ತುಮಕೂರು: ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಅವರದು ಸಾರ್ಥಕ ಹಾಗೂ ತುಂಬು ಜೀವನ. ಅವರಿಲ್ಲ ಎಂದು ಶೋಕಿಸಬೇಕಿಲ್ಲ. ನಮ್ಮೊಟ್ಟಿಗೆ ಚರ್ಚೆಗೆ, ಮಾರ್ಗದರ್ಶನಕ್ಕೆ ಅವರಿಲ್ಲವೆಂಬ ದುಃಖವಿದೆ ಎಂದು ಚಿಮೂ ಅವರ ಶಿಷ್ಯ ಡಾ.ಎಸ್.ಡಿ ಪದ್ಮಪ್ರಸಾದ್ ಬೇಸರ ವ್ಯಕ್ತಪಡಿಸಿದರು.
ಚಿಮೂ ಅವರ ಶಿಷ್ಯವೃಂದ ಹಾಗೂ ಅಭಿಮಾನಿ ಬಳಗದಿಂದ ನಗರದ ಜಯದೇವಿ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ಹಮ್ಮಿಕೊಂಡ ನುಡಿನಮನ ಕಾರ್ಯಕ್ರಮವನ್ನು ಅವರು ಮಾತನಾಡಿದರು.
ಕನ್ನಡ ಮತ್ತು ಸತ್ಯ ಚಿಮೂ ಅವರಿಗೆ ಅತ್ಯಂತ ಆಪ್ತವಾದವುಗಳು. ಅವರ ಕೃತಿ, ಚರ್ಚೆಗಳಿಂದ ಅನೇಕ ವಿಷಯಗಳ ಒಳನೋಟಗಳನ್ನು ಕಂಡುಕೊಂಡಿದ್ದೇವೆ. ಸಂಶೋಧಕರ ಸಂಶೋದಕ ಚಿಮೂ ಗುರುಗಳು ಎಂದು ಹೇಳಿದರು.
ಸಿದ್ದಗಂಗಾ ಸಂಸ್ಥೆಯ ಕಾರ್ಯದರ್ಶಿ ಟಿ.ಕೆ ನಂಜುಂಡಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು.
ಪ್ರೊ. ಎಂ.ಸಿ.ರುದ್ರರಾಧ್ಯ, ಪ್ರೊ.ಡಿ.ಚಂದ್ರಪ್ಪ, ಜಿ.ಎಸ್.ಸೋಮಶೇಖರ್, ಕೆ.ಎಸ್.ಸಿದ್ದಲಿಂಗಪ್ಪ, ಕೆ.ರಾಮಕೃಷ್ಣಪ್ಪ, ಶೈಲಾ ನಾಗರಾಜ್, ಸೌಮ್ಯ ಇದ್ದರು.