ETV Bharat / state

ಕೊರೊನಾ ನಡುವೆ ಕುವೆಂಪು ವಿವಿಯ 30ನೇ ಘಟಿಕೋತ್ಸವ.. ವಿದ್ಯಾರ್ಥಿಗಳ ಚಿನ್ನದ ಬೇಟೆ - ಕುವೆಂಪು ವಿವಿ ಕುಲಪತಿ

ಕೊರೊನಾ ಭೀತಿಯ ನಡುವೆ ಕುವೆಂಪು ವಿವಿಯ 30ನೇ ಘಟಿಕೋತ್ಸವ ಸಮಾರಂಭ ಯಶಸ್ವಿಯಾಗಿ ಪೂರ್ಣಗೊಂಡಿದೆ. ಅಲ್ಲದೆ ಈ ವರ್ಷದಲ್ಲಿ 119 ಸ್ವರ್ಣ ಪದಕಗಳನ್ನು ವಿದ್ಯಾರ್ಥಿಗಳು ಪಡೆದಿದ್ದು, 194 ಸಂಶೋದನಾ ವಿದ್ಯಾರ್ಥಿಗಳು ಪಿಹೆಚ್​​​​​ಡಿ ಪದವಿ ಪಡೆದಿದ್ದಾರೆ..

The 30th convocation of Kuvempu  VV held online
ಕೊರೊನಾ ನಡುವೆ ಕುವೆಂಪು ವಿವಿಯ 30ನೇ ಘಟಿಕೋತ್ಸವ...ವಿದ್ಯಾರ್ಥಿಗಳ ಚಿನ್ನದ ಬೇಟೆ
author img

By

Published : Jul 29, 2020, 10:17 PM IST

ಶಿವಮೊಗ್ಗ : ಸಹ್ಯಾದ್ರಿಯ ಆವರಣದಲ್ಲಿಂದು ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕ್ಯಾಂಪಸ್ ಆವರಣದಲ್ಲಿ ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳ ಮೊಗದಲ್ಲಿ ಸಂತಸ ಮನೆ ಮಾಡಿತ್ತು. ಮನೆಯ ಬಡತನದ ನಡುವೆಯೂ ಕಷ್ಟಪಟ್ಟು ಓದಿದ ಹಲವು ವಿದ್ಯಾರ್ಥಿಗಳು ಚಿನ್ನದ ಪದಕವನ್ನು ಗಳಿಸಿಕೊಂಡಿದ್ದಾರೆ.

ಇಂತಹ ಸಂಭ್ರಮಕ್ಕೆ ಕಾರಣವಾಗಿದ್ದು ಕುವೆಂಪು ವಿಶ್ವವಿದ್ಯಾನಿಲಯದ 30ನೇ ಘಟಿಕೋತ್ಸವ ಕಾರ್ಯಕ್ರಮ. ಕೊರೊನಾದ ಕರಿನೆರಳಿನಲ್ಲಿ ಶಿವಮೊಗ್ಗದ ಕುವೆಂಪು ವಿವಿಯ ಘಟಿಕೋತ್ಸವ ವಿಭಿನ್ನವಾಗಿ ನಡೆದಿದೆ.

ಘಟಿಕೋತ್ಸವ ಭಾಷಣ, ಉನ್ನತ ಶಿಕ್ಷಣ ಸಚಿವರ ಭಾಷಣ ಸೇರಿ ಎಲ್ಲವೂ ಆನ್​ಲೈನ್ ಮೂಲಕವೇ ನಡೆದಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಯ್ಯೂಟೂಬ್ ಲೈವ್ ಲಿಂಕ್ ಕಳುಹಿಸಿ, ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು.

ಕೊರೊನಾ ನಡುವೆ ಕುವೆಂಪು ವಿವಿಯ 30ನೇ ಘಟಿಕೋತ್ಸವ..

ಕುವೆಂಪು ವಿವಿಯ 30ನೇ ಘಟಿಕೋತ್ಸವದಲ್ಲಿ ಒಟ್ಟು 119 ಸ್ವರ್ಣ ಪದಕಗಳಿದ್ದು, ಅವುಗಳನ್ನು 67 ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ. ಅದರಲ್ಲೂ ಅತಿ ಹೆಚ್ಚು ಅಂದರೆ 54 ವಿದ್ಯಾರ್ಥಿನಿಯರೇ ಸ್ವರ್ಣ ಪದಕಗಳನ್ನು ಗಳಿಸಿರುವುದು ನಿಜಕ್ಕೂ ವಿಶೇಷ. ಇನ್ನೂ ಈ ಬಾರಿ ಘಟಿಕೋತ್ಸವದಲ್ಲಿ 4 ಪುರುಷರು,15 ಮಹಿಳೆಯರು ಸೇರಿ 19 ವಿದ್ಯಾರ್ಥಿಗಳು 24 ನಗದು ಬಹುಮಾನಗಳನ್ನು ಪಡೆದಿದ್ದು, ಇದರಲ್ಲಿಯೂ ಮಹಿಳೆಯರೇ ಮೇಲುಗೈ ಸಾಧಿಸಿದ್ದಾರೆ.

