ಭಟ್ಕಳ: ಅಕ್ರಮವಾಗಿ ಸಾಗುವಾನಿ ತುಂಡುಗಳನ್ನು ಸಾಗಿಸುತ್ತಿದ್ದ ವಾಹನವನ್ನು ವಶಕ್ಕೆ ಪಡೆದ ಘಟನೆ ಕೊಪ್ಪ ಪಂಚಾಯತ ವ್ಯಾಪ್ತಿಯ ಉತ್ತರಕೊಪ್ಪ ಅತ್ತಿಬಾರದ ಹೆಗ್ಗದ್ದೆಯಲ್ಲಿ ನಡೆದಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.
ಅರಣ್ಯ ಇಲಾಖೆಯ ಹೊನ್ನಾವರ ವಿಭಾಗದ ಭಟ್ಕಳ ವಲಯದ ಸಿಬ್ಬಂದಿ ರಾತ್ರಿ ಗಸ್ತು ತಿರುಗುತ್ತಿರುವಾಗ ಉತ್ತರಕೊಪ್ಪ ರಸ್ತೆ ಹತ್ತಿರ ಅತ್ತಿಬಾರ ಎಂಬಲ್ಲಿ ಕಳ್ಳರು ಅಕ್ರಮವಾಗಿ 15,000 ರೂ. ಬೆಲೆಬಾಳುವ ಸಾಗುವಾನಿ ಮರ ಕಡಿದು ಸಾಗಿಸುತ್ತಿದ್ದರು.
ಆದರೆ, ಕಾರು ಪಂಚರ್ ಆಗಿದ್ದ ಕಾರಣ ವಾಹನ ಅಲ್ಲಿಯೇ ಬಿಟ್ಟಿದ್ದರು. ಇದನ್ನು ಕಂಡ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಗುರುವಾರದಂದು ಮುಂಜಾನೆ ಸ್ಥಳಕ್ಕೆ ಬಂದ ಪೊಲೀಸರು ಸ್ಕಾರ್ಪಿಯೋ ಕಾರು ಮತ್ತು ಅಕ್ರಮವಾಗಿ ವಾಹನದಲ್ಲಿ ಸಾಗಿಸುತ್ತಿದ್ದ 3 ಸಾಗುವಾನಿ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.