್ಸ್ ನೀಡುತ್ತವೆ. ಈ ವೇಳೆ ವೈದ್ಯರು ತಮ್ಮ ಎಂಬಿಬಿಎಸ್ ಪದವಿಯ ಸರ್ಟಿಫಿಕೇಟ್ಗಳನ್ನು ಹಾಜರುಪಡಿಸಿ ಕ್ಲಿನಿಕ್ ಆರಂಭಿಸಲು ಅನುಮತಿ ಪಡೆಯುತ್ತಾರೆ. ಆದರೆ ನಕಲಿ ಡಾಕ್ಟರ್ ಗಳು ಮಾತ್ರ ಸಂಬಂಧಪಟ್ಟಂತಹ ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆಯುವ ಸಂದರ್ಭದಲ್ಲಿ ದಿನಸಿ ಅಂಗಡಿ ಆರಂಭಿಸುವ ಸಲುವಾಗಿ ಲೈಸೆನ್ಸ್ ಪಡೆದಿರುತ್ತಾರೆ. ಆನಂತರದಲ್ಲಿ ಸ್ಥಳೀಯ ಸಂಸ್ಥೆ ಅಧಿಕಾರಿಗಳಾಗಲಿ ಯಾರು ಕೂಡ ಸ್ಥಳಕ್ಕೆ ತೆರಳಿ ಅಲ್ಲಿ ಯಾವ ರೀತಿಯಾದ ವಹಿವಾಟು ನಡೆಯುತ್ತಿದೆ ಎಂಬುದನ್ನು ಪರಿಶೀಲಿಸುವುದಿಲ್ಲ. ಹೀಗಾಗಿ ನಕಲಿ ಡಾಕ್ಟರ್​ಗಳಿಗೆ ನಕಲಿ ಕ್ಲೀನಿಕ್ ಗಳನ್ನು ಆರಂಭಿಸಲು ಇದೊಂದು ವರದಾನವಾಗಿ ಪರಿಣಮಿಸಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಚಂದ್ರಿಕಾ ಡ್ರಗ್ ಕಂಟ್ರೋಲರ್ ಅವರುಗಳು ಅಪಾರ ಪ್ರಮಾಣದ ಔಷಧಿ ಸರಬರಾಜು ಮಾಡುವಂತಹ ಏಜೆನ್ಸಿಗಳು ಹಾಗೂ ಮೆಡಿಕಲ್ ಸ್ಟೋರ್ ಗಳನ್ನು ಪರಿಶೀಲಿಸಬೇಕು. ಹೀಗಾದಾಗ ಮಾತ್ರ ನಕಲಿ ಕ್ಲಿನಿಕ್ ಗಳ ಹಾವಳಿಯನ್ನು ತಪ್ಪಿಸಲು ಸಾಧ್ಯವಾಗಲಿದೆ ಎನ್ನುತ್ತಾರೆ.

Intro:ತುಮಕೂರು ಪಾಲಿಕೆಯಿಂದ ಟ್ರೇಡ್ ಲೈಸೆನ್ಸ್ ಪಡೆದು ತಲೆಯೆತ್ತುತ್ತಿರುವ ನಕಲಿ ಕ್ಲಿನಿಕ್ ಗಳು......