ಅದರಂತೆ, ಕನ್ನಡ ಅಧ್ಯಯನ ಎಂಎ ವಿಭಾಗದದಲ್ಲಿ ಹೆಚ್.ರಂಗನಾಥ್ ಎಂಬ ವಿದ್ಯಾರ್ಥಿ 10 ಸ್ವರ್ಣ ಪದಕಗಳನ್ನು ಬಾಚಿಕೊಂಡಿದ್ದು, ಇದರ ಜೊತೆಗೆ ಮೂರು ನಗದು ಬಹುಮಾನಗಳನ್ನು ಪಡೆಯುವ ಮೂಲಕ ಅತಿ ಹೆಚ್ಚು ಪದಕ ಪಡೆದ ವಿದ್ಯಾರ್ಥಿಯಾಗಿದ್ದಾರೆ.

ಈ ಬಾರಿಯ ಘಟಿಕೋತ್ಸವದಲ್ಲಿ ಎಂ ಆರ್‌ ಸಂಚಿತ (ಎಂಎಸ್​ಸಿ ಜೈವಿಕ ತಂತ್ರಜ್ಞಾನ), ಬಿ ಬಿ ರುಕ್ಕಯ್ಯ (ಬಿಕಾಂ), ತಲಾ 5 ಸ್ವರ್ಣ ಪದಕಕ್ಕೆ ಭಾಜನರಾಗಿದ್ದಾರೆ. ಹೆಚ್ ವಾಣಿ(ಸಮಾಜ ಶಾಸ್ತ್ರ- ಎಂಎ) ಎನ್‌ ಜಿ ಪೂಜಾ (ಎಂಎಸ್​​ಸಿ- ಪರಿಸರ ವಿಜ್ಞಾನ), ಕೆ ವಿ ಅಮೃತ್‌ (ಎಂಬಿಎ) ಅವರು ತಲಾ 4 ಸ್ವರ್ಣ ಪದಕ ಗಳಿಸಿದ್ದಾರೆ.

ಸೀಮಾ ಎಸ್‌ ಡಿ (ಎಂಎಸ್​ಸಿ) ಗಣಿತಶಾಸ್ತ್ರದಲ್ಲಿ 3 ಪದಕ ಪಡೆದ್ರೆ, ಎಂಸಿಎ ವಿಭಾಗದಲ್ಲಿ ಕೆ ಆರ್ ಆಶ್ವಿನಿ 3 ಸ್ವರ್ಣ ಪದಕ, ಎಂಎಸ್​​​ಸಿ ರಸಾಯನ ಶಾಸ್ತ್ರ ವಿಭಾಗದಲ್ಲಿ ಬಿ ಎಂ ನವೀನ್‌, ಎಂಎ ಇತಿಹಾಸ ವಿಭಾಗದಲ್ಲಿ ಪಿ.ದೀಪ್ತಿ, ಎಂಎಸ್​ಸಿ ಸಸ್ಯಶಾಸ್ತ್ರ ವಿಭಾಗದಲ್ಲಿ ಶಾಶ್ವತಿ ಹೆಚ್ ಎಸ್, 3 ಸ್ವರ್ಣ ಪದಕ ಬಹುಮಾನ ಪಡೆದಿದ್ದಾರೆ.

ಇನ್ನೂ ಪಿಹೆಚ್‍ಡಿ ಪದವಿಯನ್ನು 194 ವಿದ್ಯಾರ್ಥಿಗಳು ಪಡೆದಿದ್ದು, ಇಲ್ಲಿ ಪುರುಷರೇ ಮೇಲುಗೈ ಸಾಧಿಸಿದ್ದಾರೆ. ಕಲಾ ವಿಭಾಗದಲ್ಲಿ 80, ವಾಣಿಜ್ಯ ನಿಕಾಯದಲ್ಲಿ 13, ಶಿಕ್ಷಣ ನಿಕಾಯದಲ್ಲಿ 5, ಕಾನೂನು ನಿಕಾಯದಲ್ಲಿ 1, ವಿಜ್ಞಾನ ನಿಕಾಯದಲ್ಲಿ 93 ವಿದ್ಯಾರ್ಥಿಗಳು ಸೇರಿ 194 ಜನರಿಗೆ ಪಿಹೆಚ್‍ಡಿ ಪದವಿ ನೀಡಲಾಗಿದೆ.

ಈ ಬಾರಿಯ ಘಟಿಕೋತ್ಸವ ಎಂದಿನಂತೆ ಇರದೇ ವಿಶೇಷವಾಗಿತ್ತು. ಕೊರೊನಾ ಭೀತಿಯ ನಡುವೆಯೇ ನಡೆದ ಈ ಘಟಿಕೋತ್ಸವ ಸಂಪೂರ್ಣವಾಗಿ ಆನ್​ಲೈನ್​ನಲ್ಲಿ ನಡೆದು ಸಮಾಪ್ತಿಯಾಯಿತು.

ಇದಲ್ಲದೆ ಕೇವಲ ಸ್ವರ್ಣ ಪದಕ ಪಡೆದ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಸಿಂಡಿಕೇಟ್ ಸದಸ್ಯರು ಹೀಗೆ ಎಲ್ಲರೂ ಸೇರಿ ಸುಮಾರು 100 ಮಂದಿಗೆ ಮಾತ್ರ ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗಿತ್ತಲ್ಲದೇ, ಸ್ವರ್ಣ ಪದಕ ಗಳಿಸಿದ ವಿದ್ಯಾರ್ಥಿಗಳ ಕೊರಳಿಗೂ ಸ್ವರ್ಣ ಪದಕಗಳನ್ನು ಹಾಕದೇ ಫೋಟೋ ಫ್ರೇಮ್ ವಿನ್ಯಾಸ ಮಾಡಿ ಪ್ರಧಾನ ಮಾಡಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.