ETV Bharat / state

ನಿಜಾಮುದ್ದೀನ್‌ ಸಮಾವೇಶದಲ್ಲಿ ಭಾಗವಹಿಸಿದ್ದ ತುಮಕೂರಿನ 10 ಮಂದಿಗೆ ಕ್ವಾರಂಟೈನ್​.. - tumkur corona related news

ಈ ಬಗ್ಗೆ ದೆಹಲಿಗೆ ತೆರಳಿದ್ದ ವ್ಯಕ್ತಿಯೊಬ್ಬರು ‘ಈಟಿವಿ ಭಾರತ್​'ಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ 10 ಮಂದಿಯ ರಕ್ತ ಮತ್ತು ಕಫದ ಪರೀಕ್ಷೆ ನಡೆಸಲಾಗಿದೆ. ಫಲಿತಾಂಶ ನೆಗೆಟಿವ್ ಬಂದಿದೆ. 3 ದಿನಗಳ ಕಾಲ ದೆಹಲಿಯಲ್ಲಿ ನಡೆದ ಸಭೆಯಲ್ಲಿ 2,000 ಜನ ಭಾಗವಹಿಸಿದ್ದರು ಎಂದು ತಿಳಿಸಿದ್ದಾರೆ.

quarantine
ಕ್ವಾರಂಟೈನ್​
author img

By

Published : Apr 1, 2020, 10:51 AM IST

ತುಮಕೂರು : ದೆಹಲಿಯಲ್ಲಿ ಇತ್ತೀಚೆಗೆ ನಡೆದ ಮುಸ್ಲಿಂ ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿದ್ದ ತುಮಕೂರಿನ 10 ಮಂದಿಯನ್ನು ನಗರದ ಒಂದೆಡೆ ಕ್ವಾರಂಟೈನ್‌ನಲ್ಲಿಡಲಾಗಿದೆ. ಎಲ್ಲರನ್ನೂ ಒಂದು ದೊಡ್ಡ ಕೋಣೆಯಲ್ಲಿರಿಸಿ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ. 13 ಮಂದಿ ಒಟ್ಟಿಗೆ ತುಮಕೂರು ರೈಲ್ವೆ ನಿಲ್ದಾಣದಿಂದ ದೆಹಲಿಗೆ ತೆರಳಿದ್ದರು. ಅಲ್ಲಿ ಮೂರು ದಿನಗಳ ಕಾಲ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಅದರಲ್ಲಿ ತುಮಕೂರು ನಗರದ 10 ಮಂದಿ ಹಾಗೂ ನಾಗಮಂಗಲ ಮತ್ತು ತಿಪಟೂರು ಪಟ್ಟಣದ ತಲಾ ಒಬ್ಬರಿದ್ದಾರೆ.

ಈ ಬಗ್ಗೆ ದೆಹಲಿಗೆ ತೆರಳಿದ್ದ ವ್ಯಕ್ತಿಯೊಬ್ಬರು ‘ಈಟಿವಿ ಭಾರತ್​'ಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ 10 ಮಂದಿಯ ರಕ್ತ ಮತ್ತು ಕಫದ ಪರೀಕ್ಷೆ ನಡೆಸಲಾಗಿದೆ. ಫಲಿತಾಂಶ ನೆಗೆಟಿವ್ ಬಂದಿದೆ. 3 ದಿನಗಳ ಕಾಲ ದೆಹಲಿಯಲ್ಲಿ ನಡೆದ ಸಭೆಯಲ್ಲಿ 2,000 ಜನ ಭಾಗವಹಿಸಿದ್ದರು ಎಂದು ತಿಳಿಸಿದ್ದಾರೆ.

ದೆಹಲಿಯಲ್ಲಿದ್ದಾಗ ಯಾರೂ ಅನಾರೋಗ್ಯ ಪೀಡಿತರಾಗಿರೋದು ಕಂಡು ಬಂದಿರಲಿಲ್ಲ. ನಾವೆಲ್ಲರೂ ದೆಹಲಿಗೆ ಹೋಗುವಾಗ ಮತ್ತು ವಾಪಸ್ ಬರುವಾಗ ಕೂಡ ಆರಾಮವಾಗಿದ್ದೆವು. ಅಲ್ಲದೇ ಕೊರೊನಾ ಸೋಂಕಿನಿಂದ ಮೃತಪಟ್ಟಿರುವ ಶಿರಾದ ವೃದ್ಧರು ಕೂಡ ವಾಪಸ್ ಬರುವ ಸಂದರ್ಭದಲ್ಲಿ ಆರೋಗ್ಯವಾಗಿದ್ದರು ಎಂದು ತಿಳಿಸಿದ್ದಾರೆ. ಇನ್ನೊಂದೆಡೆ 10 ಮಂದಿಯನ್ನು ತುಮಕೂರು ನಗರದಲ್ಲಿ ಒಂದೆಡೆ ಕ್ವಾರಂಟೈನ್ ಮಾಡಿರುವ ಬಗ್ಗೆ ಜಿಲ್ಲಾಡಳಿತ ಯಾವುದೇ ರೀತಿಯಲ್ಲಿಯೂ ಈವರೆಗೆ ಸ್ಪಷ್ಟನೆ ನೀಡಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.