ತುಮಕೂರು
ತುಮಕೂರು ಜಿಲ್ಲೆಯಲ್ಲಿ ತಲೆ ಎತ್ತಿರುವ ನಕಲಿ ಕ್ಲೀನಿಕ್ ಗಳ ಮೂಲ ಹುಡುಕುತ್ತಾ ಹೋದರೆ ವ್ಯವಸ್ಥೆಯಲ್ಲಿನ ಲೋಪವೇ ಈ ಅಕ್ರಮಕ್ಕೆ ಪರೋಕ್ಷವಾಗಿ ಸಾಥ್ ನೀಡಿದೆ ಎಂಬುದು ಬೆಳಕಿಗೆ ಬರುತ್ತಿದೆ.
ಹೌದು ಜಿಲ್ಲೆಯಲ್ಲಿ ಒಟ್ಟು 100 ನಕಲಿ ಕ್ಲೀನಿಕ್ ಗಳಿದ್ದು ಸದ್ದಿಲ್ಲದೇ ರೋಗಿಗಳ ರಕ್ತ ಹೀರುತ್ತಿವೆ. ಮುಖ್ಯವಾಗಿ ಇಂತಹ ಕ್ಲೀನಿಕ್ ಗಳನ್ನು ಆರಂಭಿಸುವ ಸಂದರ್ಭದಲ್ಲಿ ಟ್ರೇಡ್ ಲೈಸನ್ಸ್ ಪಡೆಯುವ ಅಗತ್ಯವಿದೆ. ಸಂಬಂಧಪಟ್ಟಂತಹ ಮಹಾನಗರಪಾಲಿಕೆ, ಪುರಸಭೆ, ಪಟ್ಟಣ ಪಂಚಾಯಿತಿ, ನಗರಸಭೆ ವೈದ್ಯರುಗಳಿಗೆ ಕ್ಲಿನಿಕ್ ಆರಂಭಿಸಲು ಲೈಸೆನ್ಸ್ ನೀಡುತ್ತವೆ. ಈ ವೇಳೆ ವೈದ್ಯರುಗಳು ತಮ್ಮ ಎಂಬಿಬಿಎಸ್ ಪದವಿಯ ಸರ್ಟಿಫಿಕೇಟ್ಗಳನ್ನು ಹಾಜರುಪಡಿಸಿ ಕ್ಲಿನಿಕ್ ಆರಂಭಿಸಲು ಅನುಮತಿ ಪಡೆಯುತ್ತಾರೆ. ಆದರೆ ನಕಲಿ ಡಾಕ್ಟರ್ ಗಳು ಮಾತ್ರ ಸಂಬಂಧಪಟ್ಟಂತಹ ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆಯುವ ಸಂದರ್ಭದಲ್ಲಿ ದಿನಸಿ ಅಂಗಡಿ ಆರಂಭಿಸುವ ಸಲುವಾಗಿ ಲೈಸೆನ್ಸ್ ಪಡೆದಿರುತ್ತಾರೆ. ಆನಂತರದಲ್ಲಿ ಸ್ಥಳೀಯ ಸಂಸ್ಥೆ ಅಧಿಕಾರಿಗಳಾಗಲಿ ಯಾರು ಕೂಡ ಸ್ಥಳಕ್ಕೆ ತೆರಳಿ ಅಲ್ಲಿ ಯಾವ ರೀತಿಯಾದ ವಹಿವಾಟು ನಡೆಯುತ್ತಿದೆ ಎಂಬುದನ್ನು ಪರಿಶೀಲಿಸುವುದಿಲ್ಲ. ಹೀಗಾಗಿ ನಕಲಿ ಡಾಕ್ಟರ್ ಗಳಿಗೆ ನಕಲಿ ಕ್ಲೀನಿಕ್ ಗಳನ್ನು ಆರಂಭಿಸಲು ಇದೊಂದು ವರದಾನವಾಗಿ ಪರಿಣಮಿಸಿದೆ.
ಬೈಟ್: ಚಂದ್ರಿಕಾ, ಜಿಲ್ಲಾ ಆರೋಗ್ಯಾಧಿಕಾರಿ.....
ಇನ್ನು ಒಂದು ಹಂತದಲ್ಲಿ ನಾವು ಗಮನಿಸಬೇಕಾದ ಅಂಶ ಎಂದರೆ ಈ ನಕಲಿ ಕ್ಲೀನಿಕ್ ಗಳಲ್ಲಿ ರೋಗಿಗಳಿಗೆ ನೀಡಲಾಗುವ ಔಷಧಿಗಳು ಎಲ್ಲಿಂದ ಸರಬರಾಜಾಗುತ್ತದೆ ಎಂಬುದು ಯಕ್ಷಪ್ರಶ್ನೆ ಯಾಗಿರುತ್ತದೆ. ಡ್ರಗ್ ಕಂಟ್ರೋಲರ್ ಅವರುಗಳು ಅಪಾರ ಪ್ರಮಾಣದ ಔಷಧಿ ಸರಬರಾಜು ಮಾಡುವಂತಹ ಏಜೆನ್ಸಿಗಳು ಹಾಗೂ ಮೆಡಿಕಲ್ ಸ್ಟೋರ್ ಗಳನ್ನು ಪರಿಶೀಲಿಸಬೇಕು. ಹೀಗಾದಾಗ ಮಾತ್ರ ನಕಲಿ ಕ್ಲೀನಿಕ್ ಗಳ ಹಾವಳಿಯನ್ನು ತಪ್ಪಿಸಲು ಸಾಧ್ಯವಾಗಲಿದೆ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಅಧಿಕಾರಿ.
ಬೈಟ್: ಚಂದ್ರಿಕಾ, ಜಿಲ್ಲಾ ಆರೋಗ್ಯಾಧಿಕಾರಿ.....
ಒಟ್ಟಾರೆ ತುಮಕೂರು ಜಿಲ್ಲೆಯಲ್ಲಿ ನಕಲಿ ಕ್ಲಿನಿಕ್ ಗಳ ಹಾವಳಿಗೆ ಕಡಿವಾಣ ಹಾಕಲು ಸ್ಥಳೀಯ ಸಂಸ್ಥೆಗಳು ಸೇರಿದಂತೆ ಎಲ್ಲರ ಸಾಮೂಹಿಕ ಜವಾಬ್ದಾರಿ ಅಡಗಿದೆ ಎಂಬುದು ಹೇಳಬಹುದಾಗಿದೆ. ಇನ್ನು ಮುಂದಾದರೂ ಹೊಣೆಗಾರರು ಇತ್ತ ಗಮನಹರಿಸಿ ನಕಲಿ ಕ್ಲಿನಿಕ್ ಗಳನ್ನು ಬಂದ್ ಮಾಡಿಸುವ ಮೂಲಕ ಮುಗ್ಧ ಜನರ ಆರೋಗ್ಯವನ್ನು ಕಾಪಾಡಬೇಕಿದೆ ಎಂದೇ ಹೇಳಬಹುದಾಗಿದೆ.

Body:ತುಮಕೂರು

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.