ಶಿವಮೊಗ್ಗ : ಜಿಲ್ಲೆಯ ಗಡಿ ಭಾಗದ ಚೆಕ್ ಪೋಸ್ಟ್ಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಕೆ ಬಿ ಶಿವಕುಮಾರ್ ಹಾಗೂ ಎಸ್ಪಿ ಶಾಂತರಾಜು ಕಾರ್ಯವೈಖರಿಯ ಪರಿಶೀಲನೆ ನಡೆಸಿದರು.
ಶಿವಮೊಗ್ಗ ತಾಲೂಕಿಗೆ ದಾವಣಗೆರೆ ಜಿಲ್ಲೆಯಿಂದ ಸಂಪರ್ಕ ಕಲ್ಪಿಸುವ ಸುತ್ತು ಕೋಟೆ ಚೆಕ್‌ಪೋಸ್ಟ್, ಶಿಕಾರಿಪುರ ತಾಲೂಕಿನ ಜಕ್ಕನಹಳ್ಳಿ, ಕಿಟ್ಟದಹಳ್ಳಿ ಹಾಗೂ ಹಿರೇಕೆರೂರು ಗಡಿ ಭಾಗ ಮಾರವಳ್ಳಿ (ಮಾಸೂರು- ಗುಳೇದಹಳ್ಳಿ), ಶಿವಮೊಗ್ಗ ತಾಲೂಕಿನ ಮಡಿಕೆ ಚೀಲೂರು ಹಾಗೂ ಭದ್ರಾವತಿ ತಾಲೂಕಿನ ಕಾರೆಹಳ್ಳಿ ಚೆಕ್ ಪೋಸ್ಟ್ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಚೆಕ್‌ಪೋಸ್ಟ್ ಸಿಬ್ಬಂದಿಗೆ ಅಧಿಕಾರಿಗಳು ಹಣ್ಣು-ಹಂಪಲು, ನೀರು, ಬಿಸ್ಕೇಟ್ ವಿತರಿಸಿದರು. ಕೊರೊನಾ ವಿರುದ್ಧದ ಸಮರದಲ್ಲಿ ಸಿಬ್ಬಂದಿಯ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಜಿಲ್ಲಾ ಹೆಚ್ಚುವರಿ ರಕ್ಷಣಾಧಿಕಾರಿ ಶೇಖರ್ ಟೆಕ್ಕಣ್ಣನವರ್ ಈ ವೇಳೆ ಹಾಜರಿದ್ದರು